ಗದಗ ಜಿಲ್ಲೆಯ ನರಗುಂದ ಪಟ್ಟಣದ ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮದಲ್ಲಿ ವಯೋಸಹಜ ಕಾಯಿಲೆಯಿಂದ ಮುಸ್ಲಿಂ ಧರ್ಮಕ್ಕೆ ಸೇರಿದ ವೃದ್ಧ ಸಾವನಪ್ಪಿದ್ದು, ಎಲ್ಲ ಧರ್ಮದವರು ಸೇರಿ ಅವರ ಧರ್ಮದ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ದಲಿತ ಮುಖಂಡರು ದತ್ತಾತ್ರೇಯ ಜೋಗಣ್ಣವರ ಮಾತನಾಡಿ, “ಸಮಾಜದಲ್ಲಿ ಮಾನವ ಧರ್ಮ ಶ್ರೇಷ್ಠ, ಮಾನವನಿಗೆ ಮಾನವನ ಸಹಾಯ ಹಸ್ತವನ್ನು ನೀಡಬಲ್ಲ. ಮಾನವನನ್ನು ಜಾತಿ ಧರ್ಮಗಳಿಂದ ಅಳಿಯಬಾರದು. ಎಲ್ಲರ ಮೈಯಲ್ಲಿ ಹರಿಯುವುದು ಒಂದೇ ರಕ್ತ. ನಾವು ಇವತ್ತಿನ ದಿನಮಾನದಲ್ಲಿ ಜಾತಿ ಧರ್ಮ ಮೇಲು ಕೇಳು ಎಂದು ಹೊಡೆದಾಡಕ್ಕೊಂದು ಜೀವನ ಸಾಗಿಸುತ್ತಿದ್ದೇವೆ. ಇವೆಲ್ಲವನ್ನು ತೊರೆದು ಮಾನವ ಕುಲವು ಒಂದೇ ಎಲ್ಲ ಜಾತಿ ಧರ್ಮಗಳು ಒಂದೇ ಎಂಬುವುದನ್ನು ಅರಿತುಕೊಂಡು ಜೀವನ ನಡೆಸಬೇಕು. ಎಂದರು.
“ಯಾವುದೇ ಧರ್ಮದಲ್ಲಿ ಅಥವಾ ಜಾತಿಯಲ್ಲಾಗಲಿ ಹಿಂಸೆ ಮತ್ತು ಕೆಟ್ಟ ಕಾರ್ಯಗಳಿಗೆ ಅವಕಾಶ ನೀಡಿಲ್ಲ. ಇಂತಹ ವಿಚಾರಗಳನ್ನು ನಾವೆಲ್ಲರೂ ಜೀವನದಲ್ಲಿ ತೆಗೆದುಕೊಂಡು ಜೀವನ ನಡೆಸಬೇಕು. ವೃದ್ಧಾಶ್ರಮಗಳಲ್ಲಿ ಕುಟುಂಬದಿಂದ ದೂರ ಉಳಿದ ಎಷ್ಟು ವೃದ್ಧರು ಜಾತಿ ಧರ್ಮದ ಬಗ್ಗೆ ಅರಿವೇ ಇಲ್ಲದೆ ಜೀವನವನ್ನು ನಟಿಸುತ್ತಿದ್ದಾರೆ. ಆದರೆ ಇವತ್ತು ಯುವ ಸಮೂಹ ಜಾತಿ ಧರ್ಮದ ಗೀಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ” ಎಂದು ಹೇಳುದರು.
ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ವೃದ್ಧಾಶ್ರಮ ಸಂಸ್ಥೆಯ ಅಧ್ಯಕ್ಷರು ಶಶಿಕುಮಾರ್ ಮಾತನಾಡಿ, “ಇವತ್ತಿನ ದಿನಗಳಲ್ಲಿ ವೃದ್ಧಾಶ್ರಮದಲ್ಲಿ ಯಾವುದೇ ಜಾತಿ ಲಿಂಗಬೇದ ಭಾವ ಇಲ್ಲದೆ ಹಿರಿಯರ ಜೀವನ ಮಾಡುತ್ತಿದ್ದಾರೆ. ಆದರೆ ಸಮಾಜದಲ್ಲಿ ಜಾತಿ ಧರ್ಮ ಎಂದು ಬಡದಾಡಿಕೊಂಡು ಯುವಕರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದರೊಟ್ಟಿಗೆ ಇವತ್ತಿಗೆ ಹಿರಿಯರ ಬಗೆಗಿನ ಕಾಳಜಿ, ಗೌರವ ನಶಿಸಿಹೋಗಿ, ಹಿರಿಯರನ್ನು ವೃದ್ಧಾಶ್ರಮದತ್ತ ನೂಕುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮಾರುತಿ ಮಾನಪಡೆ 70ನೇ ಜನ್ಮದಿನ : ನೋಟ್‌ಬುಕ್, ಪೆನ್ ವಿತರಣೆ
ಅಂತ್ಯ ಸಂಸ್ಕಾರದಲ್ಲಿ ನಗರದ ಸರ್ವಧರ್ಮದ ಯುವಕರು ಅಭಿಷೇಕ್ ಹಡಪದ, ಜಹಾಂಗೀರಖಾನ ಪಠಾಣ,ಎಂ. ಎಚ್ ಧಾರವಾಡ, ಹಯಾಜ ಪಠಾಣ, ದಾವೂದ ಪಠಾಣ, ಸಲೀಮ್ ಬಿಜಾಲಿಖಾನ, ಜಮಾಲ್ಬೇಗ್ ಮುಲ್ಲಾ, ಮಾಜಿದ್ ಮುಲ್ಲಾ, ರಿಯಾಜ್ ಲೋಧಿ, ನವೀನ್ ಜೋಗಣ್ಣವರ, ಬಸು ಜೋಗಣ್ಣವರ, ಕುಮಾರ್ ಮೊರೆ, ಮುಬಾರಕ್ ಪರಾಸ, ನಾಗರಾಜ್ ಕಡೆಮನಿ,ಖಾಜು ಕಿಲ್ಲೆದಾರ, ದಾವಲ ರಾಜೇಖಾನ, ಶಿವು ದೊಡ್ಡಮನಿ, ಶಾರುಖ ಪಠಾಣ, ಆಶಿಫ ಪಠಾಣ, ಆಶೀಪ, ಮಾರುತಿ ಗುಡಿಯನ್ನವರ, ಮೌಲಾ ಕಾಶಿಮ್ ಖಲೀಫ, ಇಸ್ಮಾಯಿಲ್ ಜಮಾದಾರ, ಸಮೀರ್ ಸಕಲಿ, ಇನ್ನೂ ಅನೇಕ ಇದ್ದರು.
