ಮನುಷ್ಯನ ಮನಸ್ಸು ಅಮೃತವಾದರೆ ಭೂಮಿಯು ಸಹ ಅಮೃತವಾಗುತದೆ. ಊರಿಗೊಂದು ಕಾಡು ಸೃಷ್ಟಿಸಿದರೆ, ಸಂರಕ್ಷಿಸಿದರೆ ಭೂಮಿಯೂ ಕೂಡ ಅಮೃತವಾಗುತ್ತದೆ ಎಂದು ಚಿತ್ರದುರ್ಗ ಹೊರವಲಯದ ವಿಮುಕ್ತಿ ವಿದ್ಯಾ ಸಂಸ್ಥೆಯಲ್ಲಿ ನೆಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಧಮ್ಮ ಕೇಂದ್ರದ ಮುಖ್ಯಸ್ಥ ವಿಶ್ವ ಸಾಗರ್ ಅಭಿಪ್ರಾಯ ವ್ಯಕ್ತಪಡಿಸಿದರು.

“ಭೂಮಿಯ ಮೇಲಿರುವ ಸಕಲ ಜೇವ ರಾಶಿಗಳಿಗೆ ಪ್ರಕೃತಿಯ ಅವಶ್ಯಕತೆ ಇದೆ. ಮನುಷ್ಯ ತನ್ನ ಸ್ವಾರ್ಥ ಜೇವನಕ್ಕೆ ಭೂಮಿಗೆ ಏತೇಚ್ಚವಾಗಿ ಪ್ಲಾಸ್ಟಿಕ್, ಗಾಜು, ರಾಸಾಯನಿಕ ವಸ್ತುಗಳ ವಿಷವನ್ನು ಹಾಕುವುದರಿಂದ ಭೂಮಿಯೂ ವಿಷವಾಗುತ್ತದೆ. ಇತ್ತೀಚಿನ ದಿನಗಳಲ್ಲಿಯೇ ಮುಂದುವರಿದ ದೇಶಗಳೇ ಪರಿಸರ ಮತ್ತು ಭೂಮಿಗೆ ವಿಷವನ್ನು ಹಾಕುತಿವೆ. ಮನುಷ್ಯ ಮನುಷ್ಯನ ದೌರ್ಜನ್ಯಕ್ಕಿಂತ ಪ್ರಾಣಿಗಳ ಮೇಲಿನ ದೌರ್ಜನ್ಯ, ಬೆಟ್ಟ ಗುಡ್ಡಗಳ ಮೇಲೆ ದೌರ್ಜನ್ಯ ಪರಿಸರದ ಮೇಲೆ ದೌರ್ಜನ್ಯ ಮಾಡಿ ತನ್ನ ಕಾಲನ್ನೇ ಕಡಿದುಕೊಳ್ಳುವುದಲ್ಲದೆ ಮುಂದಿನ ಮಕ್ಕಳ ಕಾಲನ್ನು ಕಡಿಯುವ ಪರಿಸ್ಥಿತಿಗೆ ಬಂದು ಬಿಟ್ಟಿದ್ದಾನೆ. ಅಮೃತದಂತಹ ಮನಸ್ಸಿನಿಂದ ಭೂಮಿಗೆ ಸಾವಯವ ಗೊಬ್ಬರವನ್ನು ಹಾಕಿ ಮನೆಗೊಂದು ಮಗು ಊರಿಗೊಂದು ವನ ಸೃಷ್ಟಿ ಮಾಡಿದಾಗ ಭೂಮಿಯೂ ಕೂಡ ಅಮೃತವಾಗುತ್ತದೆ” ಎಂದು ಹೇಳಿದರು.

ಹಿರಿಯ ಪತ್ರಕರ್ತ ನರೇನಹಳ್ಳಿ ಅರುಣ್ ಕುಮಾರ್, “ಕಾಡುಬೆಳೆಸಿ ನಾಡು ಉಳಿಸಿ ಎನ್ನುವುದಕ್ಕಿಂತ ಕಾಡಿಗೆ ಬೆಂಕಿ ಬೀಳುವುದನ್ನು ಇಲಾಖೆಗಳು ನಿಯಂತ್ರಿಸಬೇಕು. ಕಾಡನ್ನು ಮುಂದಿನ ಪೀಳಿಗೆಗೆ ಉಳಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಇಂದಿರಾ ಕ್ಯಾಂಟೀನಿನಲ್ಲಿ ಆಹಾರ ಮೆನು ಕುರಿತು ದೂರು, ಪೌರಾಡಳಿತ ಸಚಿವರ ಭೇಟಿ,
ಸಂಸ್ಥೆಯಿಂದ ಉಚಿತವಾಗಿ ಕಾರ್ಯಕ್ರಮದಲ್ಲಿ ಅನಾಥ ಮಕ್ಕಳಿಗೆ ಮತ್ತು ಬಡ ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಬಸವನಾಗೀದೇವ ಶರಣರು, ತೋಟಗಾರಿಕೆ ಇಲಾಖೆಯ ತ್ಯಾಗರಾಜ್. ಗುರುಸಿದ್ದಣ್ಣ ಗೌಡ, ಪತ್ರಕರ್ತ ಅಹೋಬಲಪತಿ. ವಿಮುಕ್ತಿ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.