ಕೈಗಾರೀರಣ, ವಾಹನ ಸಂಚಾರ ದಟ್ಟಣೆ, ಮಣ್ಣಿಗೆ ರಾಸಾಯನಿಕ ಬೆರೆಸುವುದರಿಂದ ಪರಿಸರ ಹದಗೆಡುತ್ತಿದೆ. ಹಾಗಾಗಿ ನಾವು ಪರಿಸರದ ಬಗ್ಗೆ ಕಾಳಜಿ ಇಟ್ಟು ಪ್ರತಿಯೊಬ್ಬರೂ ಒಂದೊಂದು ಗಿಡ ನೆಟ್ಟು ಪೋಷಿಸುವುದರಿಂದ ಪರಿಸರ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದು ಪ್ರಜ್ಞಾವಂತ ವೇದಿಕೆಯ ಅಧ್ಯಕ್ಷ ಸಿ ಎಸ್ ವೆಂಕಟೇಶ ಹೇಳಿದರು.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪ್ರಜ್ಞಾವಂತ ವೇದಿಕೆಯಿಂದ ವಿಶ್ವಪರಿಸರ ದಿನದ ಅಂಗವಾಗಿ ಶಂಭುಲಿಂಗನ ಕಟ್ಟೆ ಸ್ಮಶಾನದಲ್ಲಿ ಗಿಡ ನೆಟ್ಟು ನೀರಿರೆರೆದು ಮಾತನಾಡಿದರು.

ರಂಗನಾಯಕಿ ಸಮಾಜದ ಮಾಜಿ ಅಧ್ಯಕ್ಷೆ ಆಶಾಲತಾ ಪುಟ್ಟೇಗೌಡ ಮಾತನಾಡಿ, “ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಬರುವಂಥ ಮುಂಜಾಗೃತ ಕಾರ್ಯಕ್ರಮಗಳನ್ನು ನಡೆಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಎಲ್ಲ ವಂಚಿತ ಶ್ರಮಿಕ ನಿವಾಸಿಗಳಿಗೂ ಹಕ್ಕುಪತ್ರ ವಿತರಿಸಲು ತೀರ್ಮಾನ
ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ, ಕಾಂಗ್ರೆಸ್ ಜಿಲ್ಲಾ ಯುವಮುಖಂಡ ಅನಿಲ್ ಕುಮಾರ, ಪರಿಸರ ಪ್ರೇಮಿ ನಾರಾಯಣಗೌಡ, ಕನ್ನಡ ಸಾಹಿತ್ಯ ಪರಿಷತ್ ನಗರಾಧ್ಯಕ್ಷ ಎನ್ ಸರಸ್ವತಿ, ಚಿಕ್ಕ ತಮ್ಮೇಗೌಡ, ಬಿ ಟಿ ದಾಸ್ ಪ್ರಕಾಶ್, ನಾರಾಯಣ, ಪುಟ್ಟಸ್ವಾಮಿ, ನಂಜುಂಡೇಶ್ವರ ಸೇರಿದಂತೆ ಮುಂತಾದವರು ಭಾಗಿಯಾಗಿದ್ದರು.