ಬೆಂಗಳೂರಿನಲ್ಲಿ ನಡೆಯತ್ತಿರುವ ಮಹಾಘಟಬಂಧನ್ ಸಭೆಯನ್ನು ಬಿಜೆಪಿ ಮಾಜಿ ಸಚಿವ ಆರ್ ಅಶೋಕ್, ಫೋಟೊ ಶೂಟ್‌ಗೆ ಹೋಲಿಕೆ ಮಾಡಿ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸರ್ಕಾರ ನಡೆಸುವವರು ಅಧಿಕಾರವನ್ನು ಯಾವ ರೀತಿಯಾಗಿ ದುರುಪಯೋಗ ಮಾಡುತ್ತಿದ್ದಾರೆ ಎನ್ನುವುದನ್ನು ನೋಡುತ್ತಿದ್ದೇನೆ. ದೇಶದ ವಿಪಕ್ಷಗಳ ನಾಯಕರೆಲ್ಲರೂ ಕೈ ಎತ್ತಿ ಫೋಟೊ ಶೂಟ್ ಮಾಡಿಕೊಂಡು ಹೋಗುತ್ತಾರೆ” ಎಂದು ವ್ಯಂಗ್ಯವಾಡಿದ್ದಾರೆ.
“ಯಾವುದೇ ಸಿದ್ದಾಂತಗಳಿಲ್ಲ ಅವರಿಗೆ, ಅವರವರ ರಾಜ್ಯಗಳಲ್ಲಿ ಒಬ್ಬರಿಗೊಬ್ಬರು ಕಚ್ಚಾಡುತ್ತಾರೆ. ತಮಿಳುನಾಡು, ಕೇರಳ, ಪಶ್ಛಿಮಬಂಗಾಳದಲ್ಲಿ ಜಗಳವನ್ನು ಮಾಡುತ್ತಾರೆ. ಇಲ್ಲಿ ಒಂದಾಗುತ್ತಾರೆ. ಅವರ ಟಾರ್ಗೆಟ್ ಮೋದಿ, ಅದೊಂದೆ ಅಜೆಂಡಾ” ಎಂದು ಲೇವಡಿ ಮಾಡಿದ್ದಾರೆ.
“ಫೋಟೊ ಶೋ ಅಷ್ಟೆ ಸಭೆಯಿಂದ ಏನು ಉಪಯೋಗವಾಗುವುದಿಲ್ಲ. ಮೋದಿ ವಿರುದ್ದ ನಾವಿದ್ದೇವೆ ಅನ್ನೋದು ಅಷ್ಟೇ ಅವರಿಗೆ ಗೊತ್ತಿದೆ. ಆದರೆ, ದೇಶದ ಬಡವರಿಗೆ ಮೋದಿ ಏನು ಅಂತ ಗೊತ್ತಿದೆ. ಅಲ್ಲದೆ ಮೋದಿಯವರಿಂದ ವಿಶ್ವಮಟ್ಟದಲ್ಲಿ ಭಾರತಕ್ಕೆ ಹೆಸರು ಬಂದಿದೆ. ಚಂದ್ರಯಾನ-3 ಕೂಡ ಯಶಸ್ವಿಯಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿರೋಧ ಪಕ್ಷಗಳ ಸಭೆ | ಜೆಡಿಎಸ್‌ಗೆ ಪ್ರತ್ಯೇಕವಾಗಿ ಆಹ್ವಾನ ನೀಡುವ ಅಗತ್ಯ ಇಲ್ಲ: ಕೆ ಸಿ ವೇಣುಗೋಪಾಲ್