ಮಧ್ಯಾಹ್ನ ಸುರಿದ ಭಾರೀ ಮಳೆ ಹೊಡೆತಕ್ಕೆ ಗದಗ ಜಿಲ್ಲೆಯ ಜನ ನಲುಗಿ ಹೋಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ಅಂಗಡಿ, ಬೇಕರಿಗಳಿಗೆ ನೀರು ನುಗ್ಗಿ ವ್ಯಾಪಾರಿಗಳು ಪರದಾಡಿದ್ದಾರೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಇಂದು ಗಾಳಿ ಸಹಿತ ಭಾರೀ ಮಳೆ ಆಗಿದೆ. ವಾಕರಸಾಸಂ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಮೇಲೆ ಹರಿದ ನೀರು ಅಯ್ಯಂಗಾರ್ ಬೇಕರಿ ಹಾಗೂ ಅಂಗಡಿಗಳಿಗೆ ನುಗ್ಗಿದೆ.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹೆದ್ದಾರಿಯಲ್ಲಿ ವಾಕರಸಾಸಂ ಬಸ್ ಅಪಘಾತ: 23 ಜನರು ಗಾಯ
ಗಾಳಿ ಸಹಿತ ಮಳೆ ಸುರಿದ ಪರಿಣಾಮ ಜನರು ಪರದಾಟ ನಡೆಸಿದ್ದು, ಬೇಕರಿಗಳಲ್ಲಿ ನುಗ್ಗಿದ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.
ವರದಿ : ಮಲ್ಲೇಶ ಮಣ್ಣಮ್ಮನವರ ಸಿಟಿಜನ್ ಜರ್ನಲಿಸ್ಟ್ ಲಕ್ಷ್ಮೇಶ್ವರ