ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಹೆಸರಿನಲ್ಲಿ ಮೋಸ ಹೋಗದಂತೆ ಜನತೆ ಜಾಗೃತಿರಾಗಿರಿ ಎಂದು ವಿಜಯಪು ಎಸ್‌ಪಿ ಆನಂದಕುಮಾರ ಹೇಳಿದರು.
ವಿಜಯಪುರ ನಗರದಲ್ಲಿ ಸುದ್ದಿ ಮಾಧ್ಯಮಗಳ ಮುಂದೆ ಮಾತನಾಡಿದ ಅವರು, “ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ನೌಕರಿ ಕೊಡಿಸುವ ವಂಚನೆ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯ ಲಾಂಛನ, ಫೋಟೊ, ಹೆಸರು ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಪತ್ರ ರೆಡಿ ಮಾಡುತ್ತಿದ್ದಾರೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಬೆಳ್ಳಿಹಬ್ಬ ಸಂಭ್ರಮ; ಜು.29, 30ರಂದು ದಲಿತ ಸಾಹಿತ್ಯ ಸಮ್ಮೇಳನ
“ಸರ್ಕಾರಿ ನೌಕರಿ ಹೆಸರಿನಲ್ಲಿ ಜನತೆ ಮೋಸ ಹೋಗಬಾರದು. ಅದಕ್ಕಾಗಿ ಜನತೆ ಎಚ್ಚರಿಕೆ ವಹಿಸಬೇಕು. ಯಾವುದೇ ಅಪರಿಚಿತ ವ್ಯಕ್ತಿಗಳು ಅಕ್ಕ ಮಹಾದೇವಿ ವಿವಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಣ ಕೇಳಲು ಬಂದರೆ ಯಾರೂ ಮೋಸ ಹೋಗಬಾರದು. ಇಂತಹ ಪ್ರಕರಣ ಬೆಳಕಿಗೆ ಬಂದರೆ ಸಮೀಪದ ಪೊಲೀಸ್ ಠಾಣೆ ಅಥವಾ 112 ಸಂಖ್ಯೆಗೆ ಕರೆ ಮಾಡಿ ದೂರು ನೀಡಬೇಕು” ಎಂದು ಎಸ್‌ಪಿ ಆನಂದಕುಮಾರ ಮನವಿ ಮಾಡಿದರು.