ಚಿತ್ರದುರ್ಗ ನಗರದ ಹೊರವಲಯದ ಶ್ರೀ ಕೇತೇಶ್ವರ ಮಠದ ಪಕ್ಕದಲ್ಲಿರುವ ಅಲೆಮಾರಿ ಸುಡಗಾಡು ಸಿದ್ದರ ಕಾಲೋನಿಯಲ್ಲಿ ಡಿ-ಲೈಟ್ ಎನರ್ಜಿ ಪ್ರೈ.ಲಿ., ವಿಮುಕ್ತಿ ವಿದ್ಯಾಸಂಸ್ಥೆ, ಅಭಿವೃದ್ಧಿ ಸಂಸ್ಥೆ, ಜಿಲ್ಲಾ ಶಾಂತಿ ಮತ್ತು ಸೌಹಾರ್ದ ವೇದಿಕೆ ಚಿತ್ರದುರ್ಗ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಲೆಮಾರಿ ಜಾಗೃತಿ ಹಾಗೂ ಸೋಲಾರ್ ಲೈಟ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಅಲೆಮಾರಿ ಸುಡಗಾಡು ಸಿದ್ದರ ಕಾಲೋನಿಗೆ ಸೋಲಾರ್ ದೀಪ ವಿತರಣೆ ಮಾಡಿ ಮಾತನಾಡಿದ ಶ್ರೀ ಇಮ್ಮಡಿ ಕೇತೇಶ್ವರ ಸ್ವಾಮೀಜಿ “ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಅಲೆಮಾರಿ ಸುಡಗಾಡು ಸಿದ್ದರ ಜನಾಂಗಕ್ಕೆ ಸೋಲಾರ್ ಲೈಟ್ ವಿತರಣೆ
ಮಾಡುತ್ತಿರುವುದು ನಿಜಕ್ಕೂ ಅರ್ಥಪೂರ್ಣ” ಎಂದು ಶ್ಲಾಘಿಸಿದರು.
ಭಿಕ್ಷೆ ಬೇಡುವ ಮತ್ತು ಸಣ್ಣಪುಟ್ಟ ವ್ಯಾಪಾರ ಮಾಡಿಜೀವನ ನಿರ್ವಹಣೆ ಮಾಡುತ್ತಿರುವ ಸುಡಗಾಡು ಸಿದ್ದ ಜನಾಂಗಕ್ಕೆ ನೆಲೆ ಎಂಬುವುದಿಲ್ಲ. ಅವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಯೋಜನೆಯನ್ನು ರೂಪಿಸಿ ಜಾರಿ ಮಾಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾಂಗ್ರೆಸ್ ಹಾಗೂ ಕೂಡ ಅಧ್ಯಕ್ಷರಾದ ಶ್ರೀ ಎಂ.ಕೆ.ತಾಜ್‌ಪೀರ್ ಮಾತನಾಡಿ “ಸಮಾಜದ ಮುಖ್ಯವಾಹಿನಿಯಿಂದ ದೂರವಿದ್ದು, ಸರ್ಕಾರಿ
ಸೌಲಭ್ಯಗಳಿಂದ ವಂಚಿತರಾಗಿರುವ ಅಲೆಮಾರಿ ಸುಡುಗಾಡು ಸಿದ್ದ ಜನಾಂಗದವರ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಮಾಡಿದ್ದು, ಅದರ ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಬೇಕು” ಎಂದು ತಿಳಿಸಿದರು.
ಅಲೆಮಾರಿ ಸುಡಗಾಡು ಸಿದ್ದರ ಕಾಲೋನಿಗೆ ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕುಡಿಯುವ ನೀರಿಗಾಗಿ
ಟ್ಯಾಂಕವೊಂದನ್ನು ನಿರ್ಮಾಣ ಮಾಡಿಕೊಡಲು ತಾವು ಸದಸ್ಯರುಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಿಪಿಐ ಪಕ್ಷ ಮತ್ತು ಎಐಟಿಯುಸಿ ಸಂಘಟನೆಯಿಂದ ಹರಿಹರದಲ್ಲಿ ಮೇ -ಕಾರ್ಮಿಕ ದಿನಾಚರಣೆ
ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಸಿ.ನರಸಿಂಹಮೂರ್ತಿ ಮಾತನಾಡಿ “ಡಿ-ಲೈಟ್ ಎನರ್ಜಿ ಪ್ರೈ.ಲಿ.ಕಂಪನಿ ಜೊತೆಗೆ ಮಾತನಾಡಿ ಅಲೆಮಾರಿ ಸುಡಗಾಡು ಸಿದ್ದ ಜನಾಂಗದವರ ಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಸೋಲಾರ್ ಲೈಟ್‌ಗಳನ್ನು ವಿತರಣೆ ಮಾಡಲಾಗಿದ್ದು, ಅಭಿವೃದ್ಧಿ,
ವಿಮುಕ್ತಿ, ಡಿ-ಲೈಟ್ ಸಂಸ್ಥೆಗಳ ನೆರವಿನೊಂದಿಗೆ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗಿದೆ “ಎಂದು ಹೇಳಿದರು.
ಈ ವೇಳೆ ಡಿ-ಲೈಟ್ ಎನರ್ಜಿ ಪ್ರೈ.ಲಿ., ವಿಮುಕ್ತಿ ವಿದ್ಯಾಸಂಸ್ಥೆ, ಅಭಿವೃದ್ಧಿ ಸಂಸ್ಥೆ, ಚಿತ್ರದುರ್ಗ ಜಿಲ್ಲಾ ಶಾಂತಿ ಮತ್ತು ಸೌಹಾರ್ದ ವೇದಿಕೆ ಸಂಸ್ಥೆಗಳ ಸದಸ್ಯರು, ಸುಡುಗಾಡು ಸಿದ್ಧರ ಕಾಲೋನಿಯ ಗ್ರಾಮಸ್ಥರು ಹಾಜರಿದ್ದರು.