“ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತೆ ‘ತಮಿಳು ಭಾಷೆಯಿಂದ ಕನ್ನಡ ಭಾಷೆಯು ಉಗಮವಾಗಿದೆ’ ಎಂದು ಹೇಳಿಕೆ ನೀಡಿದ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್ ಈ ಕೂಡಲೇ ಕರ್ನಾಟಕದ ಜನತೆಗೆ ಕ್ಷಮೆಯಾಚಿಸಬೇಕು” ಎಂದು ಕರವೇ ಎಚ್ ಅಬ್ಬಿಗೇರಿ ಆಗ್ರಹಿಸಿದರು.
ಗದಗ ಪಟ್ಟಣದ ಟಿಪ್ಪು ವೃತ್ತದಲ್ಲಿ ಕಮಲ್ ಹಾಸನ್ ಅವರ ಹೇಳಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಹಣಮಂತಪ್ಪ ಎಚ್ ಅಬ್ಬಿಗೇರಿ ನೇತೃತ್ವದಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ ಪ್ರತಿಭಟನೆ ನಡೆಸಿ ಮಾತನಾಡಿದರು.
“ಥಗ್ ಲೈಫ್ ಚಲನಚಿತ್ರವನ್ನು ಕರ್ನಾಟಕ ರಾಜ್ಯಾದಲ್ಲಿ ಬಿಡುಗಡೆ ಮಾಡಬಾರದು. ಕರ್ನಾಟಕ ವಾಣಿಜ್ಯ ಚಿತ್ರಮಂಡಳಿಗೆ ಒತ್ತಾಯಿಸುತ್ತೇವೆ. ಒಂದು ವೇಳೆ ಗದಗ ಜಿಲ್ಲೆಯಲ್ಲಿ ಈ ಚಿತ್ರ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ” ಎಂದು ಎಚ್ಚರಿಕೆಯನ್ನು ನೀಡಿದರು.
“ಕನ್ನಡ ಭಾಷೆ ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಯಾಗಿದೆ. ಕನ್ನಡ ಭಾಷೆಯಲ್ಲಿ ಅನೇಕ ಪ್ರಸಿದ್ಧ ಶರಣರು, ಸಂತರು, ದಾರ್ಶನಿಕರು, ರಾಜ ಮಹಾರಾಜರು, ಕವಿಗಳು, ಲೇಖಕರು, ಇತಿಹಾಸಕರರ ದೇಶದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಕನ್ನಡ ಅನೇಕ ಕಲಾವಿದರು ಸಹ ದೇಶದಲ್ಲಿ ತಮ್ಮದೇ ಆದ ಪ್ರತಿಭೆಯನ್ನು ತೋರಿಸಿದ್ದಾರೆ. ಕನ್ನಡಕ್ಕೆ ಭಾರತ ದೇಶದಲ್ಲಿಯೇ ಅತಿ ಹೆಚ್ಚು ಎಂಟು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಇಂತಹ ಶ್ರೀಮಂತ ಭಾಷೆಯನ್ನು ಅವಮಾನಿಸಿರುವ ಕಮಲ್ ಹಾಸನ್ ಅವರ ಹೇಳಿಕೆ ಅತ್ಯಂತ ಕೀಳುಮಟ್ಟದ್ದಾಗಿದೆ. ಈ ಕೂಡಲೇ ಕನ್ನಡಿಗರ ಕ್ಷಮೆ ಯಾಚಿಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನಾನು ಸೌಮ್ಯ ವ್ಯಕ್ತಿಯಾಗಿದ್ದರೂ ನನ್ನೊಳಗೆ ಕ್ರಾಂತಿ, ಬಂಡಾಯ ಅಡಗಿತ್ತು: ಕವಿ ಸತೀಶ ಕುಲಕರ್ಣಿ
ಪ್ರತಿಭಟನೆಯಲ್ಲಿ ಕರವೇ ಮುಖಂಡರು ಬಸವರಾಜ ಹೊಗೆಸೊಪ್ಪಿನ, ನಿಂಗನಗೌಡ ಮಾಲಿಪಾಟೀಲ, ವಿನಾಯಕ ಬದಿ, ನಬೀಸಾಬ ಕಿಲ್ಲೇದಾರ, ಆಶಾ ಜೂಲಗುಡ್ಡ, ತೌಸಿಫ ಢಾಲಾಯತ, ಮುತ್ತಣ್ಣ ಚವಡಣ್ಣವರ, ದಾದಾಪೀರ ನದಾಫ, ದಾವಲಸಾಬ ತಹಶೀಲ್ದಾರ, ಯಲ್ಲಪ್ಪ ಭೋವಿ, ಲೋಕೇಶ ಸುತಾರ, ಪ್ರವೀಣ ಗಾಣಗೇರ, ಚನ್ನಬಸಯ್ಯ ಗಡ್ಡದೇವರಮಠ, ಸಿರಾಜ್ ಹೊಸಮನಿ, ರಜಾಕ್ ಢಾಲಾಯತ, ಬಸವರಾಜ ರಗಟಿ, ಗೌಸು ಶಿರಹಟ್ಟಿ, ಮಹಾದೇವಿ ದೊಡ್ಡಗೌಡ್ರ, ಪ್ರಕಾಶ ಹುಡೇದ, ರಾಮನಗೌಡ ಹಳೇಮನಿ, ಹುಸೇನಸಾಬ ಕುಂಡಾಲಿ, ಮಾರುತಿ ಈಳಗೇರ, ಕೊಂಚಿಗೇರಮಠ, ಸೇರಿದಂತೆ ಪಾಲ್ಗೊಂಡಿದ್ದರು.