ಸ್ಟಾರ್‌ಲಿಂಕ್‌ನ ಕಾರ್ಯಾಚರಣೆಗಳಿಗೆ ಅವಕಾಶ ದೇಶದ ಹಿತಾಸಕ್ತಿಗಳಿಗೆ ಹಾನಿಕಾರಕ: ಸಿಪಿಐ(ಎಂ)

Date:

Advertisements

ಭಾರತ ಸರ್ಕಾರವು ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್‌ಗೆ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಅನುಮತಿ ನೀಡಿರುವುದನ್ನು ಸಿಪಿಐ(ಎಂ) ವಿರೋಧಿಸಿದೆ.

ಸ್ಟಾರ್‌ಲಿಂಕ್‌ಗೆ ನಮ್ಮ ದೇಶದಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದ ಸಂಪೂರ್ಣ ಪ್ರಕ್ರಿಯೆಯಲ್ಲಿ ಯಾವುದೇ ಪಾರದರ್ಶಕತೆ ಇಲ್ಲ. ಸ್ಟಾರ್‌ಲಿಂಕ್ ಒಂದು ವಿದೇಶಿ ಕಾರ್ಪೊರೇಷನ್‍ ಆಗಿದ್ದು, ಭಾರತದ ನಿರ್ಣಾಯಕ ಮೂಲರಚನೆಯನ್ನು ವಿದೇಶಿ ಕೈಗಳಿಗೆ ವರ್ಗಾಯಿಸುವುದು ಗಂಭೀರ ಭದ್ರತಾ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ನಮ್ಮ ದೂರಸಂಪರ್ಕ ವ್ಯವಸ್ಥೆಯ ಒಳಕ್ಕೆ ಮತ್ತು ನಮ್ಮ ಆಯಕಟ್ಟಿನ ಸಂವಹನಗಳ ಒಳಕ್ಕೆ ಕೂಡ ಯುಎಸ್ ಏಜೆನ್ಸಿಗಳಿಗೆ ಹಿಂಬಾಗಿಲನ್ನು ಒದಗಿಸುತ್ತದೆ.

ಸ್ಟಾರ್‌ಲಿಂಕ್‌ಗೆ ಒಮ್ಮೆ ಹಂಚಿಕೆಯಾದ ಉಪಗ್ರಹ ತಾಣಗಳ ಸಂಖ್ಯೆಯನ್ನು, ವಿಶೇಷವಾಗಿ ಕೆಳಗಣ ಭೂ ಕಕ್ಷೆಯ ತಾಣಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಇದು ನಮ್ಮ ವಿರಳ ಬಾಹ್ಯಾಕಾಶ ಸಂಪನ್ಮೂಲಗಳನ್ನು ವಿದೇಶಿ ಸಂಸ್ಥೆಗಳಿಗೆ ಬಿಟ್ಟುಕೊಡುತ್ತಿದೆ, ಈ ಪ್ರಕ್ರಿಯೆಯಲ್ಲಿ ನಮ್ಮ ದೇಶದ ಹಿತಾಸಕ್ತಿಗಳನ್ನು ಬಲಿಕೊಡುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮೋದಿ ಶರಣಾಗಿದ್ದಾರೆ’ ಎಂಬ ರಾಹುಲ್ ಹೇಳಿಕೆಯು ಹಲವು ಪ್ರಶ್ನೆಗಳನ್ನು ಎತ್ತುತ್ತದೆ

ನಮ್ಮ ದೇಶದ ಸ್ವಾವಲಂಬಿ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ನಿಜವಾಗಿಯೂ ಆಸಕ್ತಿ ಹೊಂದಿದ್ದರೆ, ಅದು ಇಸ್ರೋ ಸೇವೆಗಳನ್ನು ಬಳಸಬಹುದಿತ್ತು. ಭಾರತ, ವಿಶೇಷವಾಗಿ ದೂರಸಂಪರ್ಕ ಇಲಾಖೆ (DoT), ಸಿ-ಡಾಟ್( C-DOT) ಉಪಗ್ರಹ ಸಂವಹನ ವಲಯಕ್ಕೆ ಅಗತ್ಯವಾದ ಉಪಕರಣಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ. ಈ ಕ್ರಮಗಳು ಭಾರತೀಯ ಸಾರ್ವಜನಿಕ ವಲಯವನ್ನು ಬಲಪಡಿಸುತ್ತಿದ್ದವು ಮತ್ತು ನಮ್ಮ ಭದ್ರತೆ ಮತ್ತು ಡಿಜಿಟಲ್ ಸಾರ್ವಭೌಮತ್ವವನ್ನು ಸಹ ರಕ್ಷಿಸುತ್ತಿದ್ದವು.

ಇಡೀ ಒಪ್ಪಂದವನ್ನು ನಿಗೂಢತೆ ಆವರಿಸಿಕೊಂಡಿದೆ. ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(TRAI) ಕೇವಲ ಶೇ. 4 ರಷ್ಟು ಸ್ಪೆಕ್ಟ್ರಮ್ ಬಳಕೆಯ ಶುಲ್ಕವನ್ನು ವಿಧಿಸುತ್ತಿದೆ ಮತ್ತು ಯಾವುದೇ ಮುಂಗಡ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ ಎಂದು ವರದಿಯಾಗಿದೆ. ಇದು ನಮ್ಮ ಖಜಾನೆಗೆ ಭಾರಿ ನಷ್ಟವನ್ನುಂಟುಮಾಡುತ್ತದೆ ಮತ್ತು ನಮ್ಮ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ. ಭಾರತೀಯ ಬಾಹ್ಯಾಕಾಶ ನಿಯಂತ್ರಕ, ಇನ್-ಸ್ಪೇಸ್‌ನಿಂದ ಅನುಮತಿಯ ಸ್ಥಿತಿ ಮತ್ತು ವಿವರಗಳನ್ನು ಸಹ ಇನ್ನೂ ಬಹಿರಂಗಪಡಿಸಲಾಗಿಲ್ಲ.

ಸ್ಟಾರ್‌ಲಿಂಕ್‌ನ ಪ್ರವೇಶ ಮತ್ತು ಅಂಬಾನಿಯವರ ರಿಲಯನ್ಸ್ ಜಿಯೋ ಮತ್ತು ಮಿತ್ತಲ್ ಅವರ ಭಾರತಿ ಏರ್‌ಟೆಲ್‌ನೊಂದಿಗಿನ ಅದರ ಪಾಲುದಾರಿಕೆಯು ಒಂದು ವರ್ಚುವಲ್ ಉಭಯತ್ರರ ಪ್ರಾಬಲ್ಯವನ್ನು ಸೃಷ್ಟಿಸಲಿದೆ, ಇದರಿಂದಾಗಿ ಸಾರ್ವಜನಿಕ ವಲಯದ ಬಿಎಸ್‍ಎನ್‍ಎಲ್‍ ಸ್ಪರ್ಧಿಸುವುದು ತುಂಬಾ ಕಷ್ಟಕರವಾಗುತ್ತದೆ. ಇದು ದೇಶದ ಬಹುತೇಕ ಎಲ್ಲ ಭಾಗಗಳಿಗೆ ಅಗ್ಗದ ದೂರಸಂಪರ್ಕ ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುವ ಬಿಎಸ್‍ಎನ್‍ಎಲ್‍ ನ್ನು ಮುಗಿಸಲು ಸರ್ಕಾರದ ಮತ್ತೊಂದು ಪ್ರಯತ್ನವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಸ್ಟಾರ್‌ಲಿಂಕ್‌ನ ಕಾರ್ಯಾಚರಣೆಗಳಿಗೆ ಅವಕಾಶ ನೀಡುವುದರಿಂದ ದೀರ್ಘಾವಧಿಯಲ್ಲಿ ದೇಶದ ಹಿತಾಸಕ್ತಿಗಳಿಗೆ ಹಾನಿಯಾಗಲಿದೆ, ಸರ್ಕಾರವು ತನ್ನ ನಿರ್ಧಾರವನ್ನು ತಕ್ಷಣವೇ ರದ್ದುಗೊಳಿಸಬೇಕೆಂದು ಆಗ್ರಹಪಡಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X