ಶಹಾಪುರ ತಾಲೂಕಿನ ಹೊತ್ತಪೇಟ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ವ್ಯವಸ್ಥಾಪಕ ಅನಿಲ್ ತೇಜಪ್ಪ ಅವರು ಮಾತನಾಡಿ, ʼನಮ್ಮ ಸುತ್ತಮುತ್ತಲು ಹೆಚ್ಚಿನ ಗಿಡ-ಮರಗಳನ್ನು ಬೆಳೆಸಿದರೆ ಮಾತ್ರ ಪರಿಸರ ಉಳಿಯಲು ಸಾಧ್ಯ. ಪರಿಸರ ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡುವುದು ನಿಲ್ಲಿಸಬೇಕುʼ ಎಂದು ಕರೆ ನೀಡಿದರು.
ಮುಖ್ಯಗುರು ಚೆನ್ನಬಸವ ರಾಜೇಶ್ವರಿ ಮಾತನಾಡಿ, ʼಶುದ್ಧ ಗಾಳಿ, ಉತ್ತಮ ಆರೋಗ್ಯಕ್ಕೆ ಪರಿಸರವೇ ಮುಖ್ಯ ಕಾರಣವಾಗಿದೆ. ಕಾಡು ನಾಶದಿಂದ ಪರಿಸರಕ್ಕೆ ಹೆಚ್ಚಿನ ಹಾನಿಯಾಗಿದೆ. ಪರಿಸರ ಕುರಿತು ಮಕ್ಕಳಿಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆʼ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವರ್ಲ್ದ್ ವಿಷನ್ ಸಂಸ್ಥೆಯಿಂದ ಶಾಲಾ ಆವರಣದಲ್ಲಿ ಸಸಿ ನೆಡಲಾಯಿತು. ಸಂಸ್ಥೆಯಿಂದ 42 ಅಂಗನವಾಡಿ ಮಕ್ಕಳಿಗೆ ಸೊಳ್ಳೆ ಪರದೆಗಳನ್ನು ವಿತರಿಸಿ, ಪೌಷ್ಠಿಕ ಆಹಾರ ಮತ್ತು ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸಲಾಯಿತು.
ಇದನ್ನೂ ಓದಿ : ಯಾದಗಿರಿ | ರೈತ ಹೋರಾಟಗಾರ ಚನ್ನಪ್ಪ ಆನೇಗುಂದಿ ಮೇಲೆ ದೂರು : ಪ್ರಾಂತ ರೈತ ಸಂಘ ಖಂಡನೆ
ಶಾಲಾ ಶಿಕ್ಷಕರಾದ ಅಯ್ಯಣ್ಣ, ಮಂಜುಳಾ, ರೇಖಾ, ಸಮೀರ್ ಮುಳ್ಳಿ, ಸಂಸ್ಥೆಯ ಮೈಕೇಲ್, ಅಶೋಕ್ ಹಾಗೂ ಗ್ರಾಮದ ಶರಣಪ್ಪ, ಬಾಬು ಮತ್ತಿತರರು ಭಾಗವಹಿಸಿದ್ದರು. ಸುಂದರ್ ನಿರೂಪಿಸಿ, ವಂದಿಸಿದರು.