ಬೀಜ, ಗೊಬ್ಬರ ಸೇರಿದಂತೆ ಕೃಷಿ ಉಪಕರಣಗಳ ಸಮಪರ್ಕಕ ಪೂರೈಕೆಗೆ ಅಗತ್ಯ ಕ್ರಮವಹಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕು ಕೃಷಿ ಅಧಿಕಾರಿ ಶರಣಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ರೈತಸಂಘದ ವಿಜಯಪುರ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂಪತ್ ಜಮಾದಾರ ಮಾತನಾಡಿ, “ಈ ಬಾರಿ ಮುಂಗಾರು ಬೇಗನೆ ಆರಂಭಗೊಂಡಿದೆ. ಅಂತೆಯೇ ರೈತ ಸಮುದಾಯ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದೆ. ಮುಂಗಾರು ಬಿತ್ತನೆಗೆ ಅಗತ್ಯವಾದ ಬೀಜ, ಗೊಬ್ಬರ, ರಾಸಾಯನಿಕಗಳು, ತಾಡಪಾಲಗಳು ಸೇರಿದಂತೆ ಕೃಷಿ ಸಲಕರಣೆಗಳ ಲಭ್ಯತೆ ಸರಿಯಾಗಿ ಇರುವಂತೆ ನೋಡಿಕೊಳ್ಳುವುದು ಕೃಷಿ ಇಲಾಖೆಯ ಮೊದಲ ಆದ್ಯತೆಯಾಗಿದೆ. ಕಳೆದ ಬಾರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕಳಪೆ ಬೀಜ ವಿತರಿಸಿದ್ದಾರೆ ಎಂದೂ ರೈತರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಈ ಬಾರಿ ಅಂತ ಯಾವುದೇ ಕೆಲಸಕ್ಕೆ ಅವಕಾಶ ನೀಡದೇ ಉತ್ತಮ ಬೀಜ ವಿತರಣೆಗೆ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ವಿಜಯಪುರ | ಕೇಂದ್ರದ ಅಸಹಕಾರದ ನಡುವೆ ರಾಜ್ಯ ಸರ್ಕಾರ ಉತ್ತಮ ಆಡಳಿತ: ಕೆಪಿಸಿಸಿ ವಕ್ತಾರ ಗಣಿಹಾರ
ಈ ವೇಳೆ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶಕೀರಾ ಹೆಬ್ಬಾಳ, ಉಪಾಧ್ಯಕ್ಷೆ ಸುನಂದಾ ಸೊನ್ನಹಳ್ಳಿ, ನಬಿಲಾಲ್ ಚಿಕ್ಕಸಿಂದಗಿ, ಶ್ರೀಕಾಂತ ಬಜಂತ್ರಿ, ಮುದುಕಪ್ಪ ಮೆಟಗಾರ, ಈರಯ್ಯ ಟಕ್ಕಳಕಿ ಮಠ, ಸರಸ್ವತಿ ಬಿರಾದಾರ, ಜ್ಯೋತಿ ಹದಗಲ್, ನಾಗಮ್ಮ ತಳಕೇರಿ ಇದ್ದರು.