ತಾಜ್ ವೆಸ್ಟ್‌ಎಂಡ್‌ನಲ್ಲಿ ನಡೆಯುತ್ತಿರುವ ದೇಶದ ಪ್ರಮುಖ ವಿರೋಧ ಪಕ್ಷಗಳ ಸಭೆ, ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ರಕ್ಷಣೆಗೆ ಅತಿ ಅಗತ್ಯ ಮತ್ತು ಅನಿವಾರ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಫ್ಯಾಸಿಸ್ಟ್ ಧೋರಣೆಯಿಂದ ಸರ್ವಾಧಿಕಾರಿ ಮನೋಭಾವ ಪ್ರದರ್ಶಿಸುತ್ತಿರುವ ಕೇಂದ್ರ ಸಂವಿಧಾನವನ್ನೇ ಅಪಾಯದಲ್ಲಿಟ್ಟಿದೆ. ‘ಸಂವಿಧಾನದ ಉಳಿವೇ, ಈ ದೇಶದ ಉಳಿವು’ ಎಂಬುವುದೇ ವಿಪಕ್ಷಗಳ ಸಭೆಯ ಉದ್ದೇಶ” ಎಂದಿದ್ದಾರೆ.
“ಈ ದೇಶದ ಪ್ರತಿಯೊಬ್ಬ ನಾಗರಿಕನ ಬದುಕಿಗೆ ರಕ್ಷಣೆ ಒದಗಿಸಿರುವುದೇ ಸಂವಿಧಾನ. ಆದರೆ, ಬಿಜೆಪಿಯವರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಾರೆ. ಸಂವಿಧಾನ ಬದಲಾಯಿಸುವುದೆಂದರೆ ನಾಗರಿಕರ ಬದುಕಿನ ಹಕ್ಕು ಕಸಿದುಕೊಂಡಂತೆ. ಕೇಂದ್ರದ ಈ ಧೋರಣೆ ವಿರುದ್ಧ ಪ್ರಮುಖ ವಿರೋಧ ಪಕ್ಷಗಳೆಲ್ಲಾ ಒಗ್ಗಟ್ಟಾಗಿ ಹೋರಾಡಲೇಬೇಕಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಅಧಿಕಾರದಲ್ಲಿರುವ ಕೇಂದ್ರದ ಎನ್‌ಡಿಎ ಕೂಟ ವಿಭಜಿಸುವುದರಲ್ಲಿ ನಂಬಿಕೆಯಿಟ್ಟಿದೆ. ಆದರೆ, ನಾವು ಒಗ್ಗೂಡಿಸುವುದರಲ್ಲಿ ನಂಬಿಕೆಯಿಟ್ಟಿದ್ದೇವೆ. ದ್ವೇಷ ಅವರ ದೇವರು, ಪ್ರೀತಿ ನಮ್ಮ ದೇವರು. ಅವರ ಹೃದಯದಲ್ಲಿ ಧರ್ಮಾಂಧತೆಯಿದೆ. ನಮ್ಮಲ್ಲಿ ಕೂಡಿ ಬಾಳುವ ಸೌಹಾರ್ದತೆಯಿದೆ. ಸಾಮರಸ್ಯದ ದೇಶ ಕಟ್ಟುವ ಸಲುವಾಗಿಯೇ ಸಮಾನಮನಸ್ಕರ ಈ ಸಭೆ ನಡೆಯುತ್ತಿದೆ.