ತನ್ನನ್ನು ಪಿಕಪ್ ಮಾಡಲು ಬಂದ ವಾಹನವನ್ನೇ ಮಹಿಳೆಯೋರ್ವಳು ಕಳುವು ಮಾಡಿ ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶೃಂಗೇರಿಯಿಂದ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಮಹಿಳೆಯನ್ನು ಪಿಕ್ ಅಪ್ ಮಾಡಲು ಸ್ವಿಫ್ಟ್ ಡಿಸೈರ್ ಕಾರು ಬಂದಿತ್ತು. ರಮೇಶ್ ಗೌಡ ಎನ್ನುವವರು ಚಾಲಕರಾಗಿದ್ದು, ತಾಹೀರ್ ಅಹಮದ್ ಕಾರು ಮಾಲಿಕರಾಗಿದ್ದಾರೆ. ಕಾರನ್ನು ಮೊಬೈಲ್ ಮೂಲಕ ಬುಕ್ ಮಾಡಿದ್ದ ಮಹಿಳೆಯನ್ನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹತ್ತಿಸಿಕೊಂಡು ಸಾಗರ ರಸ್ತೆಯಲ್ಲಿರುವ ಬ್ಲೂ ಮೂನ್ ಲಾಡ್ಜ್ ಗೆ ವಿಶ್ರಾಂತಿಗಾಗಿ ಕರೆದುಕೊಂಡು ಬಂದಿದ್ದರು.
ಈ ವೇಳೆ ಮಹಿಳೆಯು ವಾಶ್ರೂಮ್ ಬಳಸುವಂತೆ ಹಾಗೂ ಕೊಂಚ ವಿಶ್ರಮಿಸುವಂತೆಯೂ ಸಹ ಚಾಲಕನಿಗೆ ಹೇಳಿದ್ದಳು. ಚಾಲಕ ವಾಶ್ ರೂಮ್ ಗೆ ಹೋಗುತ್ತಿದ್ದಂತೆಯೇ ಕೊಠಡಿಯ ಬಾಗಿಲನ್ನು ಎಳೆದುಕೊಂಡು ಕಾರ್ ತೆಗೆದುಕೊಂಡು ಮಹಿಳೆ ಪರಾರಿಯಾಗಿದ್ದಾಳೆ. ವಿಷಯ ಅರಿತ ಮಾಲೀಕ ಶೃಂಗೇರಿಯಿಂದ ಶಿವಮೊಗ್ಗ ಬಂದಿದ್ದು ತುಂಗಾ ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ಪೊಲೀಸರು ಲಾಡ್ಜ್ ತಪಾಸಣೆ ಮಾಡಿದ್ದಾರೆ.
ಆದರೆ ಮಾಲಿಕನ ಹೇಳಿಕೆ ಬೇರೆ ರೀತಿಯಾಗಿದೆ. ಕಾರಿನ ಚಾಲಕ ನನ್ನ ಬಳಿ ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿರುವುದಾಗಿ ಕಾರು ಪಡೆದುಕೊಂಡು ಹೋಗಿದ್ದಾರೆ. ಈಗ ಮಹಿಳೆ ಎಲ್ಲೋ ಬೋರ್ಡ್ ಕಾರನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ. ಆಧಾರ್ ಕಾರ್ಡ್ ಪ್ರಕಾರ ಮಹಿಳೆ ಬೆಳಗಾವಿ ಜಿಲ್ಲೆಯ ವಸುಂಧರಾ ಎಂದು ತಿಳಿದು ಬರುತ್ತಿದೆ ಎಂದು ವಿವರಿಸಿದ್ದಾರೆ.