ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಇದರಿಂದ ನದಿಗಳಲ್ಲಿನ ನೀರಿನ ಹರಿವು ಹೆಚ್ಚಾಗಿದ್ದು, ಜಲಾಶಯಗಳ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ ಜಿಲ್ಲೆಯಲ್ಲಿ ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ ಹಾಗೂ ಮಲಪ್ರಭಾ ನದಿ ನೀರಿನ ಹರಿವು ಹೆಚ್ಚಿದೆ. ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ನ ರಾಜಾ ಲಖಮಗೌಡ ಜಲಾಶಯದಲ್ಲಿ ಮಂಗಳವಾರ ಒಳಹರಿವು 8,997 ಕ್ಯೂಸೆಕ್ ಇತ್ತು. ಬುಧವಾರ ಬೆಳಗ್ಗೆ 13,753 ಕ್ಯೂಸೆಕ್‌ಗೆ ಏರಿಕೆಯಾಗಿದೆ.
- ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿಯ ರೇಣುಕಾಸಾಗರ ಜಲಾಶಯದಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. 2,079.50 ಅಡಿ ಗರಿಷ್ಠ ಮಟ್ಟದ ಈ ಜಲಾಶಯದಲ್ಲಿ ಬುಧವಾರ 2,044.10 ಅಡಿಯಷ್ಟು ನೀರು ಏರಿಕೆಯಾಗಿದೆ.
- ಆಲಮಟ್ಟಿ ಜಲಾಶಯದ ಗರಿಷ್ಠ ನೀರಿನ ಮಟ್ಟ 519.6 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 123.08 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 26.93 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 85.20 ಟಿಎಂಸಿ ಇತ್ತು. 18,270 ಕ್ಯೂಸೆಕ್ ಒಳಹರಿವು ಇದ್ದು, 561 ಕ್ಯೂಸೆಕ್ ಹೊರಹರಿವು ಇದೆ.
- ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 497.71 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 105.79 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 10.95 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 96.84 ಟಿಎಂಸಿ ಇತ್ತು. 11425 ಕ್ಯೂಸೆಕ್ ಒಳಹರಿವು ಇದ್ದು, 323 ಕ್ಯೂಸೆಕ್ ಹೊರಹರಿವು ಇದೆ.
- ಮಲಫ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 633.8 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 37.73 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 6.85 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 22.32 ಟಿಎಂಸಿ ಇತ್ತು. 657 ಕ್ಯೂಸೆಕ್ ಒಳಹರಿವು ಇದ್ದು, 194 ಕ್ಯೂಸೆಕ್ ಹೊರಹರಿವು ಇದೆ.
- ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಮಟ್ಟ 554.44 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 151.75 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 24.94 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 85.43 ಟಿಎಂಸಿ ಇತ್ತು. 12229 ಕ್ಯೂಸೆಕ್ ಒಳಹರಿವು ಇದ್ದು, 1549 ಕ್ಯೂಸೆಕ್ ಹೊರಹರಿವು ಇದೆ.
- ಕಬಿನಿ ಜಲಾಶಯದ ಗರಿಷ್ಠ ನೀರಿನ ಮಟ್ಟ 696.13 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 19.52 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 11.95 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 18.59 ಟಿಎಂಸಿ ಇತ್ತು. 1864 ಕ್ಯೂಸೆಕ್ ಒಳಹರಿವು ಇದ್ದು, 800 ಕ್ಯೂಸೆಕ್ ಹೊರಹರಿವು ಇದೆ.
- ಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 657.73 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 27.87 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 66.94 ಟಿಎಂಸಿ ಇತ್ತು. 835 ಕ್ಯೂಸೆಕ್ ಒಳಹರಿವು ಇದ್ದು, 164 ಕ್ಯೂಸೆಕ್ ಹೊರಹರಿವು ಇದೆ.
- ಘಟಪ್ರಭಾ ಜಲಾಶಯದ ಗರಿಷ್ಠ ನೀರಿನ ಮಟ್ಟ 662.91 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 51 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 8.10 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 29.95 ಟಿಎಂಸಿ ಇತ್ತು. 8997 ಕ್ಯೂಸೆಕ್ ಒಳಹರಿವು ಇದ್ದು, 94 ಕ್ಯೂಸೆಕ್ ಹೊರಹರಿವು ಇದೆ.
- ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 890.58 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 37.1 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 16.30 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 35.27 ಟಿಎಂಸಿ ಇತ್ತು. 1732 ಕ್ಯೂಸೆಕ್ ಒಳಹರಿವು ಇದ್ದು, 200 ಕ್ಯೂಸೆಕ್ ಹೊರಹರಿವು ಇದೆ.
- ವರಾಹಿ ಜಲಾಶಯದ ಗರಿಷ್ಠ ನೀರಿನ ಮಟ್ಟ 594.36 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 31.1 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 5.02 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 13.12 ಟಿಎಂಸಿ ಇತ್ತು. 2947 ಕ್ಯೂಸೆಕ್ ಒಳಹರಿವು ಇದ್ದು, 218.24 ಕ್ಯೂಸೆಕ್ ಹೊರಹರಿವು ಇದೆ.
- ಹಾರಂಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 871.38 ಮೀ ಇದ್ದು, ಒಟ್ಟು ನೀರಿನ ಸಾಮರ್ಥ್ಯ 8.5 ಟಿಎಂಸಿ ಇದೆ. ಇಂದಿನ ನೀರಿನ ಮಟ್ಟ 4.97 ಟಿಎಂಸಿ ಇದೆ. ಕಳೆದ ವರ್ಷ ನೀರಿನ ಮಟ್ಟ 6.94 ಟಿಎಂಸಿ ಇತ್ತು. 2811 ಕ್ಯೂಸೆಕ್ ಒಳಹರಿವು ಇದ್ದು, 50 ಕ್ಯೂಸೆಕ್ ಹೊರಹರಿವು ಇದೆ.