ಅಂತೂ 18 ವರ್ಷಗಳಿಂದ ಐಪಿಎಲ್ ಕಪ್‌ಗಾಗಿ ಪರಿತಪಿಸುತ್ತಿದ್ದ ಆರ್‌ಸಿಬಿ ಅಭಿಮಾನಿಗಳ ಕನಸು ಈ ವರ್ಷ ಈಡೇರಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ 2025ರ ಐಪಿಎಲ್ ಟೂರ್ನಿಯ ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಗೆದ್ದು ಬೀಗಿದೆ. ಕಪ್ಅನ್ನು ತನ್ನದಾಗಿಸಿಕೊಂಡಿದೆ. ಈ ಸಲ ಕಪ್ ನಮ್ದೇ ಎನ್ನಿತ್ತಿದ್ದ ಆರ್‌ಬಿಸಿ ಮತ್ತು ಆರ್‌ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದು’ ಎಂದಿದ್ದಾರೆ.
ಕಪ್ ಗೆದ್ದಿರುವ ಆರ್‌ಸಿಬಿ ಕೇಲವ 18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿ ಸಾಧಿಸಿರುವುದು ಮಾತ್ರವಲ್ಲದೇ, ಇನ್ನೂ ಅನೇಕ ಮೈಲಿಗಲ್ಲುಗಳನ್ನು ಮೆಟ್ಟಿದೆ. ನಾನಾ ಸಾಧನೆಗಳನ್ನು ಮಾಡಿದೆ.
ಈ ಟೂರ್ನಿಯಲ್ಲಿ ಆರ್‌ಸಿಬಿ ಸಾಧನೆಗಳು;
* 18 ವರ್ಷಗಳಲ್ಲಿ ಮೊದಲ ಬಾರಿಗೆ ಚಾಂಪಿಯನ್
* 9 ವರ್ಷಗಳ ನಂತರ ಐಪಿಎಲ್ ಫೈನಲ್‌ಗೆ ಪ್ರವೇಶ ಪಡೆದಿದೆ.
* 9 ವರ್ಷಗಳ ನಂತರ ಲೀಗ್ ಹಂತದಲ್ಲಿ ಟಾಪ್ 2 ಸ್ಥಾನ
* ತನ್ನ ಇತಿಹಾಸದಲ್ಲೇ ಅತ್ಯುತ್ತಮ ಚೇಸ್ (228 ರನ್‌ಗಳು) ದಾಖಲಿಸಿದೆ
* 17 ವರ್ಷಗಳ ನಂತರ ಚೆಪಾಕ್‌ನಲ್ಲಿ ಚೆನ್ನೈ ವಿರುದ್ಧ ಗೆಲುವು ಸಾಧಿಸಿದೆ
* 10 ವರ್ಷಗಳ ನಂತರ ವಾಂಖೆಡೆಯಲ್ಲಿ ಮುಂಬೈ ವಿರುದ್ಧ ಜಯ ದಾಖಲಿಸಿದೆ
* 7 ವರ್ಷಗಳ ನಂತರ ಡೆಲ್ಲಿಯಲ್ಲಿ ಡಿಸಿ ವಿರುದ್ಧ ಗೆದ್ದಿದೆ
* 6 ವರ್ಷಗಳ ನಂತರ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸಿದೆ
* ಮೊದಲ ಬಾರಿಗೆ ಲೀಗ್ ಹಂತದಲ್ಲಿ ಎರಡು ಪಂದ್ಯಗಳಲ್ಲೂ ಚೆನ್ನೈ ವಿರುದ್ಧ ಜಯವನ್ನೂ ಪಡೆದಿದೆ
* ಲೀಗ್ ಹಂತದಲ್ಲಿ ಎಲ್ಲಾ ತವರಿನೇತರ (Away) ಪಂದ್ಯಗಳನ್ನು ಗೆದ್ದ ಮೊದಲ ತಂಡವಾಗಿದೆ. 7ಕ್ಕೆ 7ರಲ್ಲಿಯೂ ಗೆಲುವು ದಾಖಲಿಸಿದೆ.
* ಐಪಿಎಲ್ ಸೀಸನ್‌ನಲ್ಲಿ ಯಾವುದೇ ತಂಡದಿಂದ ಮೊದಲ ಬಾರಿಗೆ 10 ಬೇರೆ ಆಟಗಾರರು 50+ ರನ್ ಗಳಿಸಿದ್ದಾರೆ.
* ಒಂದೇ ಸೀಸನ್‌ನಲ್ಲಿ 9 ವಿಭಿನ್ನ ಆರ್‌ಸಿಬಿ ಆಟಗಾರರು ಪ್ಲೇಯರ್ ಆಫ್ ದಿ ಮ್ಯಾಚ್ ಆಗಿರುವುದು ಇದೇ ಮೊದಲು
* ಐಪಿಎಲ್ ಪ್ಲೇಆಫ್‌ನಲ್ಲಿ ಪ್ರತಿಸ್ಪರ್ಧಿ ತಂಡವನ್ನು 15 ಓವರ್‌ಗಳೊಳಗೆ ಆಲೌಟ್ ಮಾಡಿದ ಮೊದಲ ತಂಡವಾಗಿದೆ
.