ರಾಯಚೂರು |ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಏರ್ ಬ್ಲಾಸ್ಟ್ ; ಓರ್ವ ಕಾರ್ಮಿಕ ಸಾವು,ಮತ್ತೊಬ್ಬ ಗಂಭೀರ ಗಾಯ

Date:

Advertisements

ಲಿಂಗಸೂಗೂರು ತಾಲ್ಲೂಕು ಹಟ್ಟಿ ಚಿನ್ನದ ಗಣಿ ಸೆಂಟ್ರಲ್ ಶಾಪ್ ನ 28 ಲೆವಲ್ ( ಅಡಿಯಲ್ಲಿ) ಏರ್ ಬ್ಲಾಸ್ಟ್ ಆಗಿ ಕಲ್ಲು ಅದಿರು ಕುಸಿದುಬಿದ್ದು ಇಬ್ಬರು ಕಾರ್ಮಿಕ ಸಿಲುಕಿದ್ದು ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಶರಣಬಸವ ವೀರಾಪುರ (35) ಸಾವನ್ನಪ್ಪಿದ ಕಾರ್ಮಿಕ ಎಂದು ಹೇಳಲಾಗಿದೆ.ಮಣ್ಣಿನಲ್ಲಿ ಇನ್ನೊಬ್ಬ ಸಿಲುಕಿ ಗಂಭೀರ ಗಾಯಗೊಂಡ ನಿರೂಪಾದಿ ಪಾಮನಕಲ್ಲೂರ ನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಬೆಂಗಳೂರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸುದ್ದಿ ಓದಿದ್ದೀರಾ? ರಾಯಚೂರು | ಸ್ವಚ್ಚತಾ ಅಭಿಯಾನಕ್ಕೆ, ಸಾರ್ವಜನಿಕರ ಸಹಕಾರದಿಂದ ನಗರ ಸ್ವಚ್ಛವಾಗಿರುತ್ತದೆ ; ಜಯಣ್ಣ

ಕಲ್ಲು ಅದಿರು ಕುಸಿದು ಬಿದ್ದು ಸಿಲುಕಿರುವ ಮೃತ ದೇಹವನ್ನು ಹೊರ ತರಲು ಕಾರ್ಯಾಚರಣೆ ಮುಂದುವರೆದಿದೆ ಎಂದು ಹೇಳಲಾಗಿದೆ.ಕಳೆದ ವರ್ಷ ಚಿನ್ನದ ಗಣಿ ಕಂಪನಿಯ ಆವರಣದಲ್ಲೇ ಇರುವ ಮಲ್ಲಪ್ಪ ಶಾಫ್ಟ್‌ನ ಭೂಮಿಯ ಕೆಳಮೈ ವಿಭಾಗದಲ್ಲಿ ಬೆಳಗಿನ ಜಾವ 3.30ಕ್ಕೆ ಭೂಕುಸಿತವಾಗಿ ಒಬ್ಬ ಕಾರ್ಮಿಕ ಮೃತಪಟ್ಟು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು.ಪ್ರತಿ ವರ್ಷ ಕಂಪನಿಯಲ್ಲಿ ದುಡಿಯುವ ಕಾರ್ಮಿಕರು ಸಾವು ನೋವುಗಳು ಸಂಭವಿಸಿದರೂ ಕಂಪನಿ ಆಡಳಿತ ಜಾಗೃತ ವಹಿಸುತ್ತಿಲ್ಲ.ಕಾರ್ಮಿಕರಿಗೆ ಯಾವುದೇ ರಕ್ಷಾ ಕವಚಗಳು ಇಲ್ಲದಾಗಿದೆ.ಕಾರ್ಮಿಕನ ಸಾವಿಗೆ ಕಂಪನಿಯ ಆಡಳಿತ ನಿರ್ಲಕ್ಷ್ಯವೇ ಕಾರಣವೆಂದು ಕಂಪನಿ ಕಾರ್ಮಿಕ ಮಾಹಿತಿ ನೀಡಿದರು.

1000129458

ಮೃತಪಟ್ಟ ಕಾರ್ಮಿಕ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ರೈತರ ಪರ ಎಐಕೆಕೆಎಂಎಸ್,ಎಸ್‌ಯುಸಿಐ(ಸಿ) ಬೃಹತ್ ಪ್ರತಿಭಟನೆ

ಜಿಲ್ಲೆಯಾದ್ಯಂತ ಬಂದ ನಿರಂತರ ಮಳೆ ಮತ್ತು ಪ್ರವಾಹದಿಂದ ಅಪಾರ ಬೆಳೆ ನಷ್ಟ,...

ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ಹುಲಿ ಸಿಂಹಧಾಮದಲ್ಲಿ 6 ಹೊಸ ಪ್ರಾಣಿಗಳು

ಶಿವಮೊಗ್ಗ, ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಸದಸ್ಯರ ಆಗಮನವಾಗಿದೆ....

ಶಿವಮೊಗ್ಗ | ಗೋಡೌನ್‌ನ ಬೀಗ ಒಡೆದು 8 ಲಕ್ಷ ಮೌಲ್ಯದ ಅಡಿಕೆ ಕಳ್ಳತನ

ಶಿವಮೊಗ್ಗ, ಉದ್ಯಮಿಯೊಬ್ಬರಿಗೆ ಸೇರಿದ ಗೋದಾಮಿನ ಬೀಗವನ್ನು ಹೊಡೆದು ಕಳ್ಳರು ಸುಮಾರು ...

Download Eedina App Android / iOS

X