ರಾಜಸ್ಥಾನದಿಂದ ವ್ಯಾಪಾರ ವ್ಯವಹಾರಕ್ಕೆ ಆಗಮಿಸಿದ ಪ್ರಜೆಗಳಿಗೆ ಕರ್ನಾಟಕ ಕರ್ಮ ಭೂಮಿ ಅನಿಸಿದೆ ಎಂದು ರಾಜಸ್ಥಾನ ಸರ್ಕಾರ ಕಾನೂನು ಮತ್ತು ಸಂಸದೀಯ ಹಾಗೂ ಶಿಕ್ಷಣ ಸಚಿವ ಜೋಗರಾಮ್ ಪಟೇಲ್ ತಿಳಿಸಿದರು.
ಗುಬ್ಬಿ ಪಟ್ಟಣಕ್ಕೆ ಭೇಟಿ ನೀಡಿ ರಾಜಸ್ಥಾನ ಮರ್ಜೆಂಟ್ಸ್ ಅಸೋಶೇಷನ್ ವರ್ತಕರ ಜೊತೆ ಸಂವಾದ ನಡೆಸಿ ಮಾತನಾಡಿದ ಅವರು ಹಾಲಿನಲ್ಲಿ ನೀರು ಬೆರೆತರೆ ಹೇಗೆ ಬೇರ್ಪಡಿಸಲು ಸಾಧ್ಯವಿಲ್ಲವೂ ಅದೇ ರೀತಿ ಕನ್ನಡಿಗರ ಜೊತೆ ಬೆರೆತಿದ್ದಾರೆ. ಇಲ್ಲಿನ ಸಂಸ್ಕೃತಿ ಪರಂಪರೆ, ಪದ್ಧತಿಗೆ ಹೊಂದಿಕೊಂಡು ಇಲ್ಲಿಯೇ ಆಸ್ತಿಪಾಸ್ತಿಗಳನ್ನು ಸಂಪಾದಿಸಿ ಜೀವನ ಪರ್ಯಂತ ಇಲ್ಲಿನ ನಾಗರೀಕರಾಗಿ ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಪಪಂ ಸದಸ್ಯ ಜಿ.ಆರ್.ಶಿವಕುಮಾರ್ ಮಾತನಾಡಿ ಕರ್ನಾಟಕದಲ್ಲಿ ಜೀವನ ನಡೆಸಲು ವ್ಯಾಪಾರಕ್ಕೆ ಬಂದ ರಾಜಸ್ಥಾನದ ಮಂದಿಗೆ ಸ್ಥಳಾವಕಾಶ ನೀಡಿ ಅವರೊಂದಿಗೆ ವ್ಯವಹಾರ ಕೂಡಾ ನಡೆಸಿ ಸಹಕರಿಸಿದ ಕನ್ನಡಿಗರು ಅವರನ್ನು ಹೊರ ರಾಜ್ಯದವರು ಎಂಬ ಬೇದ ಭಾವ ಎಂದೂ ತೋರಿಲ್ಲ. ಈ ಜೊತೆಗೆ ನಮ್ಮಲ್ಲಿಯ ದೇವಾಲಯಗಳಿಗೆ ಆರ್ಥಿಕ ನೆರವು, ನಮ್ಮ ಹಬ್ಬ ಜಾತ್ರೆಯಲ್ಲಿ ಆಸುಹೊಕ್ಕಾದ ಇವರುಗಳು ನಮ್ಮಲ್ಲಿ ಸೇಟುಗಳೆಂದು ಕರೆಯಲ್ಪಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಭವರ್ ಲಾಲ್, ಗಣಪತ್ ರಾಮ್, ಪುಕಾರಾಮ್, ಕಾಂತಿಲಾಲ್, ಶಿವು ಇತರರು ಇದ್ದರು.