(ಮುಂದುವರಿದ ಭಾಗ..) ಗುತ್ತಿಗೆ ಕಾರ್ಮಿಕರು: ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿಷೇಧ ಕಾಯ್ದೆ) 1970ರಲ್ಲಿಯೇ ಬಂದಿದೆ. ಈ ಕಾಯ್ದೆ ಪ್ರಕಾರ ನಿರಂತರ ಕೆಲಸಗಳನ್ನು ಗುತ್ತಿಗೆ ಪದ್ಧತಿಯ ಮುಖಾಂತರ ಮಾಡಿಸಬಾರದು ಎಂಬುದಾಗಿದೆ. ಮೊದಲು ಕಾರ್ಖಾನೆಗಳ ಗಾರ್ಡನ್‌ಗಳಲ್ಲಿ ಮತ್ತು ಕ್ಯಾಂಟೀನ್‌ಗಳಲ್ಲಿ ಮಾತ್ರ ಗುತ್ತಿಗೆ ಕೊಡಲಾಗುತಿತ್ತು. ಆದರೆ, ಖಾಸಗಿ ಕ್ಷೇತ್ರದಲ್ಲಿ ಬಂಡವಾಳಶಾಹಿಯ ಉತ್ಪಾದನಾ ವಿಧಾನ ಬದಲಾಗಿದೆ. ಲಾಭಗಳಿಸಬೇಕಾದರೆ ಕಾರ್ಮಿಕರ ಮೇಲಾಗುವ ಖರ್ಚು ಕಡಿಮೆ ಮಾಡಬೇಕು ಎಂಬ ಪರಿಕಲ್ಪನೆಯ ನಂತರ 1970ರ ಈ ಕಾಯ್ದೆಯನ್ನು ತರಲಾಗಿದೆ. ಎಲ್ಲಾ ಕಾಯ್ದೆಗಳಿಗೂ ಮನಸೋಇಚ್ಛೆ ತಿದ್ದುಪಡಿಯನ್ನು ತಂದು…

ಎಸ್. ವರಲಕ್ಷ್ಮಿ
ವರಲಕ್ಷ್ಮಿಯವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಎಂಬ ಊರಿನವರು. ವಯಸ್ಕರ ಶಿಕ್ಷಣ ಯೋಜನೆಯಡಿ ಪಾಠ ಮಾಡುತ್ತಿದ್ದ ಅವರು ಜೀವನೋಪಾಯಕ್ಕಾಗಿ ಗಾರ್ಮೆಂಟ್ಸ್ ಸೇರಿದರು. ಅಲ್ಲಿ ವೇತನ ತಾರತಮ್ಯ ಪ್ರಶ್ನಿಸಿ ಹೋರಾಟ ನಡೆಸಿ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡರು. ನಂತರ 1994ರಲ್ಲಿ ಅಂಗನವಾಡಿ ನೌಕರರ ಸಂಘ ಸ್ಥಾಪಿಸಿದ ಅವರು ಸದ್ಯ 128 ತಾಲ್ಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಪರ ಹೋರಾಡುತ್ತಿದ್ದಾರೆ. ಸಿಐಟಿಯು ಕಾರ್ಮಿಕ ಸಂಘಟನೆಯ ನಾಯಕಿಯಾಗಿರುವ ಅವರು 2 ದಶಕಕ್ಕೂ ಹೆಚ್ಚು ಕಾಲ ಹತ್ತಾರು ಯಶಸ್ವಿ ಹೋರಾಟಗಳನ್ನು ಮುನ್ನಡೆಸಿದ್ದಾರೆ.