ಹೋಮ್ ಗಾರ್ಡ್(ಗೃಹರಕ್ಷಕ ದಳ) ಡ್ಯೂಟಿಗೆ ಹಾಕುವ ವಿಚಾರಕ್ಕೆ ಲಂಚ ಸ್ವೀಕರಿಸುವ ವೇಳೆ ಹೋಮ್ ಗಾರ್ಡ್ ಕಮಾಂಡರ್‌ವೊಬ್ಬರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ಜಂಬಣ್ಣ ಎಂಬಾತ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದ ಹೋಮ್ ಗಾರ್ಡ್ ಕಮಾಂಡರ್. ನಗರದ ಮಹಿಳಾ ಪೊಲೀಸ್ ಠಾಣೆಗೆ ಡ್ಯೂಟಿ ಹಾಕುವ ವಿಚಾರಕ್ಕೆ ಹೋಮ್ ಗಾರ್ಡ್ವೊಬ್ಬರ ಬಳಿ ಇವರು 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ರಾಯಚೂರು ಲೋಕಾಯುಕ್ತ ಎಸ್ಪಿ ಸತೀಶ್ ಎಸ್ ಚಿಟ್ಟಗುಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.
ಕಮಾಂಡರ್ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ಹೋಮ್ ಗಾರ್ಡ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ವೇಳೆ ಹೋಮ್ ಗಾರ್ಡ್ ಬಳಿ ₹5,000 ಹಣ ಪಡೆಯುವ ವೇಳೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಆಗ ರೆಡ್ ಹ್ಯಾಂಡ್ ಆಗಿ ಕಮಾಂಡರ್ ಸಿಕ್ಕಿಬಿದ್ದಿದ್ದು, ಸದ್ಯ ಲೋಕಾಯುಕ್ತ ಪೊಲೀಸರು ಜಂಬಣ್ಣನ ವಿಚಾರಣೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮದ್ದೂರು ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ, ಪ್ರಗತಿಪರ ಸಂಘಟನೆ ಪ್ರತಿನಿಧಿಗಳ ಸಭೆ
ಹೋಮ್ ಗಾರ್ಡ್ಗಳನ್ನು ನಗರದ ವಿವಿಧ ಇಲಾಖೆಯ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಹೋಮ್ ಗಾರ್ಡ್‌ಗಳಿಗೆ ಕೆಲಸವನ್ನು ನಿಗದಿಗೊಳಿಸುವ ಮೂಲಕ ಕೆಲಸಕ್ಕೆ ಕಮಾಂಡರ್ ಸೂಚನೆ ನೀಡುತ್ತಾರೆ. ಅಲ್ಲದೇ, ಡ್ಯೂಟಿ ಹಾಕುವುದಕ್ಕೆ ಕಮಾಂಡರ್‌ಗಳು ಹಣ ಪಡೆಯುತ್ತಾರೆ ಎನ್ನುವ ಆರೋಪಗಳು ಆಗಾಗ ಕೇಳಿ ಬರುತ್ತಿದ್ದವು.