ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ದಸಂಸ ವತಿಯಿಂದ, ಚಿಂತಾಮಣಿ ತಾಲೂಕಿನ ಕೋಡಿಗಲ್ ಗ್ರಾಮದ ದಸಂಸ ಸಂಚಾಲಕ ರಮೇಶ್ ಮತ್ತು ಅವರ ಕುಟುಂಬದ ಮೇಲೆ ಹಲ್ಲೆ ಮಾಡಿರುವವರನ್ನು ಕೂಡಲೆ ಬಂಧಿಸಬೇಕು ಎಂದು ದಸಂಸ ಒತ್ತಾಯಿಸಿದೆ.
ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಮುಂದಾಳತ್ವದಲ್ಲಿ ಸುಬ್ಬಾರೆಡ್ಡಿ, ಚಂದ್ರಪ್ಪ, ವೆಂಕಟರಮಣ ಗೋಪಾಲ, ರಂಗನಾಥ್‌ರೆಡ್ಡಿ, ಭಾಸ್ಕರ್ ರೆಡ್ಡಿ ಮುಂತಾದವರು ಕೋಡಿಗಲ್ ರಮೇಶ್ ವಿರುದ್ಧ ಸುಳ್ಳು ಮಾಹಿತಿ ನೀಡಿ ಕೇಸ್ ದಾಖಲಿಸಿದ್ದಾರೆ. ರಮೇಶ್ ಅವರ ಸಂಘಟನಾ ಶಕ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಈ ರೀತಿ ಮಾಡಿದ್ದಾರೆ. ಪೊಲೀಸ್ ಇಲಾಖೆ ಕೂಡಲೇ ಇವರ ವಿರುದ್ಧ ಕ್ರಮ ಕೂಗೊಳ್ಳಬೇಕು ಹಾಗೂ ರಮೇಶ್ ಅವರಿಗೆ ನೀಡಿದ್ದ ಗನ್ ಮ್ಯಾನ್ ಸೌಲಭ್ಯವನ್ನು ಸರ್ಕಾರ ವಾಪಸ್ಸು ಪಡೆದ ನಂತರ 8 ಜನರ ಗುಂಪು ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕುಟುಂಬದವರನ್ನೂ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಕೂಡಲೇ ಅಪರಾಧಿಗಳನ್ನು ಬಂದಿಸಬೇಕು ಎಂದು ದಸಂಸ ಸಂಘಟನಾ ಕೃಷ್ಣಪ್ಪ ತಿಳಿಸಿದರು.
ದಲಿತ ಹೋರಾಟಗಾರರ ಮೇಲಿನ ಹಲ್ಲೆ ಖಂಡನೀಯ. ಹೋರಾಟಗಾರರನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ದಲಿತ ಹೋರಾಟಗಾರರಿಗೆ ಸರ್ಕಾರ ರಕ್ಷಣೆ ನೀಡಬೇಕೆಂದು ಸಂಘಟನಾ ಮಹಿಳಾ ಘಟಕದ ರಾಜ್ಯ ಸಂಚಾಲಕಿ ಸುನಿತಾ ರಾಜ್ ಮಾತಾಡಿದರು.
ಇದನ್ನೂ ಓದಿದ್ದಿರಾ?ಚಿಕ್ಕಮಗಳೂರು | ಜಾತಿ ವಿನಾಶ ಅಂಬೇಡ್ಕರ್ ಅವರ ವಾದವಾಗಿತ್ತು : ಚಿಂತಕ ಶಿವಸುಂದರ್
ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ರಂಗಸ್ವಾಮಿ, ಬಿ ಎನ್ ಪ್ರತಾಪ್, ಲತಾ, ಧರ್ಮ, ವಾಸು, ಹೊನ್ನಪ್ಪ, ಪ್ರಭಾಕರ್, ಗಿರೀಶ್, ಮೈಲಾರಪ್ಪ ಹಾಗೂ ಇನ್ನಿತರರಿದ್ದರು.