ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಕಟ್ಟೆಪುರ ಗ್ರಾಮದ ಬಳಿ ಹೇಮಾವತಿ ನದಿಯಲ್ಲಿ, ಕಾಡಾನೆಗಳ ಗುಂಪು ನದಿಯಲ್ಲಿ ಆಟವಾಡುತ್ತಿರುವ ದೃಶ್ಯ ಶುಕ್ರವಾರ ಸ್ಥಳೀಯರ ಗಮನ ಸೆಳೆದಿದೆ.
ದೊಡ್ಡಬೆಟ್ಟ ಮೀಸಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿ, ನದಿಯಲ್ಲಿ ಕಾಡಾನೆಗಳು ಆಟವಾಡುತ್ತಿರುವ ಮನರಂಜನೆಯ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಹಾಗೆಯೇ, ಆನೆಗಳು ನದಿಯಲ್ಲಿ ಆಟವಾಡಿದ ನಂತರ, ಹೇಮಾವತಿ ನದಿಯನ್ನು ದಾಟಿ ಕಟ್ಟೆಪುರ ಅರಣ್ಯ ಪ್ರದೇಶಕ್ಕೆ ತೆರಳಿವೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು l ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಉನ್ನತೀಕರಿಸಲಾಗುತ್ತಿದೆ; ಕೋಟ ಶ್ರೀನಿವಾಸ್ ಪೂಜಾರಿ
ಈ ಘಟನೆ ಕುರಿತು ಅರಣ್ಯ ಇಲಾಖೆಯ ಇಟಿಎಫ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.