ಕೊಪ್ಪಳದ ಗಂಗಾವತಿ ವಿಧಾನ ಸಭಾ ಉಪ ಚುನಾವಣೆ ಸನ್ನಿಹಿತವಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಾರ್ಯಕರ್ತರಿಗೆ ಸೂಚಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಗಂಗಾವತಿ ವಿಧಾನ ಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಂದ ಹಾಗೂ ಕೊಪ್ಪಳ ನಗರದಿಂದ ಆಗಮಿಸಿದ್ದ ಕಾರ್ಯಕರ್ತರ ಸಭೆಗಳಲ್ಲಿ ಅವರು ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಈಗಿಂದಲೇ ಸಿದ್ಧತೆ ನಡೆಸಿ, ಕಾನೂನು ಚೌಕಟ್ಟಿನಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ನಮ್ಮ ಚಟುವಟಿಕೆಗಳನ್ನು ಕೂಡಲೇ ಆರಂಭಿಸಬೇಕು. ಕ್ಷೇತ್ರದ ಎಲ್ಲಾ ಕಾರ್ಯಕರ್ತರನ್ನು ಒಟ್ಟುಗೂಡಿಸುವ ಕೆಲಸ ಮಾಡಿ. ಮುಂದಿನ ವಾರ ಕೊಪ್ಪಳ ಅಥವಾ ಗಂಗಾವತಿಗೆ ಬರುವ ಬಗ್ಗೆ ಮಾಹಿತಿ ನೀಡಲಾಗುವುದು” ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಸಭೆಯಲ್ಲಿ ಸೈಯ್ಯದ್ ಸಲಿಮುದ್ದೀನ್ ಅಲ್ವಿ, ಮೊಹಮ್ಮದ್ ಕೀರ್ಮಾನಿ ಖಾಝಿ, ಮೌಲಾ ಹುಸೇನ್ ಹಣಗಿ, ಮನೋಹರ ಸ್ವಾಮಿ ಹಿರೇಮಠ, ಕಾಸೀಮ್ ಸಾಬ್ ಗದ್ವಾಲ್ ಎಫ್, ರಾಘವೇಂದ್ರ, ಇಲಿಯಾಸ್ ಖಾದ್ರಿ, ಬಸವರಾಜ್ ಚಿಲವಾಡಗಿ, ಸಂಗನಗೌಡ, ವೆಂಕಟೇಶ್ ಬಾಬು, ವಿಶ್ವನಾಥ್ ಮಾಲಿ ಪಾಟೀಲ್, ನಾಗರಾಜ್ ಕೊತ್ವಲ್, ಉಮರ್ ಹುಸೇನ್ ಸಾಬ್, ಆಸೀಫ್ ಅಹಮದ್, ಆನಂದ್ ಹಾಸಲ್ಕರ್, ರಹೆಮತ್ ಸಂಪಂಗಿ, ಅಯ್ಯೂಬ್ ಅಲಿ, ಈಶಪ್ಪ ಕುಂಬಾರ, ವೆಂಕಟೇಶ್, ಹೊನ್ನೂರ್ ಅಲಿ,ರಫೀಕ್ ಸಂಪಂಗಿ, ಜೆ.ರವಿ ನಾಯಕ, ಸಿದ್ದು ಹೊಸಮಠ, ಬಾಬರ್, ಇಲಿಯಾಸ್ ಬಾಬಾ, ಸನ್ನಿಕ್, ಗಿರೀಶ್ ಗಾಯಕ್ವಾಡ್, ಗವಿಸಿದ್ದಯ್ಯ, ಸಾಜೀದ್, ಜುಬೇರ್, ಬಸವರಾಜ್ ಜೇಕಿನ್, ಪಾಮಣ್ಣ ಯಾದವ್, ವೀರನಗೌಡ ವಿರೂಪಾಕ್ಷಯ್ಯ ಸ್ವಾಮಿ, ವೀರೇಶ ಕಿನ್ನಾಳ ಹಾಗೂ ಕಾರ್ಯಕರ್ತರು ಇದ್ದರು.
ಇದನ್ನೂ ಓದಿ: ಕೊಪ್ಪಳ | ಕತ್ತು ಹಿಸುಕಿ ಪತ್ನಿಯನ್ನು ಕೊಂದ ಪತಿ