ಆಹಾರ ಪದಾರ್ಥಗಳ ಮೇಲೆ ಫಂಗಸ್, ಅವಧಿ ಮೀರಿದ ಉತ್ಪನ್ನಗಳು ಮತ್ತು ನೈರ್ಮಲ್ಯವಿಲ್ಲದ ಶೇಖರಣೆ ವ್ಯವಸ್ಥೆ ಕಂಡುಬಂದ ಕಾರಣ ಮಹಾರಾಷ್ಟ್ರದ ಧಾರವಿಯಲ್ಲಿರುವ ಆನ್‌ಲೈನ್ ಡೆಲಿವರಿ ಅಪ್ಲಿಕೇಷನ್ ಝೆಪ್ಟೋದ ಗೋದಾಮಿನ ಪರವಾನಗಿ ರದ್ದುಗೊಳಿಸಲಾಗಿದೆ. ಆಹಾರ ಮತ್ತು ಔಷಧ ಆಡಳಿತ(ಎಫ್‌ಡಿಎ) ಅಧಿಕಾರಿಗಳು ಗೋದಾಮಿಗೆ ಭೇಟಿ ನೀಡಿದ್ದು, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಉಲ್ಲಂಘನೆಯಡಿ ಕ್ರಮಕೈಗೊಂಡಿದೆ.
ಸದ್ಯ ಆಂತರಿಕ ಪರಿಶೀಲನೆಯನ್ನು ಪ್ರಾರಂಭಿಸಲಾಗಿದೆ. ಗ್ರಾಹಕರಿಗೆ ಸುರಕ್ಷಿತ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧವಾಗಿದ್ದೇವೆ. ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳುವುದರಲ್ಲಿ ಯಾವುದೇ ಕೊರತೆ ಕಂಡರೂ ಅದನ್ನು ಕ್ಷಮಿಸಲಾಗದು” ಎಂದು ಝೆಪ್ಟೋ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಬಜೆಟ್ 2025 | ಗಿಗ್ ಕಾರ್ಮಿಕರಿಗೆ ಗುರುತಿನ ಚೀಟಿ, ಆರೋಗ್ಯ ವಿಮೆ
“ನಾವು ಈಗಾಗಲೇ ಆಂತರಿಕ ಪರಿಶೀಲನೆಯನ್ನು ಪ್ರಾರಂಭಿಸಿದ್ದು ಶೀಘ್ರ ತನಿಖೆ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಲೋಪಗಳನ್ನು ಸರಿಪಡಿಸಲು, ಗ್ರಾಹಕರಿಗೆ ಉತ್ತಮ ಮತ್ತು ಸುರಕ್ಷಿತ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಕಾನೂನು ಅನುಸಾರವಾಗಿ ಕಾರ್ಯಾಚರಣೆಗಳನ್ನು ಪುನರಾರಂಭಿಸಲು ನಾವು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ” ಎಂದೂ ಝೆಪ್ಟೋ ಹೇಳಿದೆ.
THINK BEFORE YOU CLICK!
— नेत्वा धुरी NETWA DHURI (@netwadhuri) June 1, 2025
Before you place your next online grocery order on #Zepto, read this:@FDA_MAHARASHTRA has immediately suspended Zepto's Mumbai license (Kiranakart Technologies Pvt. Ltd., #Dharavi)!
Why? During inspection, they found:
🦠 Fungal growth on food
💧 Food… pic.twitter.com/GUCFRBYgnZ
ಆಹಾರ ಮತ್ತು ಔಷಧ ಆಡಳಿತ ರಾಜ್ಯ ಸಚಿವ ಯೋಗೇಶ್ ಕದಮ್ ಅವರಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಮಹಾರಾಷ್ಟ್ರದ ಎಫ್‌ಡಿಎ ಝೆಪ್ಟೋ ಧಾರಾವಿ ಗೋದಾಮಿನಲ್ಲಿ ತಪಾಸಣೆ ನಡೆಸಿದೆ. ಈ ವೇಳೆ ಕೆಲವು ಆಹಾರ ಪದಾರ್ಥಗಳ ಮೇಲೆ ಫಂಗಸ್ ಕಂಡುಬಂದಿದೆ.
ನಿಂತ ನೀರಿನ ಹತ್ತಿರವೇ ಉತ್ಪನ್ನಗಳನ್ನು ಸಂಗ್ರಹಿಸಿರುವುದು, ಆಹಾರ ವಸ್ತುಗಳನ್ನು ಸರಿಯಾಗಿ ಶೇಖರಣೆ ಮಾಡದಿರುವುದು, ನೇರವಾಗಿ ನೆಲದ ಮೇಲೆ ವಸ್ತು ಇಟ್ಟಿರುವುದು, ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಆಹಾರ ಪದಾರ್ಥಗಳು ಬಿದ್ದಿರುವುದು, ನೆಲ ಕೊಳಕಾಗಿರುವುದು, ಅವಧಿ ಮುಗಿದ ಸ್ಟಾಕ್ ಮತ್ತು ಅವಧಿ ಮುಗಿಯದ ಸ್ಟಾಕ್ ಜೊತೆಯಾಗಿರುವುದು ಕಂಡುಬಂದಿದೆ.
ಇನ್ನು ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರದಲ್ಲಿ ಝೆಪ್ಟೋ ಹಲವು ವಿವಾದಗಳಿಗೆ ಗುರಿಯಾಗುತ್ತಿದೆ. ಮುಂಬೈ ಜಿಲ್ಲೆಯ ವಿವಿಧ ಗೋದಾಮುಗಳಲ್ಲಿ ಕೊಳಕು ಇರುವ, ಅಸ್ತವ್ಯಸ್ತವಾಗಿ ಆಹಾರ ಪದಾರ್ಥ ಶೇಖರಣೆ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
