ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರಿದ ಕೊಲೆಗಳು : ಬಿಗಿ ಕಾನೂನು ಕ್ರಮಕ್ಕೆ ಜಾತ್ಯಾತೀತ ವೇದಿಕೆ ಆಗ್ರಹ

Date:

Advertisements

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಂಪು ಹಿಂಸೆ, ಹತ್ಯೆ, ಅಮಾಯಕರ ಕೊಲೆ ತಡೆಯಲು ದ್ವೇಷ ಭಾಷಣ ಮಾಡುತ್ತಿರುವ ಸಂವಿಧಾನ ವಿರೋಧಿ ಸಾಮಾಜಿಕ ಶಕ್ತಿಗಳನ್ನು ಗುಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಆಗ್ರಹಿಸಿ ಬೀದರ ಜಿಲ್ಲಾ ಜಾತ್ಯಾತೀತ ನಾಗರಿಕ ವೇದಿಕೆ ಆಗ್ರಹಿಸಿದೆ.

ಸೋಮವಾರ ವೇದಿಕೆಯ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್‌ ಶೀಲವಂತ ಅವರಿಗೆ ಸಲ್ಲಿಸಿದರು.

ಮುಖಂಡರು ಮಾತನಾಡಿ, ʼದೇಶದಲ್ಲಿ ಬಲಪಂಥಿಯ ಸಂಘಟನೆಗಳು ದಿನನಿತ್ಯ ಕಾನೂನು ಕೈಗೆತ್ತಿಕೊಂಡು ನಿರ್ದಿಷ್ಟ ಜನಾಂಗ ಮತ್ತು ಸಮುದಾಯವನ್ನು ಗುರಿ ಮಾಡುತ್ತ ಗುಂಪು ಹತ್ಯೆ, ಗುಂಪು ಹಿಂಸೆ ಮತ್ತು ಅಮಾಯಕರ ಕೊಲೆ ನಡೆಸಲಾಗುತ್ತಿದೆ. ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟ ಆಗಿರವುದನ್ನು ಸಹಿಸದ ಮತೀಯವಾದಿಗಳು ಹಿಂಸೆ, ಕೊಲೆಗಳಿಗೆ ಪ್ರಚೋದಿಸುತ್ತಿದ್ದಾರೆ. ಲವ್ ಜಿಹಾದ್, ಗೋರಕ್ಷಣೆ, ಅಲ್ಪಸಂಖ್ಯಾತರ ಮುಸ್ಲಿಂ ಸಮುದಾಯವನ್ನು ಮತ್ತು ನಾಗರಿಕ ಹಕ್ಕಿಗಾಗಿ ಹೋರಾಡುವ ದಲಿತ ಸಮುದಾಯದವರ ಮೇಲೆ ದಾಳಿಗಳು ನಡೆಯುತ್ತಿವೆʼ ಎಂದು ಖಂಡಿಸಿದರು.

Advertisements

ʼಬಲಪಂಥಿಯ ಸಂಘಟನೆಯ ಉಪ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲೆಯನ್ನು ಗುಂಪು ಹತ್ಯೆ, ಗುಂಪು ಹಿಂಸೆ ಮತ್ತು ಕೊಲೆ ಮಾಡುವ ಪ್ರಯೋಗಾಲಯವನ್ನಾಗಿ ಮಾಡಲಾಗಿರುತ್ತಿದೆ. ರೌಡಿಗಳನ್ನು ಸಮಾಜ ಮುಖಂಡರಾಗಿ ಬಿಂಬಿಸುವಲ್ಲಿ ಮಾಧ್ಯಮಗಳಲ್ಲಿ ನಿರಂತರ ಪ್ರಚಾರ ಕೊಡಲಾಗುತ್ತಿದೆ. ಕೊಲೆಗೆ ಕೊಲೆಯೇ ಉತ್ತರವೆನ್ನುವಂತೆ ಅರಾಜಕತೆ ನಿರ್ಮಿಸಿ ಕಾನೂನು ಕೈಗೆತ್ತಿಕೊಂಡು ಅಮಾಯಕರನ್ನು ಕೊಲೆ ಮಾಡಲಾಗುತ್ತಿದೆʼ ಎಂದು ಆರೋಪಿಸಿದರು.

ಯಾವುದೇ ಹಿಂಸೆಯಲ್ಲಿ ಭಾಗಿಯಾಗದ ಅಬ್ದುಲ್ ರಹೆಮಾನ್‌ ಎಂಬುವರನ್ನು 2025ರ ಮೇ 27ರಂದು ಕೊಲೆ ಮಾಡಲಾಗಿದೆ. ಕೊಲೆಯಾದ ಅಬ್ದುಲ್ ರಹೆಮಾನ್ ಅವರು ಕೆಲವು ದಿನಗಳ ಹಿಂದೆ ರೋಗಿಯೊಬ್ಬರ ಜೀವ ರಕ್ಷಿಸಲು ತನ್ನ ರಕ್ತವನ್ನೇ ಕೊಟ್ಟಿರುವ ವ್ಯಕ್ತಿ. ಯಾವುದೇ ಅಪರಾಧದ ಹಿನ್ನೆಲೆ ಇಲ್ಲದ ವ್ಯಕ್ತಿಯನ್ನು ಹಿಂದುತ್ವವಾದಿಗಳು ಕೊಲೆಗೈದಿದ್ದಾರೆ. ಇದೆಲ್ಲವನ್ನು ನೋಡಿದರೆ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕೋಮುಶಕ್ತಿಯು ವಿಜೃಂಭಿಸುತ್ತಿದೆʼ ಎಂದು ಕಿಡಿಕಾರಿದರು.

ಅಮಾಯಕ ಅಬ್ದುಲ್ ರಹೆಮಾನ್‌ ಅವರನ್ನು ಕೊಲೆ ಮಾಡಿರುವ ಆರೋಪಿಗಳನ್ನು ಶೀಘ್ರದಲ್ಲೇ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ : ಬೀದರ್‌ | ಎಂಲ್ಸಿ ಎನ್.ರವಿಕುಮಾರ್‌, ಛಲವಾದಿ ನಾರಾಯಣಸ್ವಾಮಿ ರಾಜೀನಾಮೆಗೆ ಕಾಂಗ್ರೆಸ್‌ ಆಗ್ರಹ

ಜಿಲ್ಲಾ ಜಾತ್ಯತೀತ ನಾಗರಿಕ ವೇದಿಕೆಯ ಸದಸ್ಯರಾದ ನಿಜಾಮೋದ್ದೀನ್, ಸೈಯದ್ ವಹೀದ್ ಲಖನ್, ಬಾಬುರಾವ ಹೊನ್ನಾ, ರಾಜಕುಮಾರ ಮೂಲಭಾರತಿ, ಉಮೇಶಕುಮಾರ ಸೋರಳ್ಳಿಕರ್, ಶ್ರೀಕಾಂತ ಸ್ವಾಮಿ, ಶಪಾಯತ್ ಅಲಿ, ಅರುಣ ಪಟೇಲ್, ರಾಜಕುಮಾರ ಗುನಳ್ಳಿ, ಅಂಬೇಡ್ಕರ್ ಬೌದ್ಧೆ, ಜಗನ್ನಾಥ ಹೊನ್ನಾ, ರಾಹುಲ್ ಡಾಂಗೆ, ಸೊಯೋಬುದ್ದೀನ್, ಸೈಯದ್ ಇಬ್ರಾಹಿಂ, ಶಫಿಯೋದ್ದೀನ್ ಗೋಲ್ಡ್, ಪ್ರಭು ಹೊಚಕನಳ್ಳಿ, ಮೌಲಾನಾ ಮನ್ನಾಖೇಳ್ಳಿ, ಪ್ರಭು ತಗಣಿಕರ್, ಚಾಂದೋಬಾ ಹಂದಿಕೇರಾ, ಪಾಂಡುರಂಗ ಪ್ಯಾಗೆ, ಸುನೀಲ ವರ್ಮಾ, ಬಾಬುರಾವ ಕೌಠಾ, ಜೈಶೀಲ, ಸಾಯಿ ಶಿಂಧೆ, ರಾಹುಲ ಹಾಲಹಿಪ್ಪರಗಾ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X