‘ಗ್ಯಾರಂಟಿ ವಿರೋಧಿಗಳ’ ಗಂಜಿಕೇಂದ್ರವಾಯಿತೇ ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್‌ಗಳ ಪರಿಷತ್ತು?

Date:

Advertisements

ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಿರುವ ಕರ್ನಾಟಕ ವೃತ್ತಿಪರ ಸಿವಿಲ್ ಇಂಜಿನಿಯರುಗಳ ಪರಿಷತ್ತು ಮೋದಿ ಭಕ್ತರಿಗೆ ಮಣೆ ಹಾಕಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟಿ ಹಾಕಿದೆ.

ಹೊಸ ಪರಿಷತ್ತಿನ ಸದಸ್ಯ ಸ್ಥಾನಗಳಲ್ಲಿ ‘ಮೋದಿ ಭಕ್ತರ’ನ್ನು ಕುಳ್ಳಿರಿಸಿರುವ ಆಘಾತಕಾರಿ ಆರೋಪಗಳು ಕೇಳಿಬಂದಿವೆ. ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಕಟುವಾಗಿ ಟೀಕಿಸುವವರು, ಆರ್‌ಎಸ್‌ಎಸ್‌ ಬಗ್ಗೆ ಸಹಾನುಭೂತಿ ಉಳ್ಳವರು, ಕೋಮುವಾದವನ್ನು ಉಸಿರಾಡುವವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿಹೊಗಳುವವರೇ ಬಹುತೇಕ ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್‌ಗಳ ಪರಿಷತ್‌ ಸದಸ್ಯರಾಗಿ ನೇಮಕವಾಗಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಸರ್ಕಾರದಲ್ಲೂ ಮೋದಿ ಭಕ್ತರಿಗೆ ಮಣೆ ಹಾಕಲಾಗುತ್ತಿರುವ ಕುರಿತ ಇಂತಹ ಆರೋಪಗಳು ಕೇಳಿ ಬರುತ್ತಿರುವುದು ಕಳೆದ ಎರಡು ವರ್ಷಗಳಲ್ಲಿ ಇದೇ ಮೊದಲಲ್ಲ. ಕೆಲವು ನೇಮಕಗಳನ್ನು ಸರ್ಕಾರ ರದ್ದು ಮಾಡಿದೆಯಾದರೆ, ಇನ್ನು ಕೆಲವಕ್ಕೆ ರಾಜಭವನದ ಕಡೆಗೆ ಬೆರಳು ತೋರಿ ಬಾಯಿ ಮುಚ್ಚಿಸಿದೆ.

Advertisements

ವೈದ್ಯರು, ವಕೀಲರು ಮುಂತಾದ ಕ್ಷೇತ್ರಗಳಲ್ಲಿ ಮಾಡಿರುವಂತೆ ರಾಜ್ಯದ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿಯೂ ವೃತ್ತಿಪರತೆ ತರುವುದು ಈ ಪರಿಷತ್ ರಚನೆಯ ಮೂಲ ಉದ್ದೇಶ. ಈ ಪರಿಷತ್ತಿಗೆ 18 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಮುಂಬರುವ ಅವಧಿಗಳಲ್ಲಿ ಈ ಸದಸ್ಯರು ಚುನಾವಣೆಗಳ ಮೂಲಕ ಆರಿಸಿ ಬರಲಿದ್ದಾರೆ.

18 ಮಂದಿಯ ಪೈಕಿ ಪದನಿಮಿತ್ತ ಸದಸ್ಯರ ವಿನಾ ಉಳಿದ ಹಲವರ ಕುರಿತು ಕೇಸರಿ ಹಿನ್ನೆಲೆಯ ಆರೋಪಗಳು ಕೇಳಿ ಬಂದಿವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ ಕಾಂಗ್ರೆಸ್ ಹಿನ್ನೆಲೆಯ ಸದಸ್ಯರನ್ನು ನೇಮಕ ಮಾಡಲಾಗುತ್ತಿತ್ತೇ ಎಂದು ಅನೇಕ ವೃತ್ತಿಪರ ಇಂಜಿನಿಯರುಗಳು ಅಸಮಾಧಾನ ಹೊರಹಾಕಿದ್ದಾರೆ.

ಈ ಪರಿಷತ್ತಿನಲ್ಲಿ ಒಬ್ಬ ಮುಸಲ್ಮಾನ ಸದಸ್ಯರೂ ಇಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಒಬ್ಬನೇ ಒಬ್ಬ ಮುಸ್ಲಿಮ್ ಸಿವಿಲ್ ಇಂಜಿನಿಯರ್ ಕೂಡ ಸಿಗಲಿಲ್ಲವೇ ಎಂದು ಮುಸಲ್ಮಾನರು ಪ್ರಶ್ನಿಸಿದ್ದಾರೆ. ಬಿಜೆಪಿಯಲ್ಲಿ ಮುಸ್ಲಿಮರಿಗೆ ಸ್ಥಾನ ಇರುವುದು ಅಸಾಧ್ಯ. ಕಾಂಗ್ರೆಸ್ ಕೂಡ ಮುಸಲ್ಮಾನರನ್ನು ದೂರ ಇಟ್ಟಿದೆಯೇ ಎಂದು ರಾಜ್ಯ ಸರ್ಕಾರ ವಿವರಣೆ ನೀಡಬೇಕೆಂದು ಮುಸಲ್ಮಾನರು ಖಾರವಾಗಿ ಆಗ್ರಹಿಸಿದ್ದಾರೆ.

ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವೃತ್ತಿಪರತೆ ತರುವುದು ಸೇರಿದಂತೆ ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್‌ಗಳ ಧ್ಯೇಯೋದ್ದೇಶಗಳನ್ನು ಈಡೇರಿಸಲು ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಎರಡು ವರ್ಷಗಳ ಅವಧಿಗೆ ರಚಿಸಿರುವ ಈ ಪರಿಷತ್ತನ್ನು ರಚಿಸಲಾಗಿದೆ.

2024ರ ಫೆಬ್ರವರಿಯಲ್ಲಿ ಕಾಂಗ್ರೆಸ್ ಸರಕಾರವು ‘ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್ ಕಾಯ್ದೆ’ಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಿತು. ಇದರ ಭಾಗವಾಗಿ ರಾಜ್ಯದ ಸಿವಿಲ್ ಎಂಜಿನಿಯರ್‍ಸ್‌ಗಳಿಗಾಗಿ ಪರಿಷತ್ತೊಂದನ್ನು ರಚಿಸಲು ತೀರ್ಮಾನಿಸಲಾಯಿತು. ಹಾಗೂ, ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್‌ಗಳಿಗೆ ಪ್ರಮಾಣ ಪತ್ರ ನೀಡುವುದು, ಅವರುಗಳನ್ನು ಒಂದೇ ಸೂರಿನಡಿ ತರುವುದು, ಅವರ ವೃತ್ತಿಯನ್ನು ಪ್ರಮಾಣೀಕರಿಸುವುದು ವಿಧೇಯಕದ ಉದ್ದೇಶವಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿವಿಲ್ ಎಂಜಿನೀಯರ್‍ಸ್‌ಗಳಿಗೂ ವೃತ್ತಿಪರ ಸಂಸ್ಥೆಯೊಂದನ್ನು ಕಟ್ಟಿಕೊಳ್ಳಲು ಕಾನೂನಿನ ಅಡಿಯಲ್ಲಿ ಸರಕಾರ ಅವಕಾಶ ಮಾಡಿಕೊಟ್ಟಿತು. ಇದಕ್ಕೆ ವೃತ್ತಿಪರ ಎಂಜಿನೀಯರ್‍ಗಳಿಂದ ಶ್ಲಾಘನೆಯೂ ವ್ಯಕ್ತವಾಗಿತ್ತು.

ಮುಂದುವರಿದ ಭಾಗವಾಗಿ 2025ರ ಮೇ ತಿಂಗಳಲ್ಲಿ ಸರಕಾರದ ಕಡೆಯಿಂದ ಅಧಿಸೂಚನೆಯೊಂದು ಹೊರಬಿದ್ದಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಇಲ್ಲಿ ಅಚ್ಚರಿ ಮತ್ತು ಆತಂಕದ ಅಂಶ ಏನೆಂದರೆ, ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್‌ ಕಾಯ್ದೆಯ ಭಾಗವಾಗಿ ಪರಿಷತ್‌ನ್ನು ಸರಕಾರ ಆರಂಭಿಸಿರುವುದು ಅಧಿಸೂಚನೆಯಲ್ಲಿ ಪ್ರಕಟಿಸಲಾಯಿತು. ಎಲ್ಲ ಕಂದಾಯ ವಿಭಾಗಗಳಿಂದ ಒಟ್ಟು 10 ಸದಸ್ಯರನ್ನು ಸ್ಥಾಪಕ ಸದಸ್ಯರಾಗಿ ಪರಿಷತ್‌ಗೆ ನೇಮಿಸಿರುವುದು ಅಧಿಸೂಚನೆಯ ಪ್ರಮುಖ ಅಂಶವಾಗಿತ್ತು. ಮುಂದಿನ ಎರಡು ವರ್ಷಗಳ ಅವಧಿಗೆ ಸರಕಾರದಿಂದ ನಾಮನಿರ್ದೇಶಿತ ಸದಸ್ಯರುಗಳ ಜತೆಗೆ ಈ ಸ್ಥಾಪಕ ಸದಸ್ಯರುಗಳು ರಾಜ್ಯದ ವೃತ್ತಿಪರ ಸಿವಿಲ್ ಎಂಜಿನೀಯರ್‍ಸ್‌ಗಳನ್ನು ಪ್ರತಿನಿಧಿಸಲಿದ್ದಾರೆ.

ನಾಲ್ಕು ಕಂದಾಯ ವಿಭಾಗಗಳಾದ ಬೆಂಗಳೂರು ವಲಯ, ಬೆಳಗಾವಿ ವಲಯ, ಕಲಬುರಗಿ ವಲಯ ಹಾಗೂ ಮೈಸೂರು/ಮಂಗಳೂರು ವಲಯಯಕ್ಕೆ ಒಟ್ಟು ಹತ್ತು ಸದಸ್ಯರು ಹಂಗಾಮಿಯಾಗಿ ನೇಮಕವಾಗಿದ್ದು, ಇವರಲ್ಲಿ ಬಹುತೇಕರು ಬಿಜೆಪಿ ಬೆಂಬಲಿಗರಾಗಿದ್ದು, ಇವರೆಲ್ಲರೂ ಖಾಸಗಿ ಇಂಜಿನಿಯರ್‌ಗಳಾಗಿದ್ದಾರೆ.

ಬೆಂಗಳೂರು ವಲಯಕ್ಕೆ ಶ್ರೀಕಾಂತ ಎಸ್‌ ಚನಲ್‌, ಡಿ ರಂಗನಾಥ್‌, ಗಿರೀಶ್‌ ಎನ್‌ ಸ್ವಾಮಿ ಮತ್ತು ಡಾ. ಶಾಂತಕುಮಾರ್‌ ರಾಜಮಾನೆ ನೇಮಕವಾಗಿದ್ದಾರೆ. ಹಾಗೆಯೇ ಬೆಳಗಾವಿ ವಲಯಕ್ಕೆ ಡಾ. ಅರವಿಂದ್‌ ಗಲಗಲಿ, ಜಗದೀಶ್‌ ಎಸ್‌ ನಂದಿ ಮತ್ತು ಕಲಬುರಗಿ ವಲಯಕ್ಕೆ ಮುರುಳಿಧರ್‌ ಕರಲ್ಲಿಕರ್‌, ಹಾವ್‌ಶೆಟ್ಟಿ ಪಾಟೀಲ್‌ ಹಾಗೂ ಮೈಸೂರು/ಮಂಗಳೂರು ವಲಯಕ್ಕೆ ದೀಪಕ್‌ ಹೆಚ್‌ ಎಸ್‌, ಜಗದೀಶ್‌ ಪ್ರಸಾದ್‌ ರಾವ್‌ ನೇಮಕವಾಗಿದ್ದಾರೆ.

ಬೆಂಗಳೂರು ವಲಯಕ್ಕೆ ನೇಮಕವಾಗಿರುವ ಶ್ರೀಕಾಂತ್‌ ಎಸ್‌ ಚನಲ್‌ ಎಂಬುವರು ತಮ್ಮ ಫೇಸ್‌ಬುಕ್‌ ಪುಟದಲ್ಲಿ ‘ನಮ್ಮ ಮೋದಿ’ ಪೇಜ್‌ನಲ್ಲಿ ಹಂಚಿಕೊಂಡಿರುವ ಗುರುರಾಜ ಕರ್ಜಗಿ ಅವರ ಹೇಳಿಕೆ ಆಧಾರಿತ ‘ಬಿಟ್ಟಿ ಭಾಗ್ಯಗಳು ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತವೆ’ ಎನ್ನುವ ವಿಡಿಯೋವನ್ನು ಹಂಚಿಕೊಂಡಿದನ್ನು ಕಾಣಬಹುದು. ಶ್ರೀಕಾಂತ್‌ ಎಸ್‌ ಚನಲ್‌ ಅವರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ಹೀಯಾಳಿಸಿಕೊಂಡು ಬರುತ್ತಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಅಕೌಂಟ್‌ಗಳಲ್ಲಿ ಮೋದಿ ಗುಣಗಾನ, ಕಾಂಗ್ರೆಸ್‌ನ ಅಪಮಾನದ ಆರೋಪವಿದೆ.

ಶ್ರೀಕಾಂತ್‌ ಎಸ್‌ ಚನಲ್‌ ಅವರನ್ನು ಈ ದಿನ.ಕಾಮ್‌ ಸಂಪರ್ಕಿಸಿದಾಗ ತಾವೂ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರೋಧಿ ಎಂಬುದನ್ನು ಒಪ್ಪಿಕೊಂಡು ಮಾತನಾಡಿದ ಅವರು, “ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬಿಟ್ಟಿ ಭಾಗ್ಯ ಅಲ್ಲದೇ ಮತ್ತೇನೂ ಅಲ್ಲ. ಬಿಟ್ಟಿ ಭಾಗ್ಯಗಳು ರಾಜ್ಯ ಮತ್ತು ದೇಶದ ಆರ್ಥಿಕ ವ್ಯವಸ್ಥೆಯನ್ನು ಹಾಳುಮಾಡುತ್ತವೆ. ನಾನು ಈಗಲೂ ಗ್ಯಾರಂಟಿ ಯೋಜನೆಗಳ ವಿರೋಧಿಯಾಗಿದ್ದೇನೆ” ಎಂದು ಸ್ಪಷ್ಟನೆ ನೀಡಿದರು.

ಪರಿಷತ್‌ಗೆ ನೇಮಕವಾದ ಹತ್ತು ಮಂದಿ ಸದಸ್ಯರ ಪೈಕಿ ಕಾಂಗ್ರೆಸ್‌ಗಿಂತ ಬಿಜೆಪಿ ಬೆಂಬಲಿಗಾರಿದ್ದಾರೆ ಎನ್ನಲಾಗಿದೆ. ಜಾತಿಯಲ್ಲೂ ಇವರೆಲ್ಲ ಬಲಾಢ್ಯ ಸಮುದಾಯಗಳಿಗೆ ಸೇರಿದವರಾಗಿದ್ದಾರೆ. ನೇಮಕದಲ್ಲಿ ಮಹಿಳೆಯರು, ಹಿಂದುಳಿದ ವರ್ಗಗಳು ಹಾಗೂ ಮುಸ್ಲಿಂ ಸಮುದಾಯದಗಳನ್ನು ಕಡೆಗಣಿಸಲಾಗಿದೆ. ಬಲಾಢ್ಯ ಜಾತಿಗಳ ಕೂಟವೇ ಪರಿಷತ್‌ಗೆ ಬಂದು ಕುಳಿತಂತೆ ಕಾಣುತ್ತಿದೆ.

ಇತರೆ ಸದಸ್ಯರುಗಳಾದ ಡಿ. ರಂಗನಾಥ್, ಡಾ. ಸನತ್ ಕುಮಾರ್ ರಾಜಮಾನೆ, ದೀಪಕ್ ಎಚ್. ಎಸ್, ಜಗದೀಶ್ ಪ್ರಸಾದ್ ರಾವ್‌ ಮತ್ತಿತರರು ಕೂಡ ಸಿವಿಲ್ ಎಂಜಿನೀಯರ್‍ಸ್‌ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ನಿರಂತರವಾಗಿ ಕಾಂಗ್ರೆಸ್ ವಿರೋಧಿ ನಿಲುವುಗಳನ್ನು ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಹೀಗಿರುವಾಗ, ಇಂತಹವರು ಹೇಗೆ ಸಿವಿಲ್ ಎಂಜಿನಿಯರ್‍ಗಳ ಪರಿಷತ್‌ಗೆ ಸ್ಥಾಪಕ ಸದಸ್ಯರಾದರು ಎಂಬುದು ಅಚ್ಚರಿಗೆ ಕಾರಣವಾಗಿದೆ.

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೋಮುವಾದದ ಪರಮವಿರೋಧಿಗಳು. ಅಂತಹವರ ಇಲಾಖೆಯೂ ಬಿಜೆಪಿ ಬೆಂಬಲಿಗರಿಗೆ ಮಣೆ ಹಾಕಿರುವುದು ಇನ್ನಷ್ಟು ಆಶ್ಚರ್ಯದ ಸಂಗತಿ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಪ್ಪಿ ತಪ್ಪಿಯೂ ಕಾಂಗ್ರೆಸ್‌ ಬೆಂಬಲಿಗರಿಗೆ ಯಾವುದೇ ಸಣ್ಣ ಹುದ್ದೆಯೂ ಸಿಗುವುದಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರದಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಕೋಮುವಾದ ಬೆಂಬಲಿಸುವ ಜನರಿಗೆ ಸಿಕ್ಕಿವೆ ಎನ್ನುವ ಗುರುತರ ಆರೋಪಕ್ಕೆ ಕರ್ನಾಟಕ ವೃತ್ತಿಪರ ಸಿವಿಲ್‌ ಇಂಜಿನಿಯರ್‌ಗಳ ಪರಿಷತ್‌ ಸದಸ್ಯರ ನೇಮಕ ಒಂದು ಹೊಸ ಸೇರ್ಪಡೆ. ಆರ್‌ಎಸ್‌ಎಸ್‌ ಬಗ್ಗೆ ಸಹಾನುಭೂತಿ ಉಳ್ಳವರು ವೃತ್ತಿಪರ ಸಂಸ್ಥೆಗಳಲ್ಲಿ ನುಸುಳಿದ್ದಾರೆ ಎನ್ನುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಂ ರಮೇಶ್‌ ಅವರ ಆರೋಪಕ್ಕೆ ಈಗ ಮತ್ತಷ್ಟು ಇಂಬು ಸಿಕ್ಕಿದೆ.

ರಾಜ್ಯದಲ್ಲಿ ಕಾನೂನು ಜಾರಿಯಾದ ನಂತರ, ಅಧಿಸೂಚನೆ ಹೊರಬೀಳುವ ಕೆಲವೇ ದಿನಗಳ ಮುಂಚೆಯಷ್ಟೆ ಇದೇ ವ್ಯಕ್ತಿಗಳು ಗುಂಪೊಂದನ್ನು ರಚಿಸಿಕೊಂಡಿದ್ದರು. ಇದೀಗ ಇದೇ ಗುಂಪಿನ ಸುಮಾರು ಒಟ್ಟು 9 ಸದಸ್ಯರಗಳು ಸ್ಥಾಪಕ ಸದಸ್ಯರಾಗಿ ಸರಕಾರದ ಭಾಗವಾಗಲು ಹೊರಟಿವೆ ಎನ್ನುತ್ತವೆ ಮೂಲಗಳು.

ಹಿಂದುಳಿದ ವರ್ಗಗಳ ನಾಯಕರೆಂದು ಕರೆಯಲಾಗುವ ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ಜಾತಿಗಳ ಪ್ರತಿನಿಧಿಗಳನ್ನು ಈ ಪರಿಷತ್ತಿಗೆ ನೇಮಿಸುವಲ್ಲಿ ನಿರ್ಲಕ್ಷ್ಯ ತೋರಿದ್ದಾದರೂ ಹೇಗೆ ಎಂಬುದು ಕೂಡ ಇಲ್ಲಿ ಪ್ರಶ್ನೆಯಾಗಿದೆ. ರಾಜ್ಯಾದ್ಯಂತ ಇರುವ ಸಿವಿಲ್ ಎಂಜಿನಿಯರ್‍ಗಳನ್ನು ಪ್ರತಿನಿಧಿಸುವ ಈ ಪರಿಷತ್‌ನಲ್ಲಿ ಸಮಸ್ತ ಸಮುದಾಯಗಳ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾಧಾನ ಮೂಡಿಸಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

1 COMMENT

  1. ಕರ್ನಾಟಕ ಸಿವಿಲ್ ಇಂಜಿನಿಯರ್ ವಿಧೇಯಕ ಜಾರಿಗೆ ಬರುವುದಕ್ಕೆ ಮೂಲ ಕಾರಣ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಸಂಸ್ಥೆ ಮತ್ತು ಅದರ ಪದಾಧಿಕಾರಿಗಳು! ಹಲವು ವರ್ಷಗಳ ಸತತ ಮತ್ತು ನಿರಂತರ ಪರಿಶ್ರಮದಿಂದ ಅದು ಸಾಧ್ಯವಾಗಿದೆ!
    ಇದೇನೂ ಸರ್ಕಾರವೇ ಮುತುವರ್ಜಿ ವಹಿಸಿ ಸ್ಥಾಪಿಸಿದ ವಿಧೇಯಕ ಅಲ್ಲ! ಈ ಹೋರಾಟದ ರೂಪು ರೇಷೆ ರೂಪಿಸಿ ಅದು ಜಾರಿಗೆ ಬರುವುದಕ್ಕೆ ಮೂಲ ಕಾರಣಕರ್ತರಿಗೆ ಅದನ್ನು ನಿಭಾಯಿಸಿಕೊಂಡು ಹೋಗುವ ಗೌರವ ಕೊಡುವುದರಲ್ಲಿ ತಪ್ಪೇನು?
    ಲೇಖಕರು ಇಂತಹ ವಿಷಯಗಳನ್ನು ಗಮನದಲ್ಲಿ ಇಟ್ಟು ವಿಷಯ ಮಂಡಿಸಿದರೆ ಸೂಕ್ತ! ಇಲ್ಲಿ ಜಾತಿ ಧರ್ಮ ಮತ್ತು ರಾಜಕೀಯ ವಿಷಯಗಳು ಅನವಶ್ಯಕ ಅನಿಸುತ್ತೆ! ಆ ಸಂಸ್ಥೆಯ ಮೂಲ ಉದ್ದೇಶ ಇಂಜಿನಿಯರ್ಗಳ ಹಕ್ಕು ಮತ್ತು ಸ್ವಾಯತತೆ!! ACCE ಸಂಸ್ಥೆಯ ಹೆಮ್ಮೆಯ ಸದಸ್ಯನಾಗಿ ನಾನಿದ್ದನ್ನು ಬಹಳ ಹತ್ತಿರದಿಂದ ಬಲ್ಲೆ!!!!!🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X