‘ದಲಿತರನ್ನು ಮಲದ ಗುಂಡಿ-ಒಳಚರಂಡಿಗೆ ಇಳಿಸುತ್ತಿರುವ ಅಪರಾಧಿ ದೆಹಲಿ ಸರ್ಕಾರ’

Date:

Advertisements
ಒಳಚರಂಡಿ ಮತ್ತು ಚರಂಡಿಗಳ ಸ್ವಚ್ಛತೆಗೆ ಇಳಿಸಲಾದವರ ವಯೋಮಾನ 16 ರಿಂದ 35 ವರ್ಷಗಳು. 77ರಲ್ಲಿ ಏಳು ಮಂದಿ ಅಲ್ಪಸಂಖ್ಯಾತರಾಗಿದ್ದು, ಉಳಿದವರೆಲ್ಲರೂ ವಾಲ್ಮೀಕಿ (‘ಅಸ್ಪೃಶ್ಯ’) ಜಾತಿಯವರಾಗಿದ್ದರು

ಒಳಚರಂಡಿಗಳು ಮಲದ ಗುಂಡಿಗಳ ಸ್ವಚ್ಛತೆಗೆ ದಲಿತರನ್ನು ಬಳಸುತ್ತಿರುವ ದೆಹಲಿ ಸರ್ಕಾರ ಕಾನೂನುಬಾಹಿರ ಕೆಲಸದಲ್ಲಿ ತೊಡಗಿದೆ ಎಂದು ಸಫಾಯಿ ಕರ್ಮಚಾರಿ ಆಂದೋಲನ ಆರೋಪಿಸಿದೆ.

ದೆಹಲಿ ಸರ್ಕಾರ ಸತ್ಯವನ್ನು ಮರೆಮಾಚುತ್ತಿದ್ದು ಕಾಯಿದೆ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ ಎಂದಿದ್ದಾರೆ ಆಂದೋಲನದ ಸಂಚಾಲಕ ಬೆಜವಾಡ ವಿಲ್ಸನ್. ಹೀಗೆ ಬಳಸಲಾಗಿರುವ 77 ದಿನಗೂಲಿ ಕಾರ್ಮಿಕರ ವಿವರವನ್ನು ಆಂದೋಲನ ಶುಕ್ರವಾರ ಪತ್ರಿಕೆಗಳಿಗೆ ಬಿಡುಗಡೆ ಮಾಡಿದೆ.

ಸ್ವಚ್ಛತಾ ಕಾರ್ಮಿಕರ ಆಂದೋಲನ (SKA) ದೇಶದ ರಾಜಧಾನಿ ದೆಹಲಿಯಲ್ಲಿ ಕಾನೂನಿನ ಧಿಕ್ಕಾರವಾಗಿ, ಭಾರತದ ನಾಗರಿಕರಾದ, ಎಲ್ಲರೂ ದಲಿತರಾದವರನ್ನು ಒಡಿಚರಂಡಿ ಮತ್ತು ಚರಂಡಿಗಳ ಸ್ವಚ್ಛತೆಗೆ ಇಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತದೆ. ಇದನ್ನು ಮಾಡುವ ಮೂಲಕ ದೆಹಲಿ ಸರ್ಕಾರವು MS Act 2013ರ ಉಲ್ಲಂಘನೆ ಮಾಡಿದೆ ಮಾತ್ರವಲ್ಲ, ಸ್ವಚ್ಛತಾ ಕಾರ್ಮಿಕರ ಜೀವನವನ್ನೂ ಅಪಾಯಕ್ಕೆ ತಳ್ಳಿದೆ. ತನ್ನ ಅಪರಾಧಿಕ ತಪ್ಪನ್ನು ಒಪ್ಪಿಕೊಂಡು ಸರಿಪಡಿಸುವ ಬದಲು, ದೆಹಲಿ ಸರ್ಕಾರ ಈ ಚಿತ್ರಗಳನ್ನು ತನ್ನ ಇಲಾಖೆಗಳ ವೆಬ್‌ಸೈಟ್‌ಗಳಿಂದ ಡಿಲೀಟ್ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರದ ಸುಳ್ಳನ್ನು ಬಯಲಿಗೆಳೆಯಲು ಮತ್ತು ಸ್ವಚ್ಛತಾ ಕಾರ್ಮಿಕರ ಶೋಚನೀಯ ಸ್ಥಿತಿಯನ್ನು ಸಾಕ್ಷ್ಯಗಳೊಂದಿಗೆ ವಿಶ್ವದ ಮುಂದೆ ತರಲು, ಸ್ವಚ್ಛತಾ ಕಾರ್ಮಿಕರ ಆಂದೋಲನದ ತಂಡವು ದೆಹಲಿಯ ವಿವಿಧ ಪ್ರದೇಶಗಳಿಗೆ ತೆರಳಿ ಒಡಿಚರಂಡಿ ಮತ್ತು ಚರಂಡಿಗಳ ಸ್ವಚ್ಛತೆಗೆ ಇಳಿದವರ ಸಮೀಕ್ಷೆ ನಡೆಸಿತು, ಅವರ ಚಿತ್ರಗಳನ್ನು ಸಾಕ್ಷ್ಯವಾಗಿ ತೆಗೆದಿದೆ, ಅವುಗಳಲ್ಲಿ ಕೆಲವನ್ನು ಇದರೊಂದಿಗೆ ಜೋಡಿಸಲಾಗಿದೆ.

Advertisements
safayi 1
safayi 2

ಇದನ್ನೂ ಓದಿರಿ: ಮಂಗಳೂರು | ದ್ವೇಷ ಭಾಷಣಗಳಿಗೆ ಕಡಿವಾಣವಿಲ್ಲ, ತಡೆಯಾಜ್ಞೆಗೂ ತಡೆಯಿಲ್ಲ: ಕಾನೂನು ಏನು ಹೇಳುತ್ತದೆ?

ಜೂನ್ 4-5ರಂದು, ಸ್ವಚ್ಛತಾ ಕಾರ್ಮಿಕರ ಆಂದೋಲನದ ತಂಡವು ದೆಹಲಿಯ ನಾನಾ ಸ್ಥಳಗಳಲ್ಲಿ ಒಡಿಚರಂಡಿ ಮತ್ತು ಚರಂಡಿಗಳ ಸ್ವಚ್ಛತೆ ಮಾಡುತ್ತಿದ್ದವರನ್ನು ಮಾತನಾಡಿಸಿದೆ. ಈ ಪೈಕಿ 77 ಮಂದಿಯ ಚಿತ್ರಗಳು ಮತ್ತು ಇತರ ಮಾಹಿತಿಯನ್ನು ಸಂಗ್ರಹಿಸಿದೆ. ದೇಶದ ಸಂಸತ್ತು ಮತ್ತು ದೆಹಲಿ ವಿಧಾನಸಭೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ, ದಿನಗೂಲಿಯಾಗಿ, ಕೇವಲ ಕನಿಷ್ಟ ಉಡುಗೆ ತೊಟ್ಟು, ಯಾವುದೇ ರಕ್ಷಣಾ ಕವಚವಿಲ್ಲದೆ, ಮಾನವ ಮಲ ಮತ್ತು ಕಸವನ್ನು ತೆಗೆಯಲು ಇವರನ್ನು ತೊಡಗಿಸಲಾಗಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ಸಫಾಯಿ ಕರ್ಮಚಾರಿ ಆಂದೋಲನದ ತಂಡವು ದೆಹಲಿಯ ರೋಹಿಣಿ, ಓಲ್ಡ್ ರಾಜೇಂದ್ರ ನಗರ, ಅಂಬೇಡ್ಕರ್ ಚೌಕ್, ಅಶೋಕ್ ವಿಹಾರ, ಪ್ರತಾಪ್‌ಬಾಗ್, ಆಜಾದ್‌ಪುರ, ಮಾಡೆಲ್ ಟೌನ್, ರಾಜಾ ಗಾರ್ಡನ್, ಮತ್ತು ರಾಜೌರಿಯಲ್ಲಿ ರಸ್ತೆ ಬದಿಯ ಒಡಿಚರಂಡಿಗಳು ಮತ್ತು ತೆರೆದ ಚರಂಡಿಗಳಲ್ಲಿ ಇಳಿದ ದಿನಗೂಲಿ ಸ್ವಚ್ಛತಾ ಕಾರ್ಮಿಕರನ್ನು ಮಾತನಾಡಿಸಿ ಆಘಾತಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ.

ಒಳಚರಂಡಿ ಮತ್ತು ಚರಂಡಿಗಳ ಸ್ವಚ್ಛತೆಗೆ ಇಳಿಸಲಾದವರ ವಯೋಮಾನ 16 ರಿಂದ 35 ವರ್ಷಗಳು. 77ರಲ್ಲಿ ಏಳು ಮಂದಿ ಅಲ್ಪಸಂಖ್ಯಾತರಾಗಿದ್ದು, ಉಳಿದವರೆಲ್ಲರೂ ವಾಲ್ಮೀಕಿ (‘ಅಸ್ಪೃಶ್ಯ’) ಜಾತಿಯವರಾಗಿದ್ದರು.

ಈ ಕಾರ್ಮಿಕರು ದೆಹಲಿ ಮಾತ್ರವಲ್ಲದೆ, ಉತ್ತರ ಪ್ರದೇಶದ ಮೀರತ್, ಬುಲಂದ್‌ಶಹರ್, ರಾಂಪುರ, ಸೀತಾಪುರ, ಹರದೋಯಿ, ಆಜಂಗಢ, ಇಲಾಹಾಬಾದ್, ಗೋರಖಪುರ ಮತ್ತು ಬಿಹಾರದ ಬೋಧಗಯ, ಭಾಗಲ್‌ಪುರ, ಬೇಗುಸರಾಯ್‌ನಿಂದ ಬಂದವರಾಗಿದ್ದರು. ಜೊತೆಗೆ ಮಧ್ಯಪ್ರದೇಶದ ರೇವಾ, ಛತ್ತೀಸ್‌ಗಢದ ರಾಯಪುರ ಹಾಗೂ ಉತ್ತರಾಖಂಡದ ರುದ್ರಪ್ರಯಾಗದಿಂದಲೂ ಬಂದಿದ್ದರು. ಇವರೆಲ್ಲರೂ ವಲಸೆ ಕಾರ್ಮಿಕರಾಗಿದ್ದು, ಎರಡು ಹೊತ್ತಿನ ಊಟಕ್ಕಾಗಿ ಈ ಕೆಲಸಕ್ಕೆ ಇಳಿದಿದ್ದಾರೆ. ಗುತ್ತಿಗೆದಾರರು ಇವರಿಗೆ ದಿನಕ್ಕೆ 350 ರಿಂದ 550 ರೂಪಾಯಿಗಳ ದಿನಗೂಲಿಯನ್ನು ನೀಡುತ್ತಾರೆ.

ದೆಹಲಿಯಲ್ಲಿ ಒಳಚರಂಡಿ ಮತ್ತು ನೀರು ಅಥವಾ ಮಳೆನೀರಿನ ಚರಂಡಿಗಳು ಪ್ರತ್ಯೇಕವಾಗಿಲ್ಲ. ಹೀಗಾಗಿ ಈ ಕಾರ್ಮಿಕರಿಂದ ಮಲಮೂತ್ರಗಳನ್ನು ಬರಿಗೈಯಿಂದ ಎತ್ತಿಸುವ ಕಾನೂನುಬಾಹಿರ ಕೆಲಸವನ್ನೂ ದೆಹಲಿ ಸರ್ಕಾರ  ಮಾಡಿಸುತ್ತಿದೆ. ಕಾನೂನಿನ ದೃಷ್ಟಿಯಿಂದ ಮಾತ್ರವಲ್ಲ, ಮಾನವೀಯತೆಯ ದೃಷ್ಟಿಯಿಂದಲೂ ಇದು ಅಪರಾಧವಾಗಿದೆ. ದಲಿತರ ಆತ್ಮಗೌರವ ಮತ್ತು ಘನತೆಗೆ ಧಕ್ಕೆ ತಂದಿದೆ ಎಂದು ಆಯೋಗ ಹೇಳಿದೆ.

ಇದನ್ನೂ ಓದಿರಿ: ಸಮೂಹ ಸನ್ನಿಯ ಬಿತ್ತಿ ಹಣದ ಬೆಟ್ಟವನ್ನೇ ಬಾಚುತ್ತಿರುವ ಐಪಿಎಲ್; ಅಭಿಮಾನಿಗಳ ಕಣ್ಣಿಗೆ ಮಣ್ಣೆರಚುತ್ತಿದೆ! 

ದೇಶಾದ್ಯಂತ ಸ್ವಚ್ಛತಾ ಕಾರ್ಮಿಕರು ಒಳಚರಂಡಿ-ಮಲದ ಗುಂಡಿಗಳ ಸ್ವಚ್ಛತೆಯ ಸಂದರ್ಭದಲ್ಲಿ ಸಾಯುತ್ತಿರುವ ಸುದ್ದಿಗಳು ಬರುತ್ತಿವೆ. ಈ ತಿಂಗಳ 4 ಜೂನ್‌ವರೆಗೆ ಆರು ಮಂದಿ ಹೀಗೆ ಸಾವಿಗೀಡಾಗಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 34 ಮಂದಿ ಹೀಗೆ ಜೀವ ಕಳೆದುಕೊಂಡಿದ್ದಾರೆ.

ಒಳಚರಂಡಿಗಳ ಸ್ವಚ್ಛತೆಯನ್ನು ಈ ರೀತಿಯಾಗಿ ಮಾಡಿಸುವುದನ್ನು ದೆಹಲಿ ಸರ್ಕಾರ ತಕ್ಷಣವೇ ನಿಲ್ಲಿಸಬೇಕು. ದೆಹಲಿ ಸರ್ಕಾರ ಸ್ವಚ್ಛತೆಯನ್ನು ಯಂತ್ರಗಳಿಂದ ಮಾಡಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದೆ, ಈ ಯಂತ್ರಗಳು ಎಲ್ಲಿವೆ ಎಂದು ಕೂಡಲೆ ತಿಳಿಸಬೇಕು ಎಂದು ಒತ್ತಾಯಿಸಿದೆ.

ಸ್ವಚ್ಛತೆಯ ಕೆಲಸಕ್ಕಾಗಿ ಪ್ರತ್ಯೇಕ ಇಲಾಖೆ ರಚಿಸಬೇಕು. ಸ್ವಚ್ಛತಾ ಕಾರ್ಮಿಕರಿಗೆ ತುರ್ತು ಕಾರ್ಮಿಕರೆಂದು ತರಬೇತಿ ಮತ್ತು ಮಾನ್ಯತೆ ನೀಡಬೇಕು. ಸ್ವಚ್ಛತಾ ಕಾರ್ಮಿಕರಿಗೆ ಕಾಯಂ ಮತ್ತು ಘನತೆಯುತ ಉದ್ಯೋಗವನ್ನು ತಕ್ಷಣವೇ ಒದಗಿಸಬೇಕು ಎಂದು ಆಂದೋಲನ ಆಗ್ರಹಿಸಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X