ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ವರ್ಕರ್ಸ್ ಫಾರ್ ಆಕ್ಷನ್ ರಿಸರ್ಚ್ ಹಾಗೂ ಸಂಜೀವಯ್ಯ ಮೆಮೋರಿಯಲ್ ಎಜುಕೇಶನ್ ಸೊಸೈಟಿ ಸಹಯೋಗದೊಂದಿಗೆ ಮೈಸೂರಿನ ಸಿದ್ದೇಶ್ವರ ಪ್ರೌಢಶಾಲೆ ಸಭಾಂಗಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ‘ ಪರಿಸರವಾದಿ ಅಂಬೇಡ್ಕರ್ ‘ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಸಸ್ಯ ವಿಜ್ಞಾನ ಶಾಸ್ತ್ರ ಸಹಾಯಕ ಅಧ್ಯಾಪಕ ಡಾ. ಕೃಷ್ಣಮೂರ್ತಿ ಚಮರಂ ‘ ಗಾಂಧಿಜೀ ಉಪ್ಪಿನ ಸತ್ಯಾಗ್ರಹ ನಡೆಸಿದಂತೆ, ನೀರಿಗಾಗಿ ಚಳುವಳಿ ನಡೆಸಿದ್ದು ಅಂಬೇಡ್ಕರ್ ‘ಎಂದರು.
ಪರಿಸರವಿಲ್ಲದೆ ಜೀವಿಗಳಿಲ್ಲ. ಸೂಕ್ಷ್ಮ ಜೀವಿಯಿಂದ ಹಿಡಿದು, ಪ್ರಾಣಿ, ಪಕ್ಷಿ ಸಂಕುಲ, ಮಾನವರನ್ನು ಒಳಗೊಂಡಂತೆ ಎಲ್ಲರಿಗೂ ಬದುಕಲು ಸಸ್ಯ ಪ್ರಪಂಚ ಅತ್ಯಗತ್ಯ. ಗಿಡಮರ ಇಲ್ಲದಿದ್ದಲ್ಲಿ ಬದುಕಲು ಸಾಧ್ಯವಿಲ್ಲ. ಹವಾಮಾನ ವೈಪರೀತ್ಯಾ, ಜಾಗತಿಕ ತಾಪಮಾನ ಉಲ್ಬಣಿಸುತ್ತೆ. ಬಿಸಿಲಿನ ಮಟ್ಟ ಏರಿಕೆ ಕಾಣುತ್ತದೆ. ಹಾಗಾಗಿ, ಮರ ಗಿಡ ಬೆಳೆಸುವ ರೂಢಿ, ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜಾಗೃಕರಾಗಬೇಕು.
” ಸಮಾನತೆ ತಂದುಕೊಟ್ಟ ಹರಿಕಾರ ಎಂದರೆ ಅದುವೇ ಡಾ. ಬಿ. ಆರ್. ಅಂಬೇಡ್ಕರ್. ದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಹಲವಾರು ಸತ್ಯಾಗ್ರಹ ಕಂಡಿದೆ. ಅದರಲ್ಲಿ ಗಾಂಧಿಜೀ ನೇತೃತ್ವದ ಉಪ್ಪಿನ ಸತ್ಯಾಗ್ರಹ ಕೂಡ ಪ್ರಮುಖವಾದದ್ದು. ಹಾಗೆಯೇ, ದೇಶದಲ್ಲಿ ನೀರಿಗಾಗಿ ಚಳುವಳಿ ನಡೆಸಿದ್ದು ಅಂಬೇಡ್ಕರ್. ಅದುವೇ, ಮಹಾಡ್ ನ ಚೌಡಾರ್ ಕೆರೆ ಹೋರಾಟ. ದಲಿತರು ನೀರು ಮುಟ್ಟುವಂತಿಲ್ಲ ಅನ್ನುವ ಜಾತಿವಾದಿಗಳ ವಿರುದ್ಧ ನಡೆಸಿದ ಮಹೋನ್ನತ ಚಳುವಳಿ ಅದುವೇ ನೀರಿಗಾಗಿ.”

‘ ನಿಸರ್ಗವೇ ನೀಡುವ ಸಂಪನ್ಮೂಲ ಎಂದರೆ ಗಾಳಿ, ನೀರು, ಬೆಳಕು. ಇದನ್ನ ಪಡೆಯಲು ಎಲ್ಲರೂ ಅರ್ಹರೆ. ಇದಕ್ಕೆ ಪ್ರತ್ಯೇಕ ಮಾನದಂಡ ಇಲ್ಲ. ಇದೆಲ್ಲವೂ ನಿಸರ್ಗದತ್ತವಾದದ್ದು. ಯಾರಪ್ಪಣೆಯ ಅಗತ್ಯತೆ ಇಲ್ಲ. ಹೀಗಿದ್ದರು, ಬ್ರಾಹ್ಮಣ ಶಾಹಿ ವ್ಯವಸ್ಥೆ, ಮೇಲ್ವರ್ಗದ ಜನ ಜಾತಿ ಹೆಸರಿನಲ್ಲಿ ನಿಸರ್ಗ ಮೂಲದ ಸಂಪನ್ಮೂಲಗಳನ್ನು ಮುಟ್ಟಲು ಬಿಡುತ್ತಿರಲಿಲ್ಲ. ಇದನ್ನೆಲ್ಲಾ ಖಂಡಿಸಿ ನೀರನ್ನು ಮುಟ್ಟುವ ಮೂಲಕ ಚಳುವಳಿ ಆರಂಭಿಸಿದ್ದೇ ಅಂಬೇಡ್ಕರ್.’
ಪರಿಸರವಿರದೆ ಬದುಕು ಅಸಾಧ್ಯ. ಅಂತರ್ ಸಂಭಂದ ಪರಿಸರದ ಜೊತೆಗೆ ಬೆಸೆದುಕೊಂಡಿದೆ. ಲಿಂಗ ತಾರತಮ್ಯವಿರದೆ ಎಲ್ಲರಿಗೂ ಪರಿಸರ ಸಲ್ಲುವಂತದ್ದು. ಮೇಲ್ವರ್ಗದ ಜನ ಜಾತಿ ಹಿಡಿತ ಸಾಧಿಸಿ ಸಾಮಾಜಿಕ ಅಸಮಾನತೆ ಸಾಧಿಸಿ ಶೋಷಿತ ಸಮುದಾಯಕ್ಕೆ ಯಾವುದು ದಕ್ಕದಂತೆ ಮಾಡಿದ್ದವು. ಇದನ್ನ ಸ್ವತಃ ಅಂಬೇಡ್ಕರ್ ಅವರು ಬರೆದಿದ್ದಾರೆ. ಬಾಕ್ರ ನಂಗಲ್ ಆಣೆಕಟ್ಟಿಗೆ ಅಡಿಗಲ್ಲು ಹಾಕಿದರು. ಮಹಾನದಿಗೆ ಆಣೆಕಟ್ಟು ಕಟ್ಟಿಸಿದರು ಅಂದಿನ ಬ್ರಿಟಿಷ್ ಸರ್ಕಾರದಲ್ಲಿ. ಅಂದರೆ, ಸ್ವಾತಂತ್ರ್ಯ ಪೂರ್ವದಲ್ಲಿ ಕಾರ್ಮಿಕ ಹಾಗೂ ನೀರಾವರಿ ಸಚಿವರಾಗಿ ಕೆಲಸ ಮಾಡಿದರು. ಇದು ದೇಶದ ಜನರಿಗೆ ತಿಳಿದಿಲ್ಲ, ತಿಳಿಯದಂತೆ ಮರೆ ಮಾಚಲಾಗಿದೆ.
ಪ್ರತಿ ಜೀವಿಗೂ ಜೀವಿಸುವ ಹಕ್ಕಿದೆ. ಅದರ ಆವಾಸ ಸ್ಥಾನ ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ. ಯಾವಾಗ ಪ್ರಾಣಿ, ಪಕ್ಷಿ ಅದರ ವಾಸ ಸ್ಥಾನವನ್ನು ಮನುಷ್ಯ ಬಲವಂತವಾಗಿ ಕಸಿದುಕೊಳ್ಳುತ್ತಾನೆ ಆಗ ಅಸಮತೋಲನ ಕಾಡುತ್ತೆ ಆಗಲೇ ಪ್ರಾಣಿ ಹಾಗೂ ಮಾನವ ಸಂಘರ್ಷಕ್ಕೆ ದಾರಿಯಾಗುತ್ತೆ. ಅಂದೇ ಅಂಬೇಡ್ಕರ್ ಅವರು ಗೋಮಾಳ, ಹುಲ್ಲುಗಾವಲು ಮತ್ತಿತರ ರೈತಪರ
ಪೂರಕ ವಿಚಾರಗಳನ್ನು ತಂದಿದ್ದರು. ಬಾಬಾ ಸಾಹೇಬರು ವಕೀಲರು, ಪತ್ರಕರ್ತರು, ಸಂವಿಧಾನ ಶಿಲ್ಪಿ, ರಾಜಕಾರಣಿ, ಹೋರಾಟಗಾರರಷ್ಟೇ ಅಲ್ಲಾ! ಅವರು ಪರಿಸರ ವಾದಿ. ಪರಿಸರದ ಮೇಲಿದ್ದ ಕಾಳಜಿ ಮೇಲೆ ಇನ್ನಷ್ಟು ಬೆಳಕು ಚೆಲ್ಲುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಉಪ ಪೊಲೀಸ್ ಆಯುಕ್ತರಾದ ಕೆ. ಎಸ್. ಸುಂದರ್ ರಾಜ್ ಚಾಲನೆ ನೀಡಿದರು.
ಈ ವಿಶೇಷ ವರದಿ ಓದಿದ್ದೀರಾ?ಮೈಸೂರು | ಶವಾಗಾರದಲ್ಲಿ ಕೆಲಸ ಮಾಡುವ ಏಕಮೇವ ಮಹಿಳೆ ರಾಜಮ್ಮ
ವಿಚಾರಗೋಷ್ಟಿಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತ ವೆಂಕಟೇಶ್, ಸಂಜೀವಯ್ಯ ಮೆಮೋರಿಯಲ್ ಟ್ರಸ್ಟ್ ನ ಬಿ. ಜಿ. ದಯಾನಂದ್ ಮೂರ್ತಿ, ಡಾ. ಶ್ರೀನಿವಾಸ. ಡಿ. ಮಣಗಳ್ಳಿ, ಪತ್ರಕರ್ತ ಮೋಹನ್ ಮೈಸೂರು, ಮುಖ್ಯೊಪಧ್ಯಾಯ ಮುರುಳಿಧರ್, ಅಧ್ಯಾಪಕರಾದ ಡಾ. ಟಿ. ನಿರಂಜನ್ ಕುಮಾರ್, ಐ. ಡಿ. ಲೋಕೇಶ್. ನಿವೃತ್ತ ಗ್ರಂಥಪಾಲಕ ರಾಮಯ್ಯ, ಕೆ. ಮಹೇಶ್, ಸಂಶೋಧಕರಾದ ಮನು, ಮಹೇಶ್, ಜಯಚಂದ್ರ, ಗ್ರಾಹಕ ಪರಿಷತ್ ನ ಎಸ್. ಪಿ. ಲಿಂಗರಾಜು ಸೇರಿದಂತೆ ಇನ್ನಿತರರು ಇದ್ದರು.