ಅಂತಿಮ ಘಟ್ಟ ತಲುಪಿರುವ ಐಪಿಎಲ್‌ನ ರೋಚಕ ಹಣಾಹಣಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಂಜಾಬ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಆರ್‌ಸಿಬಿಯ ರಜತ್ ಪಾಟಿದಾರ್ ತಂಡ ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ. ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಉಭಯ ತಂಡಗಳಿಂದ 11 ಆಟಗಾರರ ಪಡೆ ತಮ್ಮ ಕ್ರೀಡಾ ಪರಾಕ್ರಮ ತೋರಲು ಸಿದ್ಧರಾಗಿದ್ದಾರೆ. ತಂಡದಲ್ಲಿ ಬದಲಾವಣೆ ಇಲ್ಲದಿದ್ದರೂ ತಂತ್ರಗಾರಿಕೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಆರ್‌ಸಿಬಿ ನಾಯಕ ರಜತ್ ಹೇಳಿದ್ದಾರೆ
ಎರಡೂ ತಂಡಗಳು ಬಹಳ ಸಮಯದ ನಂತರ ಫೈನಲ್ ತಲುಪಿದ್ದು, ಇಲ್ಲಿಯವರೆಗೆ ಒಮ್ಮೆಯೂ ಪ್ರಶಸ್ತಿ ಗೆದ್ದಿಲ್ಲವಾದ್ದರಿಂದ ಈ ಪಂದ್ಯದಲ್ಲಿ ಯಾವ ತಂಡ ಗೆದ್ದರೂ ಅದು ಅವರ ಚೊಚ್ಚಲ ಐಪಿಎಲ್ ಪ್ರಶಸ್ತಿಯಾಗಲಿದೆ.
ಇದು ಬೆಂಗಳೂರಿನ ನಾಲ್ಕನೇ ಐಪಿಎಲ್ ಫೈನಲ್ ಆಗಲಿದೆ. ಇದಕ್ಕೂ ಮೊದಲು ತಂಡವು 3 ಬಾರಿ ಸೋಲನ್ನು ಎದುರಿಸಿದೆ. 2009 ರಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತು. ನಂತರ 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ನಂತರ 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಬೆಂಗಳೂರು ತಂಡವನ್ನು ಕೇವಲ 8 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಮತ್ತೊಂದೆಡೆ, ಪಂಜಾಬ್ ಕಿಂಗ್ಸ್ ಎರಡನೇ ಬಾರಿಗೆ ಫೈನಲ್ ಆಡುತ್ತಿದೆ. 2014 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಫೈನಲ್ ಆಡಿದ್ದ ಪಂಜಾಬ್ಗೆ ಸೋಲು ಎದುರಾಗಿತ್ತು.
ಪಂದ್ಯವಾಡುವ ಉಭಯ ತಂಡಗಳ ಆಟಗಾರರು:
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಮಯಾಂಕ್ ಅಗರ್ವಾಲ್ , ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಲ್, ಜೋಶ್ ಹ್ಯಾಜಲ್‌ವುಡ್.
ಪಂಜಾಬ್ ಕಿಂಗ್ಸ್ : ಪ್ರಭ್‌ಸಿಮ್ರನ್ ಸಿಂಗ್, ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಶ್ರೇಯಸ್ ಐಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋಯಿನಿಸ್, ಅಜಮತುಲ್ಲಾ ಒಮರ್‌ಜಾಯ್, ಕೈಲ್ ಜೇಮಿಸನ್, ಅರ್ಶದೀಪ್ ಸಿಂಗ್, ಯುಜ್ವೇಂದ್ರ ಚಹಲ್, ವಿಜಯಕುಮಾರ್ ವೈಶಾಕ್
ಪಂದ್ಯದ ಸಮಯ: 7.30
ನೇರ ಪ್ರಸಾರ: ಜಿಯೋ ಹಾಟ್ ಸ್ಟಾರ್, ಸ್ಟಾರ್ ಸ್ಪೋರ್ಟ್ಸ್
🚨 Toss 🚨@PunjabKingsIPL won the toss and elected to bowl first against @RCBTweets in the Grand #Final
— IndianPremierLeague (@IPL) June 3, 2025
Updates ▶ https://t.co/U5zvVhbXnQ#TATAIPL | #RCBvPBKS | #TheLastMile pic.twitter.com/OG9rob7n0U