(ಮುಂದುವರಿದು ಭಾಗ…) ಕಳೆದ ಎಪ್ಪತ್ತೈದು ವರ್ಷಗಳು ಅಂದರೆ ಹತ್ತಿರ ಹತ್ತಿರ ಮುಕ್ಕಾಲು ಶತಮಾನದ ಅವಧಿಯಲ್ಲಿ ನಾವೆಂಥ ಭಾಷೆಯನ್ನು ಬಳಸಿ ಬೆಳೆಸುತ್ತಿದ್ದೇವೆ ಎಂಬುದನ್ನು ಅವಲೋಕಿಸಿದರೆ ಬಹುದೊಡ್ಡ ಆಘಾತವಾಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ನಮ್ಮ ರಾಜಕಾರಣ, ಆಡಳಿತ, ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆಯಲ್ಲಿ ಬಳಕೆಯಾಗುತ್ತಿರುವ ಭಾಷೆಯ ಕೆಲವು ನಮೂನೆ ನೋಡಿದರೆ ಸಾಕು, ಭಾಷಿಕವಾಗಿ ನಾವೆಷ್ಟು ಅಧಮರಾಗಿದ್ದೇವೆ ಎಂಬುದು ಅರಿವಿಗೆ ಬರುತ್ತದೆ. ದಿವಂಗತ ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ವಿರೋಧಿ ದಳಗಳು ಮತ್ತು ಕರ್ಮಠ ನಾಗರಿಕರು ಅವರ ವೈಧವ್ಯವನ್ನು ಕುರಿತು ಆಡಿದ…

ಡಾ. ಮೀನಾಕ್ಷಿ ಬಾಳಿ
ಪ್ರಾಧ್ಯಾಪಕರಾದ ಮೀನಾಕ್ಷಿ ಬಾಳಿಯವರು ಸಂಶೋಧಕಿ, ಮಹಿಳಾ ಹೋರಾಟಗಾರ್ತಿ, ಬರಹಗಾರ್ತಿ ಹಾಗೂ ಚಿಂತಕರೆಂದೇ ಖ್ಯಾತರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷರು. ‘ಮಡಿವಾಳಪ್ಪನವರ ಶಿಷ್ಯರ ತತ್ವ ಪದಗಳು, ಖೈನೂರು ಕೃಷ್ಣಪ್ಪನವರ ತತ್ವಪದಗಳು, ತನ್ನ ತಾನು ತಿಳಿದ ಮೇಲೆ, ಚಿವುಟದಿರಿ ಚಿಗುರು, ಮನದ ಸೂತಕ ಹಿಂಗಿದೊಡೆ’ ಮುಂತಾದ ಪ್ರಮುಖ ಕೃತಿಗಳನ್ನು ಹೊರತಂದಿದ್ದಾರೆ. ‘ಮನದ ಸೂತಕ ಹಿಂಗಿದೊಡೆ’ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದಿಂದ ಕಮಲಾ ರಾಮಸ್ವಾಮಿ ದತ್ತಿ ಬಹುಮಾನ ಲಭಿಸಿದೆ. ಇತ್ತೀಚೆಗೆ ನಿಜ ವಚನ ದರ್ಶನ ಪುಸ್ತಕ ರಚಿಸಿದ್ದಾರೆ. ಇವರಿಗೆ ಕದಳಿಶ್ರೀ ಪ್ರಶಸ್ತಿ ದೊರಕಿದೆ.