ಸಾಲ ಪಡೆದ ಹಣವನ್ನು ವಾಪಸ್ ಹಿಂತಿರುಗಿಸಲು ಹೋದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ನಾಲ್ವರು ಗ್ರಾಮ ಆಡಳಿತಾಧಿಕಾರಿ ಹಾಗೂ ಓರ್ವ ಕಿರಿಯ ಸಹಾಯಕ ಅಧಿಕಾರಿ ವಿರುದ್ದ ಸಿಂಧನೂರು ನಗರದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024 ರ ಫೆ. 1 ರಂದು ಮಹಿಳೆಯ ಹೆಸರಿನಲ್ಲಿದ್ದ ಜಮೀನನ್ನು ಖರೀದಿ ಕರಾರು ಪತ್ರ ಬರೆಸಿಕೊಂಡು ಸಾಲ ಕೊಟ್ಟಿದ್ದಾರೆ. ಮಹಿಳೆಯು ಮಗಳ ಮದುವೆಗಾಗಿ ಜಮೀನಿನ ಮೇಲೆ 4 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲ ಪಡೆದಿದ್ದ ಹಣವನ್ನು ಮರು ಪಾವತಿಸಲು ಮಹಿಳೆ ಹೋದಾಗ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ನಕಲಿ ನೋಟು ಚಲಾವಣೆ ಮಾಡುತ್ತಿದ್ದ 10 ಜನ ಅರೆಸ್ಟ್
ವಿಧಾನ ಸೌಧ ಕಚೇರಿಯ ಕಿರಿಯ ಸಹಾಯಕ ರಾಜಭಕ್ಷಿ ,ಗ್ರಾಮ ಆಡಳಿತಾಧಿಕಾರಿಗಳಾದ ಮಲ್ಲಿಕಾರ್ಜುನ ಗಡೆದ,ಮೃತ್ಯುಂಜಯ ,ಆನಂದ ಹಾಗೂ ಬಂದೇನವಾಜ ಸೇರಿ ಐದು ಜನರ ಮೇಲೆ ಪ್ರಕರಣ ದಾಖಲಾಗಿದೆ.