ಮೈಸೂರು ಮೃಗಾಲಯದಲ್ಲಿ ಜನಿಸಿದ ಮೂರು ಸಿಂಹದ ಮರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ನಾಮಕರಣ ಮಾಡಲಿದ್ದಾರೆ. ಮೈಸೂರು ಮೃಗಾಲಯದಲ್ಲಿ ಪ್ರಸ್ತುತ ಐದು ವಯಸ್ಕ ಸಿಂಹಗಳಿವೆ. ಇದರಲ್ಲಿ ಎರಡು ಹೆಣ್ಣು, ಮೂರು ಗಂಡು ಸಿಂಹದ ಮರಿಗಳು ಸೇರಿವೆ. ಈ ಐದು ವಯಸ್ಕ ಸಿಂಹಗಳಲ್ಲಿ, ಎರಡು ಆಫ್ರಿಕನ್ ಸಿಂಹಗಳು, ಎರಡು ಏಷ್ಯಾಟಿಕ್ ಮತ್ತು ಒಂದು ಆಫ್ರೋ-ಏಷ್ಯಾಟಿಕ್ ಸಿಂಹದಮರಿ.
2021ರ ಡಿಸೆಂಬರ್‌ನಲ್ಲಿ ಛತ್ತೀಸ್ ಗಢದ ರಾಯ್‌ಪುರದ ನಂದನ್ ವನ್ ಜಂಗಲ್ ಸಫಾರಿಯಿಂದ ಪಡೆದ ಐದು ವರ್ಷದ ಸಿಂಹಿಣಿ ನಿರ್ಭಯಾ ಮತ್ತು 2019ರಲ್ಲಿ ಗುಜರಾತ್‌ನ ಸಕ್ಕರ್‌ಬಾಗ್ ಮೃಗಾಲಯದಿಂದ ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಡೆದ 6 ವರ್ಷದ ಸಿಂಹ(ರಾಜು) ಜೋಡಿಯಾಗಿದ್ದಾರೆ. ಜನಿಸಿದ ಮೂರು ಮರಿಗಳಲ್ಲಿ, ಎರಡು ಗಂಡು ಮತ್ತು ಒಂದು ಹೆಣ್ಣು. ಈ ಮರಿಗಳಿಗೆ ಒಂದು ವರ್ಷ ವಯಸ್ಸಾಗಿದೆ.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ರಾಜ್ ಕುಮಾರ್ ಉದ್ಯಾನಕ್ಕೆ ಹೊಸ ಮೆರುಗು
ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ ವಿ ರಂಗರಾವ್, ಬೆಂಗಳೂರಿನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ ಮಹೇಶ್ ಕುಮಾರ್ ಭಾಗವಹಿಸಲಿದ್ದಾರೆ.