ಕರ್ತವ್ಯ ಲೋಪ ಎಸಗಿದ್ದಾರೆ ಎಂಬ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಇಬ್ಬರು ಪಿಡಿಒಗಳನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಪಾಂಡ್ವೆ ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ನಾಗಾಲಾಪುರ ಗ್ರಾಮ ಪಂಚಾಯತಿ ಒಡಿಒ ಜ್ಯೋತಿ ಬಾಯಿ ಮತ್ತು ಉಟಕನೂರು ಗ್ರಾಮ ಪಂಚಾಯತಿಯ ಪಿಡಿಒ ಶ್ವೇತಾ ಕುಲಕರ್ಣಿ ಅಮಾನತುಗೊಂಡಿರುವ ಅಧಿಕಾರಿಗಳು.
ನಾಗಾಲಾಪುರ ಪಿಡಿಒ ಜ್ಯೋತಿ ಬಾಯಿ ಅವರು ಪಂಚತಂತ್ರ 2.0 ಮೂಲಕ ತಮ್ಮ ಮತ್ತು ಪಂಚಾಯಿತಿ ಸಿಬ್ಬಂದಿಗಳ ಹಾಜರಿಯನ್ನು ಹಾಕಿಲ್ಲ. ಹಾಜರಾತಿ ವಿಚಾರದಲ್ಲಿ ಬೇಜವಾಬ್ದಾರಿ ತೋರಿದ್ದು, ಕರ್ತವ್ಯ ಲೋಪ ಎಸಗಿದ್ದಾರೆ. ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಪಾಂಡ್ವೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಅಂತೆಯೇ, ಮಾನ್ವಿ ತಾಲೂಕಿನ ಉಟಕನೂರು ಗ್ರಾಮ ಪಂಚಾಯತಿ ಪಿಡಿಒ ಶ್ವೇತಾ ಕುಲಕರ್ಣಿ ಅವರು ಮೇಲಧಿಕಾರಿಗಳ ಆದೇಶವನ್ನು ಜಾರಿ ಮಾಡದೇ, ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಲೋಪ ಎಸಗಿದ್ದಾರೆ. ಮಾತ್ರವಲ್ಲದೆ, ಮೇಲಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಆರ್ಥಿಕ ವ್ಯವಹಾರ ನಡೆಸಿದ್ದಾರೆ. ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ಆರೋಪದ ಮೇಲೆ ಶ್ವೇತಾ ಕುಲಕರ್ಣಿ ಅವರನ್ನೂ ಅಮಾನತು ಮಾಡಲಾಗಿದೆ.