ಇಂದು ಬೆಳಗ್ಗೆ ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಿರುವ ಮಾದಕ ದ್ರವ್ಯ ನಿಗ್ರಹ ದಳ (ಸಿಸಿಬಿ) ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ₹84 ಲಕ್ಷ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದು, 6 ಮಂದಿಯನ್ನು ಬಂಧಿಸಿದೆ. ರಾಜಗೋಪಾಲನಗರದ ದರ್ಶನ್, ಪ್ರಜ್ವಲ್ ಹಾಗೂ ಕೇರಳದ ಅಲೆಕ್ಸ್ ವರ್ಗಿಸ್, ಹಾದಿಲ್, ಅನಸ್ಮೊಯ್ದು, ಜೋಬಿನ್ ಬಂಧಿತ ಆರೋಪಿಗಳು.
ಬ್ಯಾಡರಹಳ್ಳಿಯಲ್ಲಿ 1.200 ಕೆಜಿ ಗಾಂಜಾ, 220 ಗ್ರಾಂ ಹೈಡ್ಯೋ ಗಾಂಜಾ ಹಾಗೂ 2 ಐಫೋನ್ ಸೇರಿ ₹13 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ತಲಘಟ್ಟಪುರ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ ತಂಬಾಕು ಹಾಗೂ ನಿಕೋಟಿನ್ ಒಳಗೊಂಡ ₹61 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳು ಐಶಾರಾಮಿ ಜೀವನ ನಡೆಸಲು ಕೇರಳದಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿ ವೇಳೆ ಪರವಾನಗಿ ಇಲ್ಲದೆ ಸಾಗಾಟ ಮತ್ತು ಮಾರಾಟ ಮಾಡುತ್ತಿದ್ದ ಗಣೇಶ್, ಟೊಬ್ಯಾಕೋ ಪಟ್ಟಣ, ಕೂಲ್ ಲಿಪ್, ಎಸ್ಜಿಟಿ, ಸ್ವಾಗಟ ಪಾನ್ ಮಸಾಲಾ ಸೇರಿದಂತೆ ವಿವಿಧ ರೀತಿಯ ತಂಬಾಕು ಪೊಟ್ಟಣಗಳು ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು | ನಟ ಕಮಲ್ ಹಾಸನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ; ಇಬ್ಬರ ವಿರುದ್ಧ ಎಫ್ಐಆರ್
ಎಚ್ಬಿಆರ್ ಲೇಔಟ್ ಬಳಿ ದಾಳಿ ನಡೆಸಿ ನಿಷೇಧಿತ ಸಿಗರೇಟ್, ಹುಕ್ಕಾ, ಫಾರಿನ್ ಸಿಗರೇಟ್ನಂತರ ವಿದೇಶಿ ಇ-ಸಿಗರೇಟ್ ಮಾದರಿಗಳನ್ನು ವಶಕ್ಕೆ ಪಡೆಯಲಾಗಿದೆ.