ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಗಳನ್ನು ಮತ್ತಷ್ಟು ಉನ್ನತೀಕರಿಸಲು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ, ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಚಿಕ್ಕಮಗಳೂರು ನಗರದಲ್ಲಿ ಮಾಧ್ಯಮದವರೊಂದಿಗೆ ಶುಕ್ರವಾರ ಮಾತಾಡಿದರು.
ಬಿಎಸ್‌ಎನ್‌ಎಲ್ ಬಳಕೆದಾರರ ಕುಂದು ಕೊರತೆಗಳನ್ನು ಆಲಿಸಲು ಎಲ್ಲಾ ತಾಲೂಕಿನಲ್ಲೂ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿರುವ 217 ಮೊಬೈಲ್ ಟವರ್ ಗಳ ಪೈಕಿ 165 ಮೊಬೈಲ್ ಟವರ್ ಗಳು 4ಜಿ ನೆಟ್ವರ್ಕ್ ಗೆ ಉನ್ನತಿಕರಿಸಲಾಗಿದೆ. 6 ಮೊಬೈಲ್ ಟವರ್ ಗಳ 4ಜಿ ಉನ್ನತಿಕರಣ ಕಾಮಗಾರಿ ನಡೆಸಲಾಗುತ್ತಿದೆ.
ಹಾಗೆಯೇ, ಚಿಕ್ಕಮಗಳೂರು ಜಿಲ್ಲೆಯಲ್ಲಿ 2.56 ಲಕ್ಷ ಸಿಮ್ ಕಾರ್ಡ್ ಗಳು ಬಳಕೆಯಲ್ಲಿವೆ. ಜಿಲ್ಲೆಯಲ್ಲಿರುವ ಮತ್ತಷ್ಟು ಟವರ್ ಗಳನ್ನು ಉನ್ನತೀಕರಿಸಿ ಅದರ ಬ್ಯಾಟರಿಗಳು, ವಿದ್ಯುತ್ ಸಂಪರ್ಕಗಳನ್ನು ದುರಸ್ತಿಗೊಳಿಸಿದರೆ ಮತ್ತಷ್ಟು ಬಳಕೆದಾರರು ಜಿಲ್ಲೆಯಲ್ಲಿ ಹೆಚ್ಚಾಗುತ್ತಾರೆ ಎಂದು ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಎರಡು ಗುಂಪಿನ ಘರ್ಷಣೆ: ಪ್ರಕರಣ ದಾಖಲು
ಬಾಕಿ ಇರುವ 46 ಟವರ್ ಗಳಿಗೆ 4ಜಿ ಉಪಕರಣದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಜೊತೆಗೆ 78 ಟವರ್ ಗಳಿಗೆ ಮೊಬೈಲ್ ಬ್ಯಾಟರಿಗಳು ಮಂಜೂರಾಗಿದ್ದು ಇವುಗಳಲ್ಲಿ 51 ಬ್ಯಾಟರಿಗಳನ್ನು ಅಳವಡಿಕೆ ಮಾಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ 217 ಮೊಬೈಲ್ ಟವರ್ ಗಳನ್ನು ಯಾವುದೇ ಸಮಸ್ಯೆ ಇಲ್ಲದೇ ಕಾರ್ಯಾಚರಿಸುವಂತೆ ಮಾಡಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದರು
