ತುಮಕೂರು ಜಿಲ್ಲೆಗೆ ಹಾಗೂ ತಾಲ್ಲೂಕಿಗೆ ಅವಶ್ಯಕತೆ ಇರುವಂತಹ ನೀರನ್ನ ಯಾರು ಸಹ ತಡೆಯಲು ಸಾಧ್ಯವಿಲ್ಲ. ನೀರಾವರಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ರಾಜಕಾರಣಕ್ಕೆ ಬಳಸಿದರೆ ಹೋರಾಟ ದಿಕ್ಕುತಪ್ಪುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಶಂಕರಾನಂದ ತಿಳಿಸಿದರು.
ಗುಬ್ಬಿ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಗುಬ್ಬಿ ಶಾಸಕರ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನ ಕಾಂಗ್ರೆಸ್ ಕಾರ್ಯಕರ್ತರು, ಶಾಸಕರ ಅಭಿಮಾನಿಗಳಿಗೆ ಸಹಿಸಲು ಸಾಧ್ಯವಿಲ್ಲ. ದಿಲೀಪ್ ಕುಮಾರ್ ಅವರು ಮುಂದಿನ ದಿನದಲ್ಲಿ ಎಂಎಲ್ಎ ಕನಸು ಕಾಣುತ್ತಿರುವವರು. ಜನರು ಸೂಕ್ಷ್ಮವಾಗಿ ಗಮನಿಸುತ್ತಾರೆ ಸುಸಂಸ್ಕೃತವಾಗಿ, ಮುತ್ಸದ್ದಿತನದ ಮಾತುಗಳನ್ನಾಡುವ ಕಲೆ ಮೊದಲು ಕಲಿಯಿರಿ ಎಂದು ಬಿಜೆಪಿ ದಿಲೀಪ್ ಕುಮಾರ್ ಅವರಿಗೆ ಸಲಹೆ ನೀಡಿದರು.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆ ಬಿಜೆಪಿ, ಜೆಡಿಎಸ್ ಶಾಸಕರು ಇದ್ದಾರೆ. ಆದರೆ ಅವರು ಹೋರಾಟವನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗಲಿ. ಅದನ್ನು ಬಿಟ್ಟು ಜನತೆಯನ್ನು ತಪ್ಪು ದಾರಿಗೆ ಎಳೆಯಬೇಡಿ ವಸ್ತು ಸ್ಥಿತಿಯ ಬಗ್ಗೆ ಅರಿವು ಮೂಡಿಸಿ. ತಾಲ್ಲೂಕಿನ ರೈತರನ್ನು ಶಾಸಕರ ಮೇಲೆ ಎತ್ತಿ ಕಟ್ಟುವ ಕೆಲಸ ಮಾಡಬೇಡಿ. ಆಡಳಿತಾರೂಢ ಶಾಸಕರು ಎಲ್ಲಿ ಮಾತನಾಡಬೇಕು ಅಲ್ಲಿ ಮಾತನಾಡುತ್ತಾರೆ. ಸರ್ಕಾರದೊಂದಿಗೆ ಚರ್ಚಿಸುತ್ತಾರೆ ಎಂದರು.
ಈ ಕಾಮಗಾರಿ ಬಗ್ಗೆ ವಿರೋಧ ಈಗಾಗಲೇ ವ್ಯಕ್ತಪಡಿಸಿ ಉಪ ಮುಖ್ಯಮಂತ್ರಿಗಳ ಜೊತೆ ಶಾಸಕರು ಮಾತನಾಡಿದ್ದಾರೆ. ತಾಲ್ಲೂಕಿನ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಪಾಲಿನ ನೀರು ಬೇರೆಡೆಗೆ ಹರಿಸುವ ಈ ಕಾಮಗಾರಿ ಬಗ್ಗೆ ಸಂಪೂರ್ಣವಾಗಿ ಶಾಸಕರ ವಿರೋಧ ವ್ಯಕ್ತಪಡಿಸಿ
ಯಾವುದೇ ಕಾರಣಕ್ಕೋ ರಾಮನಗರ ಭಾಗಕ್ಕೆ ನೀರನ್ನು ಬಿಡುವ ಪ್ರಶ್ನೆಯೇ ಇಲ್ಲ. ಮಾಗಡಿಗೆ ಮಾತ್ರ 0.6 ಟಿಎಂಸಿ ನೀರು ಹಂಚಿಕೆಯಾಗಿದೆ. ಅಲ್ಲದೆ ಕುಣಿಗಲ್ ತಾಲ್ಲೂಕಿಗೆ 3.06 ಹಂಚಿಕೆಯಾಗಿದೆ. ಈ ವಿಚಾರದಲ್ಲಿ ಅವಲೋಕನ ಮಾಡಬೇಕಿದೆ. ಕುಣಿಗಲ್ ನಲ್ಲಿ ನಾಲೆ ಅಗಲೀಕರಣ ಕಾಮಗಾರಿಯೇ ನಡೆದಿಲ್ಲ. ಮೊದಲು ಮುಖ್ಯ ನಾಲೆಯ ಕಾಮಗಾರಿ ಮಾಡಿಕೊಂಡು ನೀರು ಹರಿಸಿಕೊಳ್ಳಿ. ಪೈಪ್ ಲೈನ್ ಬಗ್ಗೆ ಕೈ ಬಿಡಿ ಎಂದು ಕುಣಿಗಲ್ ಶಾಸಕ ರಂಗನಾಥ್ ಅವರಿಗೂ ನಮ್ಮ ಶಾಸಕರು ತಿಳಿಸಿದ್ದಾರೆ ಎಂದು ವಿವರಿಸಿದರು.