“ರಾಜ್ಯಾದ್ಯಂತ ಸಫಾಯಿ ಪೌರ ಕಾರ್ಮಿಕರು ಶ್ರದ್ಧೆಯಿಂದ ದುಡಿದರೂ ಮೂಲಭೂತ ಸೌಲಭ್ಯಗಳು ಲಭ್ಯವಿಲ್ಲ. ಬಹುಪಾಲು ಪೌರ ಕಾರ್ಮಿಕರು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡುತ್ತಿದ್ದು, ಕಾಯಂ ಉದ್ಯೋಗ ಸಮರ್ಪಕ ವೇತನ, ಆರೋಗ್ಯ ವಿಮೆ ಕೂಡಲೇ ಕೂಡಬೇಕು. ಪೌರ ಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಬೇಕು” ಎಂದು ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಒತ್ತಾಯಿಸಿದರು.
ಗದಗ ಪಟ್ಟಣದಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಕುಳಿತ ಗದಗ ಬೆಟಗೇರಿ ನಗರಸಭೆಯ ಪೌರಕಾರ್ಮಿಕರ ಪ್ರತಿಭಟನೆಗೆ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ಬೆಂಬಲಿಸಿ ಮಾತನಾಡಿದರು.
“ನಗರದ ಸ್ವಚ್ಛತೆಯ ಹಿಂದೆ ನಿಂತಿರುವ ಅಜ್ಞಾತ ಶಕ್ತಿಗಳು ಪೌರ ಕಾರ್ಮಿಕರಾಗಿದ್ದು, ಬೆಳಗಿನ ಜಾವದಿಂದಲೇ ಬೀದಿಗಳ ಸ್ವಚ್ಛತೆ, ಕಸದ ಸಂಗ್ರಹಣೆ, ಗಟಾರು ಸ್ವಚ್ಛಗೊಳಿಸುವ ಕಾಯಕ ಮಾಡುತ್ತಾರೆ. ಅಪಾಯಕರ ಹಾಗೂ ಶ್ರಮದ ಕೆಲಸಗಳನ್ನು ನಿರಂತರವಾಗಿ ನಿರ್ವಹಿಸುವ ಈ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬಹಳ ದಿನಗಳಿಂದ ಹಲವು ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದಾರೆ” ಎಂದರು.
ರಾಜ್ಯ ಅದ್ಯಕ್ಷರು ಪಿ.ಸುಬ್ರಮಣ್ಯಂ ರೆಡ್ಡಿ ಮಾತನಾಡಿ, “ಎಲ್ಲಾ ಪೌರ ಕಾರ್ಮಿಕರಿಗೆ ಖಾಯಂ ಉದ್ಯೋಗದ ಭರವಸೆ ಈ ಕೂಡಲೇ ಕೊಡಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ನಾನು ಸೌಮ್ಯ ವ್ಯಕ್ತಿಯಾಗಿದ್ದರೂ ನನ್ನೊಳಗೆ ಕ್ರಾಂತಿ, ಬಂಡಾಯ ಅಡಗಿತ್ತು: ಕವಿ ಸತೀಶ ಕುಲಕರ್ಣಿ
ಧರಣಿಯಲ್ಲಿ ಕಾರ್ಮಿಕ ಘಟಕ ರಾಜ್ಯಾದ್ಯಕ್ಷರು ಶಿವಾನಂದಯ್ಯ ಹಿರೇಮಠ, ರಾಜ್ಯ ನಿರ್ದೇಶಕರು ಎಮ್. ಎಸ.ಪರ್ವತಗೌಡ್ರ, ರಾಜ್ಯ ಕಾರ್ಯದರ್ಶಿ ಯು.ಆರ್. ಬೂಸನೂರಮಠ, ರಾಜ್ಯ ವಕ್ತಾರರು ಪ್ರಭಾಕರ್ ಹೆಬಸೂರ, ಪೌರ ಕಾರ್ಮಿಕರ ಮುಷ್ಕರವನ್ನು ಬೆಂಬಲಿಸಿ ಮಾತನಾಡಿದರು. ರಾಮು.ಪಿ.ಬಳ್ಳಾರಿ ಎಲ್ಲರನ್ನೂ ಸ್ವಾಗತಿಸಿದರು ವೇದಿಕೆಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
