ಯಾದಗಿರಿ ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನಾಶ ಮಾಡಲು ಯತ್ನಿಸಿದ್ದ ಆರೋಪ ಎದುರಿಸುತ್ತಿರುವ ಮೂವರು ಸಿಬ್ಬಂದಿಯಲ್ಲಿ ಇಬ್ಬರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಸುಶೀಲಾ ಬಿ. ಅವರು ಆದೇಶಿಸಿದ್ದಾರೆ.
ʼನಗರದ ನಗರಸಭೆಯ ಮೈನೋದ್ದಿನ್ ಮತ್ತು ಶಹಾಪುರ ನಗರಸಭೆಯ ಹಣಮಂತಪ್ಪ ಅವರನ್ನು ಅಮಾನತುಗೊಳಿಸಿದ್ದು, ಇನ್ನೊಬ್ಬ ಆರೋಪಿ ಮಾನಪ್ಪ ಬಡಿಗೇರ ಅವರ ಅಮಾನತಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಶಿಫಾರಸು ಮಾಡಲಾಗಿದೆʼ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೂವರು ಸಿಬ್ಬಂದಿ ಮೇಲೆ ನಗರಸಭೆ ಆಸ್ತಿಯನ್ನು ನಕಲಿ ದಾಖಲೆಗಳ ಮೂಲಕ ಬೇರೆಯವರ ಹೆಸರಲ್ಲಿ ಬದಲಾವಣೆ ಮಾಡಿದ ಆರೋಪ ಇತ್ತು. ಈ ಬಗ್ಗೆ ಯಾದಗಿರಿ ನಗರಸಭೆ ಆಯುಕ್ತರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ : ಯಾದಗಿರಿ | ರೈತ ಮುಖಂಡ ಚನ್ನಪ್ಪ ಆನೆಗುಂದಿ ಮೇಲಿನ ಪ್ರಕರಣ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ