ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(HPCL ಸಂಸ್ಥೆ) 2025ರಲ್ಲಿ ವಿವಿಧ ಹುದ್ದೆಗಳಿಗೆ 411 ಖಾಲಿ ಸ್ಥಾನಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಉದ್ಯೋಗ ನೇಮಕಾತಿ ಪ್ರಕ್ರಿಯೆಯಲ್ಲಿ ಜೂನಿಯರ್ ಎಕ್ಸಿಕ್ಯುಟಿವ್, ಎಂಜಿನಿಯರ್, ಮ್ಯಾನೇಜರ್, ಸೇಫ್ಟಿ ಆಫೀಸರ್ ಸೇರಿದಂತೆ ಹಲವಾರು ಹುದ್ದೆಗಳು ಸೇರಿವೆ. ಜೂನ್ 30ರೊಳಗೆ ಎಚ್‌ಪಿಸಿಎಲ್ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ತಿಳಿಸಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆ(HPCL)ಯ ಹುದ್ದೆಗಳ ಹೆಸರು:- HR ಅಧಿಕಾರಿಗಳು, ಎಕ್ಸಿಕ್ಯುಟಿವ್ ಅಸಿಸ್ಟೆಂಟ್, ಸೀನಿಯರ್ ಆಫೀಸರ್ ಸೇಲ್ಸ್, ಮೆಕಾನಿಕಲ್ ಎಂಜಿನಿಯರ್, ಎಲೆಕ್ಟ್ರಿಕಲ್ ಎಂಜಿನಿಯರ್,
ಕೆಮಿಕಲ್ ಎಂಜಿನಿಯರ್, ಚಾರ್ಟಡ್ ಅಕೌಂಟೆಟ್, ಮ್ಯಾನೇಜರ್ ಟೆಕ್ನಿಕಲ್, ಸೇಫ್ಟಿ ಆಫೀಸರ್ ಸೇರಿದಂತೆ ಇನ್ನಿತರ 411 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.
ಈ ಹುದ್ದೆಗಳಿಗೆ ₹30,000 ರಿಂದ ₹1,20,000 ವೇತನವನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ಹೊಂದಿರಬೇಕಾಗಿರುತ್ತದೆ.
ಅರ್ಜಿ ಶುಲ್ಕ :- ಸಾಮಾನ್ಯ ಮತ್ತು ಒಬಿಸಿ ವರ್ಗಕ್ಕೆ ₹1,180 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಶುಲ್ಕ ವಿನಾಯಿತಿ :- SC/ST, EWS ಮತ್ತುPWBD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕವಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಆರ್ ಸಿಬಿ ಗೆಲುವಿನ ವೇಳೆ ದುರಂತ ಆಡಳಿತ ಮತ್ತು ವಿರೋಧ ಪಕ್ಷದವರು ಕೆಸರೆರಚಾಟವನ್ನು ನಿಲ್ಲಿಸಬೇಕು
ನೇಮಕಾತಿಯ ವಿಧಾನ:- ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ಗ್ರೂಪ್ ಡಿಸ್ಕರ್ಷನ್ ಮತ್ತು ಪರ್ಸನಲ್ ಇಂಟರ್ವ್ಯೂ ಮೂಲಕ ನೇಮಕಾತಿ ಮಾಡಿಕೊಳ್ಳಲಾಗತ್ತದೆ.
ವಯೋಮಿತಿ :- ಎಲ್ಲಾ ಹುದ್ದೆಗಳಿಗೆ ಸಂಬಂಧಿಸಿದಂತೆ ಕನಿಷ್ಠ 25 ವರ್ಷದಿಂದ ಗರಿಷ್ಠ51 ವರ್ಷ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ.
ಅರ್ಜಿಸಲ್ಲಿಸಲು ಕೊನೆಯ ಜೂನ್ 30 ಕೊನೆಯ ದಿವಾಗಿದೆ.