ಕಾಂಗ್ರೆಸ್‌ನ ಮಹಿಳಾ ಸಬಲೀಕರಣ ಯೋಜನೆಗಳು ಗೊಂದಲದ ಗೂಡಾಗಿವೆ; ಬಿಜೆಪಿ ಟೀಕೆ

Date:

Advertisements

ಕಾಂಗ್ರೆಸ್ ಜಾರಿ ತರುವ ಮಹಿಳಾ ಸಬಲೀಕರಣ ಅಂಶಗಳು ಗೊಂದಲದ ಗೂಡಾದರೇ, ಬಿಜೆಪಿ ಜಾರಿಗೆ ತರುವ ಮಹಿಳಾ ಸಬಲೀಕರಣ ಅಂಶಗಳು, ಮಹಿಳೆಯರ ಮುಖದಲ್ಲಿ ನೆಮ್ಮದಿಯ ಮಂದಹಾಸವನ್ನು ಮೂಡಿಸುತ್ತದೆ ಎಂದು ಕಾಂಗ್ರೆಸ್‌ ಗ್ಯಾರಂಟಿಗಳನ್ನು ಬಿಜೆಪಿ ಟೀಕಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, “ಒಂದು ಸುಳ್ಳನ್ನು ನಿರಂತರವಾಗಿ ಹೇಳುತ್ತಾ, ಸತ್ಯವನ್ನು ಮರೆಮಾಚಿ, ಆ ಸುಳ್ಳನ್ನೇ ಸತ್ಯ ಎಂದು ನಿರೂಪಿಸುವುದು ಕಾಂಗ್ರೆಸ್‌ ಪಕ್ಷದ ಸಾಮಾನ್ಯ ಲಕ್ಷಣವಾಗಿದೆ” ಎಂದು ಕಿಡಿಕಾರಿದೆ.

“ಚುನಾವಣಾ ಅವಧಿಯಲ್ಲಿ ಬೆಲೆಯೇರಿಕೆಯ ಬಗ್ಗೆ ರಾಜ್ಯದ ಮಹಿಳೆಯರ ಹಾದಿ ತಪ್ಪಿಸಲು ಯತ್ನಿಸಿದ ಕಾಂಗ್ರೆಸ್, ಅಧಿಕಾರಕ್ಕೇರಿದ ದಿನದಿಂದ, ನಿತ್ಯವೂ ದಿನ ಬಳಕೆ ವಸ್ತುಗಳ ಬೆಲೆ ಏರಿಸುತ್ತಿದೆ” ಎಂದು ಆರೋಪಿಸಿದೆ.

Advertisements

“ಮೊದಲ ಕ್ಯಾಬಿನೆಟ್‌ನಲ್ಲಿಯೇ ನೀಡಬೇಕಾಗಿದ್ದ “ಗೃಹಲಕ್ಷ್ಮಿ” ಯೋಜನೆಯ ₹2000 ಇನ್ನೂ ಮಹಿಳೆಯರ ಅಕೌಂಟ್‌ಗಳಿಗೆ ಜಮೆಯಾಗಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ದಿನದಿಂದ ರಾಜ್ಯದಲ್ಲಿ ಉಂಟಾಗಿರುವ ಬೆಲೆಯೇರಿಕೆಯನ್ನು ಗಮನಿಸಿದರೆ, ಇವರು ನೀಡುವ ₹2000 ದಲ್ಲಿ ಬೇಕಾಗುವಷ್ಟು ದಿನಸಿ ಖರೀದಿಸಲು ಸಾಧ್ಯವಿಲ್ಲ” ಎಂದು ದೂರಿದೆ.

“ಮಹಿಳಾ ಸಬಲೀಕರಣದ ಅಂಶವನ್ನೇ ಕಾಂಗ್ರೆಸ್ ಬುಡಮೇಲು ಮಾಡಿದ್ದು, ಸರ್ವರ್ ಹ್ಯಾಕ್ ಆಗಿದೆ ಎಂಬ ಅಸಂಬದ್ಧ ಸುಳ್ಳುಗಳನ್ನು ಹೇಳುತ್ತಾ, ಕಾಲಹರಣ ಮಾಡುತ್ತಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳ ಕಾಲ ಹೊಗೆಯೊಂದಿಗೆ ಅಡುಗೆ ಮಾಡಿದ್ದ ಮಹಿಳೆಗೆ, ಉಜ್ವಲಾ ಯೋಜನೆಯ ಮೂಲಕ ಹೊಗೆ ಮುಕ್ತ ಅಡುಗೆ ಮನೆ ನೀಡಿದ್ದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ” ಎಂದು ಕೇಂದ್ರ ಸರ್ಕಾರದ ಉಜ್ವಲ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಸುದ್ದಿ ಓದಿದ್ದೀರಾ? ವಿಪಕ್ಷ ನಾಯಕನ ಆಯ್ಕೆ ಆಗದಿರಲು ಸಂತೋಷ್-ಬಿಎಸ್‌ವೈ ಆಂತರಿಕ ಯುದ್ಧ ಕಾರಣವೆ: ಕಾಂಗ್ರೆಸ್‌ ಪ್ರಶ್ನೆ

“ದಶಕಗಳ ಕಾಲ ನೀರಿಗಾಗಿ ಹವಣಿಸಿದ್ದ ಮಹಿಳೆಯರಿಗೆ, ಅವರ ಮನೆ ಬಾಗಿಲಿಗೆ ಜಲ ಜೀವನ್ ಮಿಷನ್ ಯೋಜನೆಯ ಮೂಲಕ ನಳದ ಸಂಪರ್ಕ ಒದಗಿಸಿದ್ದು ಮೋದಿಯವರ ಸರ್ಕಾರ” ಎಂದು ಕಾಂಗ್ರೆಸ್‌ಗೆ ಟ್ಯಾಂಗ್‌ ನೀಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X