ಸಾಗರ ತಾಲೂಕಿನ ಆನಂದಪುರದಲ್ಲಿ ಬೆನ್ಜ್ ಲಾರಿಗೆ ಅಡ್ಡ ಹಾಕಿ ಸುಲಿಗರ, ಬೆದರಿಕೆ, ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿ ಹಣ ನೀಡದೆ ಎಸ್ಕೇಪ್, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದ ಬೆನ್ನಲ್ಲೆ ಸಚಿನ್ ಅಲಿಯಾಸ್ ಶ್ಯಾಡೋಗೆ ಕಾಲಿಗೆ ಗುಂಡೇಟು ಹೊಡೆಯಲಾಗಿದೆ.
ಗೂಂಡಾ ಆಕ್ಟ್ ನಲ್ಲಿ ಒಂದು ವರ್ಷದ ಹಿಂದೆ ಜೈಲಿಗೆ ತೆರಳಿದ್ದ ಸಚಿನ್ ಶ್ಯಾಡೋ 20 ದಿನಗಳ ಹಿಂದೆ ರಿಲೀಸ್ ಆಗಿ ಬಂದಿದ್ದ. ದೊಡ್ಡಪೇಟೆ, ತುಂಗ ನಗರ , ಜಯನಗರ, ಕೋಟೆ, ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ, ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿತ್ತು.
20 ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ಸ್ಯಾಡೋ ಆನಂದಪುರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಲಾರಿಯನ್ನ ಅಡ್ಡಹಾಕಿ ಚಾಲಕನ ಮೊಬೈಲ್ ಮತ್ತು ಹಣ ಕಿತ್ತುಕೊಂಡು ಓಡಿಹೋಗಿದ್ದ.ಪೆಟ್ರೋಲ್ ಬಂಕ್ ನಲ್ಲಿ ಹಣ ನೀಡದೆ ಟೋಪಿಹಾಕಿ ಪರಾರಿಯಾಗಿದ್ದ ಸಚಿನ್ ಯಾನೆ ಸ್ಯಾಡೋ ವಿರುದ್ಧ ಪೆಟ್ರೋಲ್ ಬಂಕ್ ನ ಸಂಘದ ಅಧ್ಯಕ್ಷ ಮತ್ತು ಎಂಎಲ್ ಸಿ ಅರುಣ್ ಎಸ್ಪಿ ಅವರಿಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಆನಂದಪುರ ಮತ್ತು ಎಸ್ಪಿಗೆ ಸಚಿನ್ ದೂರು ನೀಡಿದ್ದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಅನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. ಶ್ಯಾಡೋ ಸಚಿನ್ ಎಂಬ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಸ್ಯಾಡೋ ಸಚಿನ್ ಎಂಬುವವನ ಮೇಲೆ 30 ಪ್ರಕರಣವಿದ್ದು ಪ್ರಕರಣದ ಆರೋಪಿಯನ್ನು ಮಂಗಳವಾರ ಮಧ್ಯಾಹ್ನ ಮೆಣಸಿನಸರ ಬಳಿ ಈತನನ್ನ ಬಂಧಿಸುವ ಸಂದರ್ಭದಲ್ಲಿ ಆರೋಪಿಯು ಹೆಡ್ ಕಾನ್ಸೆಬಲ್ ಆಶೋಕ್ ರವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಪಿಎಸ್‌ಐ ಯುವರಾಜ್ ರ ಮೇಲೆ ಹಲ್ಲೆ ಮಾಡಲು ಯತ್ನ ಮಾಡಿದ್ದಾನೆ ಎಂಬ ಮಾಹಿತಿಯಾಗಿದೆ.
ಪೊಲೀಸರು ತಮ್ಮ ಆತ್ಮ ರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.ಒಂದು ಸುತ್ತು ಪಿಎಸ್ಐ ಗುಂಡು ಹಾರಿಸಿದ್ದಾರೆ. ನಂತರ ಆತನ ಎಡಗಾಲಿಗೆ ಗುಂಡು ಹಾರಿಸಿ ರಕ್ಷಣೆ ಮಾಡಲಾಗಿದೆ. ಗಾಯಗೊಂಡ ಸಿಬ್ಬಂದಿ ಮತ್ತು ಸಿಬ್ಬಂದಿಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.