ಕನ್ನಡ ಭಾಷೆ ಬಗ್ಗೆ ಹಗುರವಾಗಿ ಮಾತನಾಡಿದ ತಮಿಳು ನಟ ಕಮಲ ಹಾಸನ್ ಭಾವಚಿತ್ರಕ್ಕೆ ಎಲೆ ತಿಂದು ಉಗುಳುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮ ಗೌಡ ಬಣ)ದ ಕಾರ್ಯಕರ್ತರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದ ಮುಂಭಾಗದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ನಟ ಕಮಲ್ ಹಾಸನ ವಿರುದ್ಧ ಘೋಷಣೆ ಕೂಗಿದರು.
ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಅವಮಾನಿಸಿದ ಕಮಲ್ ಹಾಸನ್ ಅವರ ಸಿನಿಮಾನಗಳು ಪ್ರದರ್ಶನ ಮಾಡಬಾರದು. ರಾಜ್ಯದಲ್ಲಿರುವ ಕನ್ನಡಿಗರಿಗೆ ಹಾಗೂ ಅಭಿಮಾನಿಗಳಿಗೆ ಕಮಲ್ ಹಾಸನ್ ನೋವುಂಟು ಮಾಡಿದ್ದು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಸಿಕೆ ಜೈನ್ ಮಾತನಾಡಿ, ಕನ್ನಡ ಭಾಷೆಯು ತಮಿಳ್ ನಿಂದ ಬಂದಿದೆ ಎಂದು ಹಗುರವಾಗಿ ಮಾತನಾಡಿ, ಕ್ಷಮೆಯಾಚಿಸುವುದಿಲ್ಲವೆಂದು ಹೇಳಿಕೆ ನೀಡಿದ್ದು ಅಕ್ಷಮ್ಯ ಅಪರಾಧ. ರಾಜ್ಯದಲ್ಲಿ ತಮಿಳ್ ಭಾಷೆ ಸಿನಿಮಾಗಳು ನಿಷೇಧಿಸಬೇಕು, ಕಮಲ್ ಹಾಸನ್ ಅವರು ಸಿನಿಮಾಗಳು ಪ್ರದರ್ಶನ ಮಾಡಿದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಏರ್ ಬ್ಲಾಸ್ಟ್ ; ಓರ್ವ ಕಾರ್ಮಿಕ ಸಾವು,ಮತ್ತೊಬ್ಬ ಗಂಭೀರ ಗಾಯ
ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡಿ ಕನ್ನಡಕ್ಕೆ ಅವಮಾನಿಸಲಾಗಿದೆ.ಕಮಲ್ ಹಾಸನ್ ಅವರ ನಟಿಸಿದ ಸಿನಿಮಾನಗಳು ರಾಜ್ಯದಲ್ಲಿ ಪ್ರದರ್ಶನ ಮಾಡಬಾರದು, ಪ್ರದರ್ಶಿಸಿದಲ್ಲಿ ಕನ್ನಡಿಗರು ಸಿಡಿದೇಳಬೇಕಾಗುತ್ತದೆ, ಕನ್ನಡ ಭಾಷೆಯ ಬಗ್ಗೆ ಅಗೌರವ ತೋರಿದ್ದು, ಕ್ಷಮೆಯಾಚನೆ ಮಾಡುವವರೆಗೂ ರಾಜ್ಯದಲ್ಲಿ ನಿರಂತರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ( ಶಿವರಾಮೆ ಗೌಡ) ಬಣದ ಮುಖಂಡರುಗಳಾದ ಕೆ.ವಿ.ಕಳ್ಳಿಮಠ, ಜೆ.ನಾರಾಯಣ, ರಾಜೇಶ ಮಾಣಿಕ್, ರಮೇಶ ಕಲ್ಲೂರ್‌ಕರ್, ಮಾದೇಶ ಸರ್ಜಾಪೂರ, ಶರಣಬಸವ ಈಚನಾಳ, ಸುರೇಶ ಗೊಬ್ಬರಕಲ್, ಆರ್.ಕೆ.ನಾಯಕ, ನರಸಿಂಹ, ದೀಪಕ್, ದಾವಲಸಾಬ ದೊಡ್ಡಮನಿ, ಆಸೀಫ್, ಅಜೀಜ್, ಬಷೀರ್ ಅಹ್ಮದ್ ಹೊಸಮನಿ ಸೇರಿದಂತೆ ಕರವೇ ಕಾರ್ಯಕರ್ತರು ಭಾಗವಹಿಸಿದ್ದರು.
