ಕೋವಿಡ್ ಕಾಲಾನಂತರದಲ್ಲಿ ಈಗ ಕೋವಿಡ್ ಸೋಂಕುಗಳು ನಿಧಾನಕ್ಕೆ ಹೆಚ್ಚಾಗುತ್ತಿದೆ. ಒಮ್ಮೆಲೇ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯಿದೆ. ವೈರಸ್ ನಿರಂತರವಾಗಿ ವಿಕಸನಗೊಳ್ಳುತ್ತಿದೆ. ಆದರೆ ಈ ಕಳವಳ ಪಡಬೇಕಾಗಿಲ್ಲ ಎಂದು ತಜ್ಞರುಗಳ ಭರವಸೆ ನೀಡಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದೆ. ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಇದು ಕಂಡುಬರುತ್ತದೆ. ಆದ್ದರಿಂದ ದುರ್ಬಲವಾಗಿರುವವರು ಕೊಂಚ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದು ವಿಜ್ಞಾನಿಗಳು ಹೇಳಿರುವುದಾಗಿ ವರದಿಯಾಗಿದೆ.
ಇದನ್ನು ಓದಿದ್ದೀರಾ? ಕೋವಿಡ್-19 ಹೆಚ್ಚಳ; ಎರಡು ಸಾವಿರಕ್ಕೂ ಹೆಚ್ಚು ಪ್ರಕರಣಗಳು ಸಕ್ರಿಯ
“ಕೋವಿಡ್ ಸೌಮ್ಯವಾದ ಸೋಂಕುಗಳಿಗೆ ಕಾರಣವಾಗುತ್ತಿದೆ. ಈ ವೈರಸ್ ಈಗ ಉಸಿರಾಟದ ಕಾಯಿಲೆಯಂತಾಗಿದೆ. ಜ್ವರಕ್ಕಿಂತ ಕಡಿಮೆ ಅಪಾಯಕಾರಿ. ನಾವು ಕೋವಿಡ್ ಅನ್ನು ಒಂದು ಬರೀ ವಿಶೇಷ ಪ್ರಕರಣವಾಗಿ ಮರೆತುಬಿಡಬಹುದು. ಇದು ಕಳವಳಕಾರಿಯಲ್ಲ” ಎಂದು ಜಾಗತಿಕ ಆರೋಗ್ಯ ತಜ್ಞ ಡಾ. ಚಂದ್ರಕಾಂತ್ ಲಹರಿಯಾ ಹೇಳಿದ್ದಾರೆ.
“ಎಲ್ಲಾ ಉಪ ರೂಪಾಂತರಗಳು ಒಂದೇ ರೀತಿಯದ್ದಾಗಿದೆ. ಕಡಿಮೆ ಅಪಾಯ ಹೊಂದಿದೆ. ಆದರೆ ಹೆಚ್ಚು ಸಾಂಕ್ರಾಮಿಕವಾಗಿ ಹರಡಬಲ್ಲದು. ಈ ಹಿಂದೆ ಸೋಂಕು ಬಂದಿದ್ದರೆ ಅಥವಾ ಲಸಿಕೆಗಳನ್ನು ಪಡೆದಿದ್ದರೆ ಕೋವಿಡ್ ಬರುವುದಿಲ್ಲ” ಹರಿಯಾಣದ ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಜೈವಿಕ ವಿಜ್ಞಾನ ಶಾಲೆಯ ಜೈವಿಕ ವಿಜ್ಞಾನ ಮತ್ತು ಆರೋಗ್ಯ ಸಂಶೋಧನಾ ಡೀನ್ ಅನುರಾಗ್ ಅಗರ್ವಾಲ್ ಹೇಳಿದರು.
ಜೂನ್ 6ರ ಹೊತ್ತಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳು 5,300 ದಾಟಿದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 500 ಪ್ರಕರಣಗಳು ಸೇರಿವೆ. ಇವುಗಳಲ್ಲಿ, 4,700 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಪ್ರಸ್ತುತ ಕೇರಳದಲ್ಲಿ 1,600ಕ್ಕೂ ಹೆಚ್ಚು ಪ್ರಕರಣಗಳನ್ನು ಹೊಂದಿದೆ. ಗುಜರಾತ್, ಪಶ್ಚಿಮ ಬಂಗಾಳ, ದೆಹಲಿ ಮತ್ತು ಮಹಾರಾಷ್ಟ್ರಗಳದಲ್ಲೂ ಪ್ರಕರಣ ದಾಖಲಾಗಿವೆ.