ಸರಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಉಳಿಸಿ ಬೆಳೆಸಿ ಅಭಿಯಾನ, ನರೇಗಾ ಯೋಜನೆ ಕಾಮಗಾರಿಗಳು ದುರ್ಬಳಕೆ ಖಂಡಿಸಿ, ಅನಧಿಕೃತ ಔಷಧ ಮಳಿಗೆಗಳು ಹೆಚ್ಚಾಗಿರುವುದು ಅದಕ್ಕೆ ಸಂಬಂಧಿಸಿದ ವಿದ್ಯೆಯ ಪ್ರಮಾಣ ಪತ್ರ ಇಲ್ಲದೆ ಇರುವುದು, ದಿನಸಿ ವಸ್ತುಗಳ ಬೆಲೆ ಏರಿಕೆ, ಕಾವೇರಿ ತುಂಗಭದ್ರಾ ಕೃಷ್ಣ ಮಹದಾಯಿ ಭೀಮಾ ನದಿಯ ನೀರು ಕನ್ನಡ ನಾಡಿನ ರೈತರಿಗೆ ಮೀಸಲಿರಿಸುವ ಕುರಿತು ಶಾಶ್ವತ ಪರಿಹಾರ, ದಿನನಿತ್ಯದ ನಕಲಿ ದಿನಸಿ ವಸ್ತುಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದನ್ನು ವಿರೋಧಿಸಿ ಕರವೇ ಸ್ವಾಭಿಮಾನಿ ಕೃಷ್ಣೆಗೌಡ ಬಣದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಸರಕಾರಿ ಕನ್ನಡ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಮುಚ್ಚುತ್ತಿರುವುದು ಶೋಚನೀಯ ಸಂಗತಿ ಗ್ರಾಮೀಣ ಭಾಗದ ಬಡ, ರೈತ, ಶೋಷಿತ ಕೂಲಿ ಕಾರ್ಮಿಕರ, ಮಕ್ಕಳು ಸರಕಾರಿ ಶಾಲೆಗಳು ತುಂಬಾ ಅನುಕೂಲವಾಗಿದ್ದು ಈ ವರ್ಷ ಅಂದರೆ 2024- 25ರಲ್ಲಿ ಇಡೀ ರಾಜ್ಯದಲ್ಲಿ ಖಾಸಗಿ ಶಾಲೆಗಳ ಪರವಾನಿಗೆ ವ್ಯಾಪಾರಿಕರಣ ನಡೆದಿದೆ.
ರಾಜ್ಯದಲ್ಲಿ 475 ಹೆಚ್ಚು ಹೊಸ ಶಾಲೆಗಳಿಗೆ ಪರವಾನಿಗೆ ಕೊಟ್ಟರೆ ಅದರಲ್ಲಿ ವಿಜಯಪುರ ಜಿಲ್ಲೆಯಲ್ಲಿ 125 ಶಾಲೆಗಳಿಗೂ ಅಧಿಕ ಪರವಾನಿಗೆ ಶಿಕ್ಷಣ ಇಲಾಖೆ ನೀಡಿದೆ ನೂತನ ಶಾಲೆಗಳಿಗೆ ಪರವಾನಿಗೆ ನೀಡಬೇಕಾದರೆ ನಿಯಮಾನುಸಾರ ಮೀರಿ ಬೇಕಾಬಿಟ್ಟಿಯಾಗಿ ವ್ಯಾಪಾರಿಕರಣ ನಡೆಸಿ ಶಾಲಾ ಕಟ್ಟಡ ಇಲ್ಲದಿರುವವರಿಗು, ಮಕ್ಕಳಿಗೆ ಶಾಲಾ ಮೂಲಭೂತ ಸೌಕರ್ಯ ಇಲ್ಲದಿದ್ದರು ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಇಲ್ಲದಿದ್ದರು ಕಟ್ಟಡ ಸುರಕ್ಷತೆ ಇಲ್ಲದಿದ್ದರು, ಅಗ್ನಿ ಸುರಕ್ಷತೆ ಇಲ್ಲದಿದ್ದರು,ಇನ್ನೂ ಹತ್ತು ಹಲವು ನಿಯಮಗಳನ್ನು ಮೀರಿ ಸ್ಥಳ ಪರಿಶೀಲನೆ ಮಾಡದೆ ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ್ದು ನೋವಿನ ಸಂಗತಿ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ನಿರಂತರವಾಗಿ ಮಾಡುತ್ತಿದ್ದರು, ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುತ್ತಲೆ ಇವೆಇದರ ವಿರುದ್ಧ ಹಲವಾರು ಮನವಿ ಗಳನ್ನು ಕೊಟ್ಟರು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಅದಕ್ಕಾಗಿ ರಾಜ್ಯಾದ್ಯಂತ ಹೊಸ ನೋಂದಣಿ ಶಾಲೆಗಳು ಪುನರ್ ಪರಿಶೀಲನೆ ಆಗಬೇಕೆಂದು ಪ್ರತಿಭಟನೆ ವೇಳೆ ಒತ್ತಾಯಿಸಿದ್ದಾರೆ.
ಇಲ್ಲವಾದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹವನ್ನು, ಕರವೇ ಸಂಘಟನೆಯಿಂದ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ನೇತೃತ್ವದಲ್ಲಿ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.