ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ನಿಗೂಢ ಪ್ರಾಣಿಯೊಂದು ದಾಳಿ ನಡೆಸಿದ್ದು, ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲೇ ಆರು ಮಂದಿ ಸಾವನ್ನಪ್ಪಿದ್ದಾರೆ. ರೇಬೀಸ್ ಲಸಿಕೆ ಪಡೆದಿದ್ದರೂ ಆರು ಮಂದಿ ಮೃತಪಟ್ಟಿದ್ದಾರೆ. ಬಹಳ ಭೀಕರವಾದ ಪ್ರಾಣಿ ಅದಾಗಿತ್ತು ಎಂದು ಸ್ಥಳೀಯರು ಬಣ್ಣಿಸಿದ್ದಾರೆ.
ಮೇ 5ರ ರಾತ್ರಿ 1ರಿಂದ ಬೆಳಗಿನ ಜಾವ 5 ಗಂಟೆಯ ನಡುವೆ ಗ್ರಾಮದ 17 ಮಂದಿ ನಿದ್ರೆಯಲ್ಲಿದ್ದಾಗ ಈ ನಿಗೂಢ ಪ್ರಾಣಿ ದಾಳಿ ನಡೆಸಿದೆ. ಇನ್ನೂ ಯಾವ ಪ್ರಾಣಿ ದಾಳಿ ನಡೆಸಿದೆ ಎಂಬುದು ತಿಳಿದುಬಂದಿಲ್ಲ. ಈ ಪ್ರಾಣಿ ಲಿಂಬೈ ಗ್ರಾಮದ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಇದನ್ನು ಓದಿದ್ದೀರಾ? ನಿಗೂಢ ಕಾಯಿಲೆಗೆ ಐದು ಮಕ್ಕಳು ಸೇರಿ ಇಡೀ ಕುಟುಂಬವೇ ಬಲಿ; ನನ್ನ ಜಗತ್ತೇ ನಾಶವಾಯಿತು ಎಂದ ಅಸ್ಲಾಂ
ಕೆಲವು ಈ ಪ್ರಾಣಿ ನಾಯಿಯಂತೆ ಇತ್ತು ಎಂದು ಹೇಳಿದರೆ ಇನ್ನೂ ಕೆಲವರು ಕತ್ತೆಕಿರುಬದಂತೆ ಇತ್ತು ಎಂದಿದ್ದಾರೆ. ಪ್ರಾಣಿ ಘರ್ಜಿಸಿಲ್ಲ, ಬರೀ ಕಚ್ಚಿ ಕಣ್ಣರೆಯಾಗಿದೆ ಎಂದು ಪ್ರಾಣಿ ದಾಳಿಗೆ ಒಳಗಾದವರು ಹೇಳಿಕೊಂಡಿದ್ದಾರೆ.
ಈ ಪ್ರಾಣಿ ದಾಳಿಗೆ ಒಳಗಾದ 17 ಮಂದಿಗೆ ಬರ್ವಾನಿ ಮತ್ತು ಇಂದೋರ್‌ನಲ್ಲಿರುವ ಪ್ರಾಥಮಿಕ ಕೇಂದ್ರದಲ್ಲಿ ರೇಬೀಸ್ ವಿರೋಧಿ ಲಸಿಕೆಗಳನ್ನು ನೀಡಲಾಗಿದೆ. ಆದರೆ ಮೇ 23ರಿಂದ ಜೂನ್ 2ರ ನಡುವೆ ಈ ಪೈಕಿ ಆರು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು ಮತ್ತು 40ರಿಂದ 60 ವರ್ಷ ವಯಸ್ಸಿನ ನಾಲ್ವರು ಪುರುಷರು ಎಂದು ಹೇಳಲಾಗಿದೆ.
ಮೃತರಲ್ಲಿ ಒಬ್ಬರಾದ ಚೈನ್ ಸಿಂಗ್ ಉಮ್ರಾವ್(50) ಭಾನುವಾರ ಚೇತರಿಸಿಕೊಳ್ಳುತ್ತಿದರು. ಆದರೆ ಕೆಲವೇ ಗಂಟೆಗಳಲ್ಲಿ ಮೃತರಾಗಿದ್ದಾರೆ. ಇವೆಲ್ಲವುದರ ನಡುವೆ ವೈದರುಗಳು ಯಾವ ಪ್ರಾಣಿ ದಾಳಿ ನಡೆಸಿದೆ ಎಂದು ತಿಳಿಯಲಾಗದೆ ಗೊಂದಲಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
“11 ಸಂತ್ರಸ್ತರನ್ನು ಪರೀಕ್ಷಿಸಿದ ವೈದ್ಯಕೀಯ ತಂಡವು ಅಂತಹ ವಿಚಿತ್ರವಾಗಿ ಕಚ್ಚಿದ ಗಾಯವನ್ನು ಎಂದಿಗೂ ನೋಡಿಲ್ಲ ಎಂದಿದ್ದಾರೆ. ಖಾಂಡ್ವಾ ವೈದ್ಯಕೀಯ ಕಾಲೇಜಿನ ತಂಡವು ಪರಿಶೀಲಿಸುತ್ತಿದೆ” ಎಂದು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಬರ್ವಾನಿ ಕಲೆಕ್ಟರ್ ಗುಂಚಾ ಸನೋಬರ್ ಹೇಳಿದರು.
ಇದನ್ನು ಓದಿದ್ದೀರಾ? ಗದಗ | ನಿಗೂಢ ಕಾಯಿಲೆ: ಅರ್ಧ ಗಂಟೆಯಲ್ಲೇ 20ಕ್ಕೂ ಹೆಚ್ಚು ಕುರಿಗಳು ಸಾವು
“ಎಲ್ಲಾ ವೈದ್ಯಕೀಯ ಮಾರ್ಗಸೂಚಿಗಳನ್ನು ಪಾಲಿಸಲಾಗಿದೆ, ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೂ ಸಾವು ಸಂಭವಿಸಿದೆ. ಎಲ್ಲಾ ರೀತಿಯ ಪರೀಕ್ಷೆಗೆ ಮಾದರಿಗಳನ್ನು ದೆಹಲಿಯ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ತಿಳಿಸಿದ್ದಾರೆ.
ಇನ್ನು ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಂಡ್ವಾ-ಬರೋಡಾ ಹೆದ್ದಾರಿಗೆ 7 ಕಿ.ಮೀ ಮೆರವಣಿಗೆ ನಡೆಸಿ ಅರಣ್ಯ ರೇಂಜರ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
