ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 24 ರೂ.ಕಡಿಮೆ ಮಾಡಿದೆ. ಬೆಲೆ ಕಡಿತದ ಬಳಿಕ ಸಿಲಿಂಡರ್ ಬೆಲೆ 1,723ರೂ.ಆಗಿದೆ. ಪರಿಷ್ಕ್ರತ ದರ ಜೂನ್ 1ರಿಂದಲೇ ಜಾರಿಗೆ ಬರಲಿದೆ.
ಏಪ್ರಿಲ್ 1ರಂದು ವಾಣಿಜ್ಯ ಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 41ರೂ.ಕಡಿತ ಮಾಡಲಾಗಿತ್ತು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಮತ್ತು ಸಮಗ್ರ ಮಾರುಕಟ್ಟೆ ಸ್ಥಿತಿ ಆಧರಿಸಿ ತೈಲ ಕಂಪೆನಿಗಳು ಬೆಲೆಯನ್ನು ಪರಿಷ್ಕರಿಸಿದೆ. ಆದರೆ, ಗೃಹ ಬಳಕೆ ಅಡುಗೆ ಅನಿಲ ಬೆಲೆಯಲ್ಲಿ ಯಾವುದೇ ಬದಲಾವಣೆಯಿಲ್ಲ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಡಬಲ್ ಇಂಜಿನ್ ಸರ್ಕಾರದಲ್ಲೂ ಬಿಹಾರ ಬಸವಳಿದಿದೆ
ಸ್ಥಳೀಯ ತೆರಿಗೆಗಳು ಹಾಗೂ ಸಾಗಾಣಿಕೆ ವೆಚ್ಚವನ್ನು ಆಧರಿಸಿ, ರಾಜ್ಯದಿಂದ ರಾಜ್ಯಕ್ಕೆ ಅನಿಲ ಸಿಲಿಂಡರ್‌ಗಳ ದರದಲ್ಲಿ ವ್ಯತ್ಯಯವಾಗುತ್ತದೆ. ದೇಶದಲ್ಲಿ ಶೇ. 90 ರಷ್ಟು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಗೃಹೋಪಯೋಗಕ್ಕೆ ಬಳಸಲಾಗುತ್ತಿದ್ದು, ಶೇ. 10ರಷ್ಟು ಅನಿಲವನ್ನು ಮಾತ್ರ ವಾಣಿಜ್ಯ, ಕೈಗಾರಿಕೆ ಹಾಗೂ ವಾಹನಗಳಿಗಾಗಿ ಬಳಸಲಾಗುತ್ತಿದೆ.
ದೆಹಲಿಯಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ಹಿಂದಿನ 1,747.50 ರೂ.ಗಳಿಂದ 1,723.50 ರೂ.ಗಳಾಗಲಿವೆ. ಮುಂಬೈನಲ್ಲಿ ಬೆಲೆಯನ್ನು 1,674.50 ರೂ.ಗಳಿಗೆ ಇಳಿಸಲಾಗಿದೆ. ಕೋಲ್ಕತ್ತಾದಲ್ಲಿ ಈಗ ಬೆಲೆ 1,826 ರೂ.ಗಳಾಗಿದ್ದರೆ, ಚೆನ್ನೈನಲ್ಲಿ ಅದು 1,881 ರೂ.ಗಳಿಗೆ ಇಳಿದಿದೆ.
ಸತತ ಮೂರನೇ ಬಾರಿಗೆ ಅನಿಲ ಬೆಲೆ ಇಳಿಕೆಯಾಗಿದೆ. ಇದಕ್ಕೂ ಮುನ್ನ ಮೇ 1 ರಂದು ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 14.50 ರೂ.ಗಳಷ್ಟು ಕಡಿಮೆ ಮಾಡಿದ್ದವು. ಈ ಕಡಿತದ ನಂತರ, ಎಲ್‌ಪಿಜಿ ಬೆಲೆ 1,747.50 ರೂ.ಗಳಷ್ಟಿತ್ತು.