ಸರ್ಕಾರಿ ಜಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಎಐಕೆಎಸ್ ಸಂಘಟನೆಯಿಂದ ಮಾನ್ವಿ ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದರು.
ಮಾನ್ವಿ ಹಾಗೂ ಸಿರವಾರ ತಾಲೂಕಿನಲ್ಲಿ ಭೂಮಿ ಇಲ್ಲದವರು ಸರಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದು, ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ಸಾಗುವಳಿ ಪಟ್ಟಾ ನೀಡುತ್ತಿಲ್ಲ ಎಂದು ಆರೋಪಿಸಿ ಎಐಕೆಎಸ್ ಸಂಘಟನೆಯಿಂದ ಮಾನ್ವಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಭೂಮಿ ಇಲ್ಲದವರು ಉಳುಮೆ ಮಾಡುತ್ತಿದ್ದು,ಆದರೆ ಸರಕಾರ ಸಾಗುವಳಿ ಚೀಟಿ ನೀಡದೆ ಶೋಷಿತರನ್ನು ಸತಾಯಿಸಲಾಗುತ್ತದೆ, ಇದು ಅನ್ಯಾಯ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೋಳ ಖರೀದಿಗೆ ಒತ್ತಾಯಿಸಿ ; ಜೆಡಿಎಸ್ ಪ್ರತಿಭಟನೆ
ಮಾನ್ವಿ ಪಟ್ಟಣದಲ್ಲಿ ನಿವೇಶನ ಇಲ್ಲದೆ ಬಡ ಜೀವಿಗಳು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆ.ಆದರೆ ಬುರಾಂಪುರ ಗ್ರಾಮದಲ್ಲಿ ಸರ್ವೆ ನಂಬರ್ 54ರಲ್ಲಿ ಸರಕಾರಿ ಜಾಗ ಇದ್ದು ಕೂಡಲೇ ನೊಂದವರಿಗೆ ನಿವೇಶನ ಕೊಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
