ಶಿವಮೊಗ್ಗದಲ್ಲಿ ಬಕ್ರಿದ್ ಹಬ್ಬದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ಈದ್ಗ ಮೈದಾನದಲ್ಲಿ ತ್ಯಾಗ, ಬಲಿದಾನದ ಸಂಕೇತ ಬಕ್ರಿದ್ ಹಬ್ಬವನ್ನು ಮುಸಲ್ಮಾನ್ ಬಾಂಧವರು ಇಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ನಂತರ ಪರಸ್ಪರ ಹಬ್ಬದ ಶುಭಾಶಯಗಳನ್ನ ವಿನಿಮಯ ಮಾಡಿಕೊಂಡಿದ್ದಾರೆ.

ರಂಜಾನ್ ಹಬ್ಬದ ನಂತರ ಬರುವ ಬಕ್ರಿದ್ ಹಬ್ಬ ಮುಸಲ್ಮಾನರಿಗೆ ಅತಿ ಶ್ರೇಷ್ಠವಾಗಿದೆ. 5000ಕ್ಕೂ ಹೆಚ್ಚು ಜನ ಈದ್ಗ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಾಗೆಯೇ ನಗರದ ಹಲವು ಭಾಗಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ.