ಶಿವಮೊಗ್ಗದಲ್ಲಿ ಮತ್ತೆ ಮೊಳಗಿದ ಪೊಲೀಸರ ಗುಂಡಿನ ಸದ್ದು, ಅಂತರರಾಜ್ಯ ಕಳ್ಳನ ಕಾಲಿಗೆ ಪೊಲೀಸರ ಗುಂಡೇಟು ಬಿದ್ದಿದೆ. ಕಲ್ಕೆರೆ ಮಂಜುನಾಥ್ @ ಕಲ್ಕೆರೆ ಮಂಜ(47) ಎಂಬ ಆರೋಪಿ ಕಾಲಿಗೆ ಗುಂಡೇಟು ತಗುಲಿದೆ. ಬೆಂಗಳೂರಿನ ಕಲ್ಕೆರೆ ನಿವಾಸಿಯಾದ ಆರೋಪಿ ಮಂಜುನಾಥ್ ಕಳ್ಳತನಕ್ಕಾಗಿ ಶಿವಮೊಗ್ಗ ನಗರದಲ್ಲಿ ಮೂರ್ನಾಲ್ಕು ದಿನದಿಂದ ಓಡಾಡುತ್ತಿದ್ದ ಎಂಬ ಮಾಹಿತಿ ಲಭಿಸಿದೆ. ಇತನ ವಿರುದ್ಧ 72 ಪ್ರಕರಣ ದಾಖಲಾಗಿವೆ ಇದರಲ್ಲಿ ಬಹುತೇಕ ಕಳ್ಳತನ ಪ್ರಕರಣಗಳಿದ್ದವು.
ನಗರದ ಗಾಂಧಿನಗರದಲ್ಲಿ ಮನೆಗಳ್ಳತನ ನಡೆದಿದ್ದ ಕುರಿತು ಏಪ್ರಿಲ್ ಅಲ್ಲಿ ನಡೆದ ಮನೆಗಳ್ಳತನದ ಬಗ್ಗೆ ನಿತಿನ್ ಎಂಬುವರು ದೂರದ ಠಾಣೆಯಲ್ಲಿ ದೂರು ನೀಡಿದ್ದರು. ಮನೆಯ ಒಳಗೆ ಇದ್ದ ಐ 20 ಕಾರ್ ನ್ನ ಹಾಗೂ ಸುಮಾರು 11,30,000 ಚಿನ್ನಾಭರಣ, ನಗದು ಹಾಗೂ ಇತರ ವಸ್ತುಗಳನ್ನು ಕಳುವು ಮಾಡಿಕೊಂಡು ಹೋಗಿದ್ದ ಪ್ರಕರಣ ದೂರು ದಾಖಲಾಗಿತ್ತು.
ಖಚಿತ ಮಾಹಿತಿ ಮೇರೆಗೆ ಜಯನಗರ ಠಾಣೆಯ ಪೊಲೀಸರು ಬಂಧನ ಮಾಡಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಮುಂದಾಗಿದ್ದು. ಪೊಲೀಸ್ ಸಿಬ್ಬಂದಿ ದ್ಯಾಮಪ್ಪನ ಮೇಲೆ ಕಲ್ಕೆರೆ ಮಂಜ ಹಲ್ಲೆ ಮಾಡಿದ್ದನು. ಪಿಎಸ್ಐ ನವೀನ್ ಕುಮಾರ್ ಗಾಳಿಯಲ್ಲಿ ಗುಂಡು ಹಾರಿಸಿ, ಎಚ್ಚರಿಕೆ ನೀಡಿದ್ರೂ ಚಾಕುವಿನಿಂದ ಹಲ್ಲೆ ನಡೆಸಿದ್ದನು.
ಈ ವೇಳೆ ಆತ್ಮರಕ್ಷಣೆಗೆ ನವೀನ್ ಕುಮಾರ್ ಆರೋಪಿ ಮಂಜನ ಕಾಲಿಗೆ ಫೈಯರ್ ಮಾಡಲಾಗಿದೆ. ಜಯನಗರ ಠಾಣೆ ಪಿಎಸ್ಐ ನವೀನ್ ಬ್ಯಾಕೋಡು ಫೈರಿಂಗ್ ಮಾಡಿದ್ದಾರೆ. ಬಳಿಕ ಆರೋಪಿ ಬಂಧನವಾಗಿದೆ.ಗಾಯಗೊಂಡ ಪೊಲೀಸ್ ಸಿಬ್ಬಂದಿ ಸಹ ಆಸ್ಪತ್ರೆಗೆ ದಾಖಲು. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.