ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 17ರಂದು ನಡೆದ ಆರ್‌ಸಿಬಿ-ಕೆಕೆಆರ್ ಪಂದ್ಯದ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಆರೋಪದ ಮೇಲೆ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ಪೊಲೀಸರನ್ನು ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕೆಲಸ ಮಾಡುವ ಕಾನ್‌ಸ್ಟೇಬಲ್ ವೆಂಕಟಗಿರಿ ಗೌಡ ಮತ್ತು ರವಿಚಂದ್ರ ಎಂದು ಹೆಸರಿಸಲಾಗಿದೆ. ಇವರ ಜೊತೆಗೆ, ಇನ್ನಿಬ್ಬರು ಆರೋಪಿಗಳಾದ ಶಂಕರ್ ಮತ್ತು ಸುರೇಶ್ ಎಂಬವರನ್ನು ಬಂಧಿಸಲಾಗಿದೆ.
ಪಂದ್ಯದ ದಿನ ಸಂಜೆ 4 ಗಂಟೆ ಸಮಯದಲ್ಲಿ ವಿಜಯನಗರದ ಪಾರ್ಕ್‌ನಲ್ಲಿ ಆರೋಪಿಯೊಬ್ಬ ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುತ್ತಿದ್ದ. ಆತನ್ನು ಗೋವಿಂದರಾಜ ನಗರ ಪೊಲೀಸರು ಬಂಧಿಸಿದ್ದರು. ಇದೇ ವೇಳೆ, 52 ಟಿಕೆಟ್‌ಗಳನ್ನೂ ವಶಕ್ಕೆ ಪಡೆಸಿದ್ದರು.
ಆರೋಪಿಯನ್ನು ವಿಚಾರಣೆ ಒಳಪಡಿಸಿದಾಗ, ‘ಇಬ್ಬರು ಪೊಲೀಸರು ತನಗೆ ಟಿಕೆಟ್ ಕೊಟ್ಟು, ಕಾಳಸಂತೆಯಲ್ಲಿ ಮಾರಾಟ ಮಾಡಲು ಸಹಾಯ ಮಾಡಿದ್ದರು. ಆ ಟಿಕೆಟ್‌ಗಳನ್ನು 5,000ರಿಂದ 6,500 ರೂ.ವರೆಗೆ ಮಾರಾಟ ಮಾಡುತ್ತಿದ್ದೆವು’ ಎಂದು ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿಯ ಹೇಳಿಕೆ ಆಧಾರದ ಮೇಲೆ ಇಬ್ಬರು ಪೊಲೀಸರು ಮತ್ತು ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.