ಅನ್ಯ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಪರಿಣಾಮ ಪತಿ, ಮಕ್ಕಳು ಹಾಗೂ ಅತ್ತೆ-ಮಾವನನ್ನು ವಿಷ ಹಾಕಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ, ಮಹಿಳೆಯನ್ನು ಪೊಲೀಸರು ಬಂಧಿಸಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನಲ್ಲಿ ಕೆರಳೂರು ಗ್ರಾಮದಲ್ಲಿ ನಡೆದಿದೆ.
ಕೆರಳೂರು ಗ್ರಾಮದ ಬಂಧಿತ ಆರೋಪಿ ಮಹಿಳೆ ಚೈತ್ರ (33)l, ಹನ್ನೊಂದು ವರ್ಷಗಳ ಹಿಂದೆ ಗಜೇಂದ್ರ ಎಂಬವರ ಜೊತೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ, ಕಳೆದ ಮೂರು ವರ್ಷಗಳಿಂದ ಸಣ್ಣಪುಟ್ಟ ವಿಷಯಗಳಿಗೆ ಗಂಡನೊಂದಿಗೆ ಜಗಳವಾಡುತ್ತಿದ್ದ ಚೈತ್ರ, ಈ ನಡುವೆ ಪುನೀತ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು.

ಈ ಕುರಿತು ಗಂಡ, ಚೈತ್ರಳ ತಂದೆ-ತಾಯಿಗೆ ಮಾಹಿತಿ ತಿಳಿಸಿದ್ದರು. ಕುಟುಂಬಸ್ಥರ ರಾಜಿ ಪಂಚಾಯಿತಿಯ ನಂತರ ದಂಪತಿ ಕೆಲಕಾಲ ಚನ್ನಾಗಿ ಸಂಸಾರ ನಡೆಸುತ್ತಿದ್ದರು. ಮೊದಲಿನ ಹಾಗೆಯೇ, ಚೈತ್ರ ಮತ್ತೊರ್ವ ವ್ಯಕ್ತಿಯ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು,
ಈ ವಿಷಯ ಕುಟುಂಬಸ್ಥರಿಗೆ ತಿಳಿಯುವ ಮೊದಲೇ, ತನ್ನ ಸಂಬಂಧಕ್ಕೆ ಪತಿ, ಮಕ್ಕಳು ಹಾಗೂ ಅತ್ತೆ-ಮಾವ ಅಡ್ಡಿಯಾಗಬಹುದೆಂಬ ಅನುಮಾನದಿಂದ ಚೈತ್ರ, ಎಲ್ಲರನ್ನೂ ಸಾಮೂಹಿಕವಾಗಿ ಕೊಲೆ ಮಾಡಲು ಸಂಚು ರೂಪಿಸಿ, ಅಕ್ರಮ ಸಂಬಂಧ ಹೊಂದಿದ್ದ ಶಿವು ಎಂಬ ವ್ಯಕ್ತಿಯ ಸಹಕಾರದೊಂದಿಗೆ ಊಟ-ತಿಂಡಿಗಳಲ್ಲಿ ವಿಷಕಾರಿ ಮಾತ್ರೆಗಳನ್ನು ಬೆರೆಸುತ್ತಿದ್ದಳು.
ಇದನ್ನೂ ಓದಿದ್ದೀರಾ?ಹಾಸನ l ಹೇಮಾವತಿ ನದಿಯಲ್ಲಿ ಕಾಡಾನೆಗಳ ಗುಂಪು
ಈ ವಿಷಯ ತಿಳಿದ ಚೈತ್ರಳ ಗಂಡ ಗಜೇಂದ್ರ, ಬೇಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಘಟನೆ ಕುರಿತು ಅಧಿಕಾರಿಗಳು ಚೈತ್ರ ಹಾಗೂ ಪ್ರಿಯಕರ ಶಿವು ವಿರುದ್ಧ ತನಿಖೆ ಆರಂಭಿಸಿದ್ದಾರೆ. ಸುತ್ತಮುತ್ತ ಗ್ರಾಮಸ್ಥರಿಗೆ ಆತಂಕ ಸೃಷ್ಟಿಯಾಗಿದೆ.
